ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ

0
20
loading...

ಕನ್ನಡಮ್ಮ ಸುದ್ದಿ-ಮುಂಡಗೋಡ : ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಈ ಭಾಗದ ಗೌಳಿ ಸಮುದಾಯ ನಿಯೋಗದೊಂದಿಗೆ ಬೆಳಗಾವಿ ಸುವರ್ಣಸೌದಕ್ಕೆ ತೆರಳಿ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹಾಗೂ ಶಾಸಕ ಶಿವರಾಮ ಹೆಬ್ಬಾರ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಅರ್ಪಿಸಿದ್ದಾರೆ.
ಹಲವಾರು ವರ್ಷಗಳಿಂದ ಅರಣ್ಯಪ್ರದೇಶದಲ್ಲಿ ವಾಶಿಸುತ್ತಿರುವ ಗೌಳಿ ಜನಾಂಗಕ್ಕೆ ಸರ್ಕಾರದ ಯಾವುದೇ ಸವಲತ್ತು ಸಿಗದೇ ತಮ್ಮ ಜನಾಂಗವನ್ನು ಸಂಪೂರ್ಣ ನಿರ್ಲಕ್ಷಿಸಿದಂತಾಗಿದೆ. ಹಲವು ತಲೆಮಾರು ಕಂಡರೂ ತಮಗೆ ಇದುವರೆಗೂ ಭೂಮಿ ಸಕ್ರಮಗೊಳಿಸಿ ಪಟ್ಟಾ ವಿತರಿಸಲಾಗಿಲ್ಲ. ಮುಖ್ಯವಾಗಿ ನಮ್ಮ ಕುಲಕಸುಬು ಹೈನುಗಾರಿಕೆಗೆ ಅಗತ್ಯ ಸೌಲಭ್ಯ ಒದಗಿಸಿಲ್ಲ. ತಕ್ಷಣ ತಮ್ಮ ಬಡಾವಣೆಗಳ ಕುಂದುಕೊರತೆಗಳನ್ನು ಆಲಿಸಿ ಕುಡಿಯುವ ನೀರು, ರಸ್ತೆ, ಶಾಲೆ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸಬೇಕು. ಪ್ರತಿಭಾವಂತ ಗೌಳಿ ಸಮುದಾಯದ ಯುವಕರಿಗೆ ಸರಕಾರಿ ನೌಕರಿಯಲ್ಲಿ ಮೀಸಲಾತಿ ಕಲ್ಪಿಸಬೇಕು. ಸರ್ಕಾರದ ಜಾತಿ ಯಾದಿಯಲ್ಲಿ ದನಗರ ಮತ್ತು ಗೌಳಿ ಪ್ರತ್ಯೇಕ ಸಮುದಾಯವೆಂದು ನಮೂದಾಗಿರುವುದರಿಂದ ಗೊಂದಲ ಸೃಷ್ಟಿಯಾಗಿದೆ. ಎರಡೂ ಜಾತಿಗೆ ಸೇರಿಸದೆ ಪ್ರತ್ಯೇಕ ದನಗರ ಗೌಳಿ ಎಂದೇ ಪರಿಗಣಿಸುವಂತೆ ಒತ್ತಾಯಿಸಲಾಗಿದೆ. ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಡಿಕೆ ಈಡೇರಿಸುವ ಪ್ರಯತ್ನ ಮಾಡುವುದಾಗಿ ಬರವಸೆ ನೀಡಿದ್ದಾರೆ. ಬಳಿಕ ಕಂದಾಯ ಸಚಿವ ಕಾಗೋಡು ತಿಮ್ಮಪ್ಪರನ್ನು ಕೂಡ ಗೌಳಿ ಸಮುದಾಯದವರು ಬೇಟಿಯಾಗಿ ಮನವಿ ಮಾಡಿದ್ದಾರೆ.
ದನಗರ ಗೌಳಿ ಸಮಾಜದ ಜಿಲ್ಲಾಧ್ಯಕ್ಷ ಯಮ್ಮು ವರಕ, ದೇವುಜಾನು ಪಾಟೀಲ, ದೋಂಡು ಪಾಟೀಲ, ಜನ್ನು ಪಾಂಡ್ರಮೀಸೆ, ಬೀರು ತಾರಟ್, ಬೊಮ್ಮು ಎಡಗೆ, ವಿಠ್ಠಲ ಪಾಂಡ್ರಮೀಸೆ, ಲಕ್ಷ್ಮಣ ಲಾಂಬೋರ, ವಾಗು ಕೋಕ್ರೆ, ಗಂಗಾರಾಮ ಕೋಕ್ರೆ ಸೇರಿದಂತೆ ಸಮಾಜದ ಗಣ್ಯರು ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here