ಸವದಿಯವರ ವಿಶೇಷ ಪ್ರಯತ್ನದಿಂದ ಅಭಿವೃದ್ದಿ ಕಾರ್ಯಗಳು ಆಗಿವೆ

0
22
loading...

ಕೋಹಳ್ಳಿ : ತಾಲೂಕಿನಲ್ಲಿ ಶಾಸಕ ಲಕ್ಷ್ಮಣ ಸವದಿಯವರ ವಿಶೇಷ ಪ್ರಯತ್ನದಿಂದ ಪ್ರತಿ ಗ್ರಾಮಗಳಿಗೆ ರಸ್ತೆ, ಶಿಕ್ಷಣ, ಕುಡಿಯುವ ನೀರು, ಒಳಚರಂಡಿ, ದೇವಸ್ಥಾನಗಳ ಜಿರ್ಣೋದ್ದಾರ ಸೇರಿದಂತೆ ಹಲವಾರು ಅಭಿವೃದ್ದಿ ಕಾರ್ಯಗಳು ಆಗಿವೆ. ಮುಂಬರುವ ದಿನಗಳಲ್ಲಿ ಸವದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಜಿಲ್ಲಾ ಪಂಚಾಯತ ಅನುದಾನದಲ್ಲಿ ಶಾಲಾ ಅಭಿವೃದ್ದಿಗೆ ಶ್ರಮಿಸಲಾಗುವುದು ಎಂದು ಕೊಕಟನೂರ ಜಿ.ಪಂ ಸದಸ್ಯ ಸಿದ್ದಪ್ಪ ಮುದಕಣ್ಣವರ ಹೇಳಿದರು. ಸಮೀಪದ ಸವದಿ ಗ್ರಾಮದಲ್ಲಿ ಸೋಮವಾರ ಚಿಪ್ಪಾಡಿ ತೋಟದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಶಂಕುಸ್ಥಾಪನೆ ಮತ್ತು ತಾ.ಪಂ ಅನುದಾನದ ಗಣಕಯಂತ್ರ ಕೊಠಡಿ ಉದ್ಘಾಟನೆ ಹಾಗೂ ಭೂದಾನಿಗಳ ಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿ, ಸವದಿ ಗ್ರಾಮಕ್ಕೆ ಜಿಲ್ಲಾ ಪಂಚಾಯತ ಅನುದಾನದ ಮೊದಲ ಆದ್ಯತೆಯನ್ನು ನೀಡಲಾಗುವುದೆಂದು ಹೇಳಿದರು.
ತಾ. ಪಂ ಸದಸ್ಯ ಶಿವಕುಮಾರ ಪಾಟೀಲ ಮಾತನಾಡಿ, ಗ್ರಾಮದ ದಿವಂಗತ ಆದೇಶ ಚಿಪ್ಪಾಡಿಯವರು ಶಾಲೆಗೆ ಭೂದಾನ ಮಾಡಿ ಅನೇಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಂತೆ ಮಾಡಿದ್ದಾರೆ, ಅವರ ಸೇವೆ ಚಿರಸ್ಮರಣೀಯ. ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಜಿ. ಪಂ ಸದಸ್ಯರು ಸವದಿ ಗ್ರಾಮದ ಅಭಿವೃದ್ದಿಗೆ ಪ್ರಥಮ ಆದ್ಯತೆ ಕೊಟ್ಟು ಅನುದಾನ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಗ್ರಾಮಕ್ಕೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸುವ ಭರವಸೆ ನೀಡಿರುವ ಜನ ಪ್ರತಿನಿದಿಗಳಿಗೆ ಗ್ರಾಮಸ್ಥರರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್‌. ಡಿ. ಎಂ.ಸಿ ಅಧ್ಯಕ್ಷ ನಿಸ್ಕಾಂತ ಸನಾಳ, ಪಿ.ಕೆ.ಪಿ.ಎಸ್‌ ಅಧ್ಯಕ್ಷ ಮಲ್ಲಪ್ಪ ಬಾಳಿಕಾಯಿ, ಗ್ರಾಪಂ ಉಪಾಧ್ಯಕ್ಷ ಅಶೋಕ ಉಗಾರ, ಜಿನ್ನಪ್ಪ ಚಿಪ್ಪಾಡಿ, ಮುತ್ತಪ್ಪ ಪಡಸಲಗಿ, ಸಿದ್ದಲಿಂಗ ಶಿರಗುಪ್ಪಿ, ಮಹಾಂತೇಶ ಬಾಗೆನ್ನವರ, ಮಹಾಂತೇಶ ಹರಪಳೆಕರ, ಮಹಾದೇವ ರಾಜಮನಿ, ಸುಧೀರ ಕಡೋಲಿ, ಹಣಮಂತ ಗಸ್ತಿ, ಶಿತಲ ಸಮಾಣಿ ಹಾಗೂ ಇತರರು ಉಪಸ್ಥಿತರಿದ್ದರು. ಬಿ. ಕೆ. ಬಿರಾದರ ಸ್ವಾಗಿತಿಸಿದರು, ಎ. ವಾಯ್‌. ಐದತ್ತಿ ನಿರೂಪಿಸಿ ವಂದಿಸಿದರು.

loading...

LEAVE A REPLY

Please enter your comment!
Please enter your name here