ವಿಜೃಂಭಣೆಯ ಮಹಮ್ಮದ ಪೈಗಂಬರ ಜಯಂತಿ

0
51
loading...

ಕನ್ನಡಮ್ಮ ಸುದ್ದಿ-ಮೂಡಲಗಿ: ಪ್ರವಾದಿ ಮಹಮ್ಮದ ಪೈಗಂಬರರು ಮಾನವ ಕುಲದ ಏಳ್ಗೆಗಾಗಿ ಶ್ರಮಿಸಿದ ಮಹಾನ್‌ ದೈವೀ ಪುರುಷರು. ಅವರ ತತ್ವ ಆದರ್ಶಗಳನ್ನು ಆದರಿಸಿ ಅನುಸರಿಸಿ ಸನ್ಮಾರ್ಗದಲ್ಲಿ ನಡೆಯುವುದೇ ನಿಜವಾದ ಮಾನವ ಧರ್ಮ ಎಂದು ಧರ್ಮ ಗುರುಗಳಾದ ಮೌಲಾನಾ ಮಹ್ಮದಶಫೀಕ ಆಜ್ಮಿ ಹೇಳಿದರು.

ಸ್ಥಳೀಯ ಜಾಮೀಯಾ ಮಸೀದಿ ಆವರಣದಲ್ಲಿ ಬಿ.ಟಿ.ಟಿ ಕಮೀಟಿ ಹಾಗೂ ಸಮಸ್ತ ಸುನ್ನಿ ಮುಸ್ಲಿಂ ಬಾಂಧವರು ಹಮ್ಮಿಕೊಂಡ ಜಸ್ನಎ ಈದ ಮೀಲಾದುನ್ನಬಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರವಾದಿಯವರು ತಮ್ಮ ಜೀವನವನ್ನು ಸಮಾಜಕ್ಕಾಗಿ ಮೀಸಲಿಟ್ಟಿದ್ದರು. ನೀವು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಜಾತಿ ಪಂಥ ಪಂಗಡ ಯಾವುದು ನಿಜವಲ್ಲ, ಮಾನವ ಕುಲ ಒಂದೇ ನಿಜವಾದದ್ದು ಎಂದು ಹೇಳಿದರು.

ಜಾಮೀಯಾ ಮಸೀದಿಯಿಂದ ಭವ್ಯ ಮೆರವಣಿಗೆ ಹೊರಟು ಕರೇಮ್ಮಾದೇವಿ ಸರ್ಕಲ್‌, ಬಸವೇಶ್ವರ ಸರ್ಕಲ್‌, ಬಾಜಿ ಮಾರ್ಕೆಟ್‌, ಕಲ್ಮೇಶ್ವರ ಸರ್ಕಲ್‌ ಮುಖಾಂತರ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ದಾರಿಯುದ್ದಕ್ಕೂ ಕಲಾವಿದರಾದ ಶಬ್ಬೀರ ಡಾಂಗೆ, ಅಯ್ಯುಬ ಕಲಾರಕೋಪ್ಪ, ಸಾಹೇಬ ಫೀರಜಾದೆ, ಪ್ರವಾದಿಯವರ ಕುರಿತು ಹಾಡುಗಳನ್ನು ಹಾಡಿ ಜೈಕಾರ ಘೋಷಣೆ ಹಾಕಿದರು. ಮೆರವಣಿಗೆ ನಂತರ ಉರ್ದು ಶಾಲಾ ಮತ್ತು ಅರೇಬಿಕ ಶಾಲಾ ಮಕ್ಕಳಿಂದ ನಾಥಎ ಶರೀಫ, ಕೌವ್ಹಾಲಿ ಹಾಗೂ ಪ್ರವಚನ ನಡೆಯಿತು. ಶಾಲಾ ಮಕ್ಕಳಿಗೆ ಸಿಹಿ ಮತ್ತು ನೋಟಬುಕ್‌ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬಿಟಿಟಿ ಕಮೀಟಿ ಅಧ್ಯಕ್ಷ ಶರೀಫ ಪಟೇಲ, ಮೀರಾಸಾಬ ಅತ್ತಾರ್‌, ನಭೀಸಾಬ ಥರಥರಿ, ಹಾಜಿ ಮಹ್ಮದಅಲಿ ಡಾಂಗೆ, ಅಬ್ದುಲರೆಹಮನ್‌ ತಾಂಬೋಳಿ, ಅಲ್ಲಾನೂರ ಬಾಗ್ವಾನ, ಧರ್ಮ ಗುರುಗಳಾದ ನೀಜಾಮವುದ್ದೀನ ಮೌಲಾನಾ, ಮಹ್ಮದ ಕೌಸರಅಲಿ, ಅಮೀರ ಮೌಲಾನಾ ಕಾರ್ಯಕ್ರಮ ನಿರೂಪಿಸಿದರು. ಮೆರವಣಿಗೆಯಲ್ಲಿ ಹುಸೇನ್‌ ಸಾಬ್‌ ಥರಥರಿ, ಅನ್ವರ್‌ ನದಾಪ, ಬಿ.ಟಿ.ಟಿ ಕಮೀಟಿ ಉಪಾಧ್ಯಕ್ಷ ಮಲೀಕ ಕಳ್ಳಿಮನಿ ಟಿಪ್ಪು ಸುಲ್ತಾನ ಕಮೀಟಿಯ ಸರ್ವ ಸದಸ್ಯರು, ಸುನ್ನಿ ಮುಸ್ಲಿಂ ಯಂಗ್‌ ಕಮೀಟಿ ಸರ್ವ ಸದಸ್ಯರು , ಹಿರಿಯರಾದ ಹಸನಸಾಬ ಮುಗಟಖಾನ, ಆದಮ ತಾಂಬೋಳಿ, ಯುನೂಸ ಹವಾಲ್ದಾರ ಹಾಗೂ ಸರ್ವ ಸುನ್ನಿ ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here