ವಸತಿ ನಿಲಯಕ್ಕೆ ಅಧಿಕಾರಿಗಳ ಭೇಟಿ: ವಾರ್ಡನ್‌ಗೆ ಎಚ್ಚರಿಕೆ

0
21
loading...

ಲೋಕಾಪೂರ : ಜಿಲ್ಲಾ ಪಂಚಾಯತ ಬಾಗಲಕೋಟ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶದ ಮೇರೆಗೆ ಗ್ರಾಮದಲ್ಲಿ ಡಿ.ದೇವರಾಜ ಅರಸ್‌ ಹಿಂದುಳಿದ ವರ್ಗಗಳ ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯಕ್ಕೆ ತಾಲೂಕಾ ಆರೋಗ್ಯಧಿಕಾರಿ ಡಾ. ವೆಂಕಟೇಶ ಮಲಘಾಣ ಧೀಡಿರನೆ ವಸತಿ ನಿಲಯಕ್ಕೆ ಭೇಟಿ ನೀಡಿ ಅಲ್ಲಿನ ಅವ್ಯಸ್ಥೆಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ನಿರ್ಲಕ್ಷ್ಯ ವಹಿಸಿದ ವಾರ್ಡನ್‌ಗೆ ಎಚ್ಚರಿಕೆ ನೀಡಿದರು.

ವಸತಿ ನಿಲಯದ ಅಡುಗೆ ಕೋಣಿ, ವಸತಿ ನಿಲಯದಲ್ಲಿ ಸ್ವಚ್ಛತೆ ಇಲ್ಲ ಅನುಪಯುಕ್ತ ಉಪಕರಣಗಳನ್ನು ಬೇಕಾ ಬಿಟ್ಟಿಯಾಗಿ ಎಸೆಯಲಾಗಿದೆ. ಬೇಳೆ ಕಾಳು ಉಗ್ರಣ ಸ್ವಚ್ಚವಾಗಿ ಇಟ್ಟುಕೊಂಡಿಲ್ಲ, ವಿದ್ಯಾರ್ಥಿಗಳಿಗೆ ಸರಿಯಾಗಿ ಊಟ ಸಿಗುತ್ತಿಲ್ಲ, ಒಟ್ಟಾರೆಯಾಗಿ ಈ ವಸತಿ ನಿಲಯ ನಿರ್ವಹಣೆಯಲ್ಲಿ ಸಂಪೂರ್ಣ ನಿರ್ಲಕ್ಷ್ಯತೆ ಮಾಡಲಾಗಿದೆ ಎಂದು ಹೇಳಿದರು.

ಅಡುಗೆ ಕೋಣಿ, ಶೌಚಾಲಯ, ಸೋಲಾರ, ಸ್ನಾನಗೃಹ ವೀಕ್ಷಿಸಿ ಅವುಗಳನ್ನು ದುರಸ್ತಿಗೊಳಿಸಿ ಕೊಡುವಂತೆ ಪ್ರಸ್ತಾವನೆಯನ್ನು ಸಂಭಂದಿಸಿದ ಅಧಿಕಾರಿಗಳಿಗೆ ಸಲ್ಲಿಸುವಂತೆ ಸೂಚಿಸಿ ಹಳೆ ಮಂಚಗಳನ್ನು ಸ್ಥಳಾಂತರಿಸಬೇಕು ವಸತಿ ನಿಲಯದ ಕಿಟಕಿ ಬಾಗಿಲು ದುರಸ್ತಿಗೊಳಿಸುವ ಜೊತೆಗೆ ಸೊಳ್ಳೆಯ ಜಾಲರಿ ಹಾಕಿಸಬೇಕು ಎಂದು ಹೇಳಿದರು. ಭೇಟಿ ವೇಳೆ ರವೀಂದ್ರ ಹೊಸಗೌಡರ, ಅಬುಬಕರ ಕೊಲೂರ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.

loading...

LEAVE A REPLY

Please enter your comment!
Please enter your name here