ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆ

0
13
loading...

ಹುನಗುಂದ: ಇಲ್ಲಿನ ವಕೀಲರ ಸಂಘದ 2 ವರ್ಷದ ಅವಧಿಗೆ ಪದಾಧಿಕಾರಿಗಳ ಚುನಾವಣೆಯು ದಿ. 30 ರಂದು ಜರುಗಿ ವಕೀಲರ ಸಂಘದ ಅಧ್ಯಕ್ಷರಾಗಿ ಎಂ.ಎಸ್‌.ಪಾಟೀಲ ಉಪಾಧ್ಯಕ್ಷರಾಗಿ ಬಿ.ಎ.ಆವಟಿ ಕಾರ್ಯದರ್ಶಿಯಾಗಿ ಎಸ್‌.ಕೆ ಸಾರಂಗಮಠ, ಸಹಕಾರ್ಯದರ್ಶಿಯಾಗಿ ವ್ಹಿ.ಎಸ್‌.ಗೌಡರ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಎಲ್‌.ವಾಯ್‌ ಜಡಿ ಘೋಷಿಸಿದ್ದಾರೆ.

ವಕೀಲರ ಸಂಘದ ಚುನಾವಣೆಯ ಮತ ಎಣೆಕೆಯು ಅತೀ ಕುತುಹಲಕಾರಿಯಾಗಿ ನಡೆದು ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾದ ಪಾಟೀಲ ಹಾಗೂ ಹುನಕುಂಟಿ ಇವರಿಗೆ 64 ಸಮಾನ ಮತಗಳು ಬಂದು ಚೀಟಿ ಎತ್ತುವ ಮೂಲಕ ಎಂ.ಎಸ್‌.ಪಾಟೀಲ ಮೊದಲ ಒಂದು ವರ್ಷಕ್ಕೆ ಆಯ್ಕೆಯಾಗಿದ್ದು,ಎರಡನೆಯ ಅವಧಿಗೆ ಎಸ್‌.ಎನ್‌.ಹುನಕುಂಟಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಆಯ್ಕೆಯಾದ ಬಿ.ಎ.ಆವಟಿ 108 ಮತಗಳನ್ನು ಪಡೆದು ಜಯಶೀಲರಾದರು.ಕಾರ್ಯದರ್ಶಿಯಾಗಿ ಎಸ್‌.ಕೆ ಸಾರಂಗಮಠ ಅವಿರೋಧವಾಗಿ ಆಯ್ಕೆಯಾಗಿದ್ದು,ಸಹಕಾರ್ಯದರ್ಶಿ ಸ್ಥಾನದ ಅಭ್ಯರ್ಥಿಗಳಾದ ವ್ಹಿ.ಎಸ್‌,ಗೌಡರ ಹಾಗೂ ಎಂ.ಎನ್‌.ಭಮ್ಮಸಾಗರ ಇವರಿಗೆ 64 ಸಮಾನ ಮತಗಳು ಬಂದು ಮೊದಲ ಅವಧಿಗೆ ಗೌಡರ ಎರಡನೆಯ ಅವಧಿಗೆ ಭಮ್ಮಸಾಗರ ಆಯ್ಕೆಯಾಗಿದ್ದಾರೆ, ಈ ಸಂದರ್ಭದಲ್ಲಿ ವಕೀಲರಾದ ಎಂ.ಎಚ್‌.ಮಳ್ಳಿ,ಬಿ.ಎ.ಶಿವಣಗಿ,ವ್ಹಿ.ಎಸ್‌.ದಾದ್ಮಿ,ಎಸ್‌.ಎನ್‌.ಪಾಟೀಲ,ಎಂ.ಆಯ್‌.ಕತ್ತಿ,ಎಂ.ಬಿ.ದೇಶಪಾಂಡೆ,ಸಿ.ಬಿ.ಸಜ್ಜನ,ವ್ಹಿ.ಬಿ ದೇಶಪಾಂಡೆ,ವ್ಹಿ.ಎಸ್‌.ಕಪನೂರ ಇನ್ನೂ ಅನೇಕರು ಇದ್ದರು. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಮಾಲೆ ಹಾಕಿ.ಸಿಹಿ ಹಂಚಿ ಅಭಿನಂದಿಸಿದರು. 30ಎಚ್‌.ಎನ್‌.ಡಿ1,ಪೋಟೋ-ಅಧ್ಯಕ್ಷರು ಎಂ.ಎಸ್‌.ಪಾಟೀಲ ಹಾಗೂ ಕಾರ್ಯದರ್ಶಿ ಸಾರಂಗಮಠ

loading...

LEAVE A REPLY

Please enter your comment!
Please enter your name here