ಸೈಕ್ಲಿಂಗ್‌ ರಾಷ್ಟ್ರ ಮಟ್ಟಕ್ಕೆ ಆಯ್ಕೆ

0
10
loading...

ರಾಮದುರ್ಗಃ ಚಂದರಗಿಯ ಕ್ರೀಡಾ ಶಾಲೆಯ ವಿದ್ಯಾರ್ಥಿಗಳು ವಿಜಯಪುರದಲ್ಲಿ ನಡೆದ 9ನೇ ರಾಜ್ಯ ಮಟ್ಟದ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಶಿಫ್‌ನಲ್ಲಿ ಈ. ಪ್ರಶಾಂತ ಈತನು 14 ವರ್ಷದೊಳಗಿನ ಬಾಲಕರ ವೈಯಕ್ತಿಕ ಟೈಮ್‌ ಟ್ರಯಲ್‌ ಸ್ಪರ್ಧೆಯಲ್ಲಿ ಬಂಗಾರದ ಪದಕ ಮತ್ತು 14 ವರ್ಷದೊಳಗಿನ ಬಾಲಕರ ವೈಯಕ್ತಿಕ ಪರ್ಸೂಟ್‌ ವಿಭಾಗದಲ್ಲಿ ಬಂಗಾರದ ಪದಕ ಹಾಗೂ 16 ವರ್ಷದೊಳಗಿನ ಬಾಲಕರ ವೈಯಕ್ತಿಕ ಟೈಮ್‌ ಟ್ರಯಲ್‌ನಲ್ಲಿ ಬೆಳ್ಳಿ 2 ಬಂಗಾರ, 1ಬೆಳ್ಳಿ ಪದಕಗಳು ಜಯಿಸಿದ್ದಾನೆ.

ನಾಗರಾಜ ಸೋಮಗೊಂಡ 14 ವರ್ಷದೊಳಗಿನ ವೈಯಕ್ತಿಕ ಟೈಮ್‌ ಟ್ರಯಲ್‌ನಲ್ಲಿ ಬೆಳ್ಳಿ ಪದಕ ಹಾಗೂ 14 ವರ್ಷದೊಳಗಿನ ಬಾಲಕರ ವೈಯಕ್ತಿಕ ಪರ್ಸೂಟ್‌ ವಿಭಾಗದಲ್ಲಿ ಕಂಚಿನÀ ಪದಕ ಜಯಸಿದ್ದಾನೆ. ಈ ವಿದ್ಯಾರ್ಥಿಗಳು ಡಿಶೆೆಂಬರ್‌ 21 ರಿಂದ ಕೇರಳ ರಾಜ್ಯದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸೈಕ್ಲಿಂಗ್‌ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳಾದ ಈ.ಪ್ರಶಾಂತ, ನಾಗರಾಜ ಸೋಮಗೊಂಡ, ಇವರನ್ನು ಹಾಗೂ ತರಬೇತಿ ನೀಡಿದ ಬಿ ಬಿ ವಿಜಯನಗರ ಅವರನ್ನು ಸಂಸ್ಥೆಯ ಸಂಸ್ಥಾಪರು, ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಪ್ರಾಚಾರ್ಯರು, ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.

loading...

LEAVE A REPLY

Please enter your comment!
Please enter your name here