ವಿವಿಧ ಮಹಿಳಾ ಸಂಘ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಬೃಹತ್‌ ಪ್ರತಿಭಟನೆ

0
35
loading...

ವಿವಿಧ ಮಹಿಳಾ ಸಂಘ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಬೃಹತ್‌ ಪ್ರತಿಭಟನೆ

ಕನ್ನಡಮ್ಮ ಸುದ್ದಿ ಬೈಲಹೊಂಗಲ

ಖಾಸಗಿ ಹಣಕಾಸು ಸಂಸ್ಥೆಗಳಿಂದ ರೈತ ಮಹಿಳೆಯರಿಗೆ, ದಲಿತ ಕೃಷಿ ಕೂಲಿಕಾರರಿಗೆ ಮತ್ತು ಅಲ್ಪ ಸಂಖ್ಯಾತರುಗಳಿಗೆ ಸ್ವ ಸಹಾಯ ಸಂಘ, ಮಹಿಳಾ ಗುಂಪುಗಳಿಂದ ನೀಡಿದ ಸಾಲ ಹಾಗೂ ಬಡ್ಡಿ ವಸೂಲಾತಿಗೆ ತುರ್ತು ತಡೆಯಾಜ್ಞೆ ನೀಡಿ ಸಾಲ, ಬಡ್ಡಿ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಆಶ್ರಯದಲ್ಲಿ ವಿವಿಧ ಗ್ರಾಮಗಳ ಮಹಿಳಾ ಸಂWದ ಸದಸ್ಯೆಯರು ಗುರುವಾರ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.

ಪಟ್ಟಣದ ಶ್ರೀಈಶಪ್ರಭು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಜಮಾಯಿಸಿದ ಸುಮಾರು 3000ಕ್ಕೂ ಹೆಚ್ಚು ಮಹಿಳೆಯರು ಬೃಹತ್‌ ಪ್ರತಿಭಟನಾ ಮೆರವಣಿಗೆ ಮೂಲಕ ಇಂಚಲ ಕ್ರಾಸ್‌, ಬಸ್‌ ನಿಲ್ದಾಣ ಮಾರ್ಗವಾಗಿ ರಾಯಣ್ಣ ವೃತ್ತಕ್ಕೆ ಬಂದು ರಸ್ತೆ ತಡೆ ನಡೆಸಿದರು. ಹಣಕಾಸು ಸಂಸ್ಥೆಗಳ ಅನ್ಯಾಯ, ದೌರ್ಜನತೆ ತಡೆ ಹಿಡಿಯುವಂತೆ ಸರ್ಕಾರ, ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಒತ್ತಾಯಿಸಿದರು.

ಕೇಂದ್ರ ಸರ್ಕಾರ 500, 1000 ರೂ.ಮುಖ ಬೆಲೆಯ ನೋಟುಗಳನ್ನು ರದ್ದುಗೊಳಿಸಿರುವದು ಸ್ವಾಗತಾರ್ಹ. ಆದರೆ ರೈತ ಮಹಿಳೆಯರಿಗೆ, ದಲಿತ ಕೃಷಿ ಕೂಲಿ ಕಾರ್ಮಿಕರಿಗೆ, ಸಣ್ಣಪುಟ್ಟ ವ್ಯಾಪಾರಸ್ಥರಿಗೆ, ಅಲ್ಪ ಸಂಖ್ಯಾತರುಗಳಿಗೆ ಸ್ವ ಸಹಾಯ ಸಂಘ, ಮಹಿಳಾ ಗುಂಪಿನಿಂದ ನೀಡಿದ ಸಾಲ ಹಾಗೂ ಬಡ್ಡಿಯನ್ನು ಒತ್ತಾಯ ಪೂರ್ವಕವಾಗಿ ವಸೂಲಾತಿ ಮಾಡುತ್ತಿರುವದು ತೊಂದರೆಯಾಗಿದೆ. ನಾಡಿನಲ್ಲಿ ಬರ ಆವರಿಸಿದ್ದು, ದುಡಿಯುವ ಕೈಗಳಿಗೆ ಕೆಲಸ ಇಲ್ಲವಾಗಿದೆ. ಸಂಬಳವಿಲ್ಲದೆ ಜನತೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ದಬ್ಬಾಳಿಕೆ ನಡೆಸಿ ಸಾಲ, ಬಡ್ಡಿ ವಸೂಲಿ ಮಾಡುತ್ತಿರುವದು ಅನ್ಯಾಯದ ಕ್ರಮವಾಗಿದೆ ಎಂದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕ ಅಧ್ಯಕ್ಷ ಸುರೇಶ ರಾಯಪ್ಪಗೋಳ ಮಾತನಾಡಿ, ತಾಲ್ಲೂಕಿನಾದ್ಯಂತ ವಿವಿಧ ಗ್ರಾಮಗಳಲ್ಲಿ ಹಣಕಾಸು ಸಂಸ್ಥೆ, ಮಹಿಳಾ ಗುಂಪುಗಳು ಮಹಿಳೆಯರಿಗೆ ಸಾಲ ನೀಡಿವೆ. ಸಾಲ ಮರು ಪಾವತಿಗೆ ಪೀಡಿಸುತ್ತಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ಎನ್‌.ಜಯರಾಮ್‌ ಅವರು ಸಾಲ ನೀಡಿದ ಹಣಕಾಸು ಸಂಸ್ಥೆಗಳಿಗೆ ಜನತೆಗೆ ಯಾವುದೇ ರೀತಿ ಒತ್ತಡ ಹೆರಿ ಸಾಲ, ಬಡ್ಡಿ ವಸೂಲಿಯನ್ನು ಆರು ತಿಂಗಳುವರೆಗೆ ನಿಷೇಧಿಸಿದ್ದಾರೆ. ಆದರೆ ಜಿಲ್ಲಾಧಿಕಾರಿಗಳ ಆದೇಶ ವಿರೋಧಿಸಿ ಹಣಕಾಸು ಸಂಸ್ಥೆಯವರು ಮರು ಸಾಲ, ಬಡ್ಡಿ ವಸೂಲಿಗೆ ಮಹಿಳೆಯರನ್ನು ಪೀಡಿಸುತ್ತಿರುವದು ಸರಿಯಲ್ಲ ಎಂದರು.

ರಾಜ್ಯ ಕಾರ್ಯಾಧ್ಯಕ್ಷೆ ಸುಜಾತಾ ಕಾಂಬಳೆ ಮಾತನಾಡಿ, ಬಡ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿ ಸಾಲ ವಸೂಲಿ ನಡೆಸುವದು ಅನ್ಯಾಯ. ಇದು ಹೀಗೆ ಮುಂದುವರೆದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ರಾಜ್ಯ ಕಾರ್ಯಾಧ್ಯಕ್ಷ ಶಶಿಕಾಂತ ಫಕೀರೆ, ರಾಜ್ಯ ಉಪಾಧ್ಯಕ್ಷ ಬಸವರಾಜ ಢಾಕೆ, ಪ್ರಧಾನ ಕಾರ್ಯದರ್ಶಿ ಸುದರ್ಶನ ತಮ್ಮಣ್ಣವರ, ಸಂಘಟನಾ ಕಾರ್ಯದರ್ಶಿ ಬಸವರಾಜ ಬಡವನ್ನವರ, ಒಕ್ಕೂಟ ಅಧ್ಯಕ್ಷ ಸುರೇಶ ದೇಮಪ್ಪನವರ, ಮೀನಾಕ್ಷಿ ನಾಯಕ, ಸರಸ್ವತಿ ಕನಕಣ್ಣವರ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳ ನೂರಾರು ಮಹಿಳೆಯರು ಇದ್ದರು. ರಾಯಣ್ಣ ವೃತ್ತದಲ್ಲಿ ರಸ್ತೆ ತಡೆ ನಡೆಸಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಪಿಎಸ್‌ಐ ಶಿವಕುಮಾರ ಮುಚ್ಚಂಡಿ ಪೊಲೀಸ್‌ ಬಂಧು ಬಸ್ತ್‌ ಕೈಕೊಂಡಿದ್ದರು.

*************

loading...

LEAVE A REPLY

Please enter your comment!
Please enter your name here