ಸರಕಾರದ ಅನುದಾನ ಸದುಪಯೋಗವಾಗಲಿ: ನಾಡಗೌಡ

0
20
loading...

ನಾಲತವಾಡ: ಶೈಕ್ಷಣೀಕ ಕ್ಷೇತ್ರಗಳಿಗೆ ಸರಕಾರ ವ್ಯಯಿಸುವ ಅನುದಾನದ ಸದುಪಯೋಗವಾಗುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಪ.ಪಂ ಅಧ್ಯಕ್ಷರಾದ ಪೃಥ್ವಿರಾಜ ನಾಡಗೌಡ ಹೇಳಿದರು.
ಇಲ್ಲಿಯ ಮೊರಾರ್ಜಿ ದೇಸಾಯಿ ವಸತಿಯಲ್ಲಿ ಸರಸ್ವತಿ ದೇವಿಯ ಕಂಚಿನ ಮೂರ್ತಿ, ಕಂಪ್ಯುಟರ್‌ ಕೊಠಡಿಯ ಮತ್ತು ಪ.ಪಂ ಅನುದಾನದ ಸುಮಾರು 8ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸಿದ್ದ ಶುದ್ದ ನೀರಿನ ಘಟಕ ಉದ್ಘಾಟಿಸಿ ಸನ್ಮಾನಿತರಾಗಿ ಅವರು ಮಾತನಾಡಿದರು.
ಪ್ರತಿಯೊಂದು ಕ್ಷೇತ್ರದಲ್ಲಿ ಆತ್ಮ ಶುದ್ದತೆಯಿಂದ ಅಭಿವೃದ್ದಿಯತ್ತ ಒಲವು ತೋರುವ ಅವಶ್ಯವಿದೆ ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮೊರಾರ್ಜಿ ವಸತಿ ಶಾಲೆಯ ಪ್ರಮುಖ ಬೇಡಿಕೆಯಾದ ಹೈಮಾಸ್ಕ ಹಾಗೂ ಸೋಲಾರ್‌ ದೀಪಗಳನ್ನು ಒದಗಿಸುತ್ತೇನೆ ಎಂದು ಭರವಸೆ ನೀಡಿದರು.
ನಿಲಯಪಾಲಕರಾದ ಎಸ್‌.ಎಚ್‌.ಜೈನಾಪೂರ ಮಾತನಾಡಿ ಕಳೆದ ಹತ್ತು ವರ್ಷಗಳಿಂದ ಶಾಲೆಯಲ್ಲಿ ಶುದ್ದ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದ ವಿದ್ಯಾರ್ಥಿಗಳಿಗೆ ಪ.ಪಂ ಅಧ್ಯಕ್ಷರಾದ ಪೃಥ್ವಿರಾಜ ನಾಡಗೌಡರ ಪ್ರಯತ್ನದ ಫಲದಿಂದ ಇಂದು ಶಾಲೆಯಲ್ಲಿ ಶುದ್ದ ನೀರು ಸಿಗುವಂತಾಯಿತು ಅವರ ಸೇಔಎ ಶ್ಲಾಘನೀಯ ಎಂದರು.
ಪ್ರಾಚಾರ್ಯರಾದ ಕೆ.ಎಸ್‌.ಮಾರಾಪೂರ ಮಾತನಾಡಿ ರಾಜ್ಯದ ಸುಮಾರು 535 ಮೊರಾರ್ಜಿ ವಸತಿ ಶಾಲೆಯಲ್ಲಿ ಇದೇ ಮೊದಲ ಬಾರಿ ನಾಲತವಾಡ ಶಾಲೆಯಲ್ಲಿ ಶುದ್ದ ನೀರಿನ ಘಟಕದ ಭಾಗ್ಯ ದೊರಕಿದ್ದು ಪ.ಪಂ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಅಧಿಕಾರಿಗಳ ಕೊಡುಗೆಯ ಫಲ ಎಂದರು.
ಗುರುಮೂರ್ತಿ ಸುರೇಶ ಹಿರೇಮಠ ಮಾತನಾಡಿದರು. ಈ ವೇಳೆ ಉಪಾಧ್ಯಕ್ಷರಾದ ವೀರೇಶ ಚಲವಾದಿ, ಉದ್ಯಮಿ ಪ್ರಭುಗೌಡ ಪಾಟೀಲ, ಮೈನುದ್ದಿನ್‌ ಕೊಣ್ಣೂರ, ಸುರೇಶ ಸಗರ, ಆರೋಗ್ಯ ಇಲಾಖೆಯ ಗಣೇಶ ಔರಾಧಿ, ರಸೂಲಸಾಬ ಮಕಾಂದಾರ, ಕಂಪ್ಯುಟರ್‌ ಶಿಕ್ಷಕರಾದ ಮೇಗಲಮನಿ, ಹಿಂದಿ ಶಿಕ್ಷಕರಾದ ಲಮಾಣಿ ಇದ್ದರು. ಶಿಕ್ಷಕರಾದ ವಿ.ಎಂ.ವಸ್ತ್ರದ ನಿರೂಪಿಸಿದರು. ಮೇಗಲಮನಿ ವಂದಿಸಿದರು.

loading...

LEAVE A REPLY

Please enter your comment!
Please enter your name here