ಸಮಾಜ ಕಟ್ಟುವಲ್ಲಿ ಯುವಕರ ಪಾತ್ರ ಬಹುಮುಖ್ಯ: ನಾಗರಾಜ

0
208
loading...

ಗುಳೇದಗುಡ್ಡ: ಸತ್ಯ, ಶುದ್ಧ ಕಾಯಕದಿಂದ, ಪ್ರಮಾಣಿಕ, ಪಾರದರ್ಶಕತೆಯಿಂದ ಮಾಡಿದ ಸೇವೆ ಪರಮಾತ್ಮನಿಗೆ ಸಲ್ಲುತ್ತದೆ. ಸಮಾಜದಲ್ಲಿ ಭ್ರಷ್ಟಾಚಾರ, ಅನೈತಿಕತೆ ಅಧರ್ಮ ತಾಂಡವಾಡುತ್ತಿದೆ. ಆದರ್ಶ ಸಮಾಜ ಕಟ್ಟುವಲ್ಲಿ ಯುವಕರ ಪಾತ್ರ ಬಹುಮಖ್ಯವಾಗಿದೆ. ಭ್ರಷ್ಟಾಚಾರ, ಅನಾಚಾರ ಮುಕ್ತ ಸಮಾಜ ಕಟ್ಟಬೇಕಾಗಿದೆ ಎಂದು ರಾಜ್ಯಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಅರಳಿ ನಾಗರಾಜ ಹೇಳಿದರು.

ಅವರು ಶನಿವಾರ ಸ್ಥಳೀಯ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಮಹಾಸ್ವಾಮಿಗಳವರ 31ನೇ ವಾರ್ಷಿಕ ಪುಣ್ಯಾರಾಧನೆಯ ಶರಣ ಸಂಗಮ ಸಮಾರಂಭದ ವಿಶೇಷ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳನನ್ನು ಆದರ್ಶ ಮಾರ್ಗದಲ್ಲಿ ನಡೆಸಬೇಕು. ಸಮಾಜದಲ್ಲಿ ಸ್ವೇಚ್ಚಾಚಾರ ಹೆಚ್ಚಾಗುತ್ತಿದೆ. ಪರಿವರ್ತನೆ ಆಗಬೇಕಾಗಿದೆ ಎಂದು ಹೇಳಿದರು.

ಮಾಜಿ ಶಾಸಕ, ಸಾಹಿತಿ ಮಲ್ಲಿಕಾರ್ಜುನ ಬನ್ನಿ ಮಾತನಾಡಿ, ರಾಜಕೀಯದಲ್ಲಿ ಧರ್ಮ ಅವಶ್ಯವಾಗಿದ್ದು ಆದರೆ, ಧರ್ಮದಲ್ಲಿ ರಾಜಕೀಯ ಪ್ರವೇಶ ಮಾಡಬಾರದು. ಆದರಿಂದು ಧರ್ಮ ಕ್ಷೇತ್ರದಲ್ಲಿ ರಾಜಕೀಯ ಬಂದಿದ್ದು ಇದು ಆಘಾತಕಾರಿ ಬೆಳವಣಿಗೆ ಎಂದು ಹೇಳಿದರು. ಅಮರೇಶ್ವರ ಬೃಹನ್ಮಠದ ಶ್ರೀನೀಲಕಂಠ ಶ್ರೀಗಳು, ಸಸ್ತಾಪೂರದ ಡಾ.ಈಶ್ವರಾನಂದ ಶ್ರೀಗಳು ಮಾತನಾಡಿದರು. ಬಾಲ್ಕಿ ಗುರುಬಸವ ಪಟ್ಟದ್ದೇವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಕೃತಿ, ಸಂಸ್ಕಾರಯುತ ಜೀವನ ಸಾಗಿಸಿದರೆ ದೇವರು ಒಲೆಯುತ್ತಾನೆ. ದುಶ್ಚಟ, ದುರಾಭ್ಯಾಸ ಬಿಟ್ಟು ಆದರ್ಶ ಬದುಕು ಬಾಳಬೇಕು ಎಂದರು.

ಶ್ರೀಜಗದ್ಗುರು ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು, ಶ್ರೀಗುರುಬಸವ ದೇವರು, ಆನಂದ ತಿಪ್ಪಾ, ಸೋಮು ಕಲಬುರ್ಗಿ, ಈರಣ್ಣ ಶೇಖಾ, ಶಿವಾನಂದ ನಾರಾ, ಮಲ್ಲಿಕಾರ್ಜುನ ತಾಂಡೂರ, ಮುತ್ತಣ್ಣ ಮಾನವಿ, ಸಿದಬಸಪ್ಪ ಕೆಲೂಡಿ, ಮುತ್ತು ರೋಜಿ, ಸಿ.ಎಂ.ಚಿಂದಿ, ರವಿ ಅಲದಿ, ನೀಲಪ್ಪ ಉಂಕಿ, ಸಂಗನಬಸಪ್ಪ ಹುಣಸಿಮರದ, ಬಸವರಾಜ ತಾಂಡೂರ, ಶಂಭು ಅಂಬಲಿ,ರವಿ ಉಂಕಿ, ನಾಗಪ್ಪ ಸನ್ನೊಲಿ, ಶಿವಾನಂದ ಎಣ್ಣಿ, ಸುರೇಶ ರಾಜನಾಳ ಮತ್ತಿತರರು ಇದ್ದರು.

ಇದೇ ಸಂದರ್ಭದಲ್ಲಿ ವಿಶ್ರಾಂತ ನ್ಯಾಯಮೂರ್ತಿಗಳಾದ ಸಸ್ಟಿಜ್‌ ಅರಳಿ ನಾಗರಾಜ, ಬಾಲ್ಕಿ ಗುರುಬಸವ ಪಟ್ಟದ್ದೇವರ, ಶ್ರೀನೀಲಕಂಠ ಶ್ರೀಗಳನ್ನು ಸನ್ಮಾನಿಸಲಾಯಿತು.

ನಂತರ ಸ್ವರಪಲ್ಲವಿ ಕಲಾ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡದವು. ಗೀತಾ ಬಂಕಾಪೂರ ಪ್ರಾರ್ಥನೆ ಹಾಡಿದರು. ಶರಣ ಸಂಗಮ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಜನಾಳ ಸ್ವಾಗತಿಸಿದರು. ಶ್ರೀಮತಿ ಎಸ್‌.ವಿ.ಕಲ್ಮಣಿ ನಿರೂಪಿಸಿ, ವಂದಿಸಿದರು.

loading...

LEAVE A REPLY

Please enter your comment!
Please enter your name here