ಹಿಂದೂ ಜಾಗರಣಾ ವೇದಿಕೆಯಿಂದ ಸದ್ದಿಲ್ಲದೆ ನಡೆಯುತ್ತಿರುವ ಸ್ವಚ್ಚತಾ ಕಾರ್ಯ

0
25
loading...

ಕನ್ನಡಮ್ಮ ಸುದ್ದಿ-ದಾಂಡೇಲಿ : ಸಣ್ಣ ಕಾರ್ಯಕ್ರಮ ಮಾಡಿ ಪೋಟೊ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣ ಇಲ್ಲವೆ ಮಾದ್ಯಮಗಳ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ. ಅಂತಹದರಲ್ಲಿ ತಾವೆಂದೂ ಪ್ರಚಾರವನ್ನು ಬಯದಸೆ ಕಳೆದ ಮೂರು ವರ್ಷಗಳಿಂದ ದಾಂಡೇಲಿಯಲ್ಲಿರುವ ವಿವಿಧ ದೇವಸ್ಥಾನಗಳ ಸ್ವಚ್ಚತಾ ಕಾರ್ಯವನ್ನು ಸದ್ದಿಲ್ಲದೆ ಮಾಡುವುದರ ಮೂಲಕ ಸ್ವಚ್ಚ ಭಾರತ ಕನಸು ನನಸು ಮಾಡಲೊರಟಿರುವ, ಪ್ರಚಾರ ಬಯಸದ ದಾಂಡೇಲಿ ಹಿಂದೂ ಜಾಗರಣಾ ವೇದಿಕೆಯ ಶ್ಲಾಘನೀಯ ಕಾರ್ಯದ ವರದಿಯಿದು.

ಕಳೆದ ಮೂರು ವರ್ಷಗಳಿಂದ ಆರಂಭಗೊಂಡ ಈ ಕೈಂಕರ್ಯ ನಗರದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹಿಂದೂ ಜಾಗರಣಾ ವೇದಿಕೆಯ ಪದಾಧಿಕಾರಿಗಳು, ಕಾರ್ಯಕರ್ತರ ತಂಡ ಪ್ರತಿ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ 8 ಗಂಟೆಯವರೆಗೆ ವಾರಕ್ಕೊಂದು ದೇವಸ್ಥಾನವನ್ನು ಸ್ವಚ್ಚಗೊಳಿಸುವ ಕಾಯಕದಲ್ಲಿ ನಿರತವಾಗಿದೆ. ಈ ಕಾರ್ಯದಲ್ಲಿ ಹಿಂದೂ ಜಾಗರಣಾ ವೇದಿಕೆಯ ಸಂಚಾಲಕ ಸುಧೀರ ಶೆಟ್ಟಿ ಮತ್ತು ಪದಾಧಿಕಾರಿಗಳಾದ ಶ್ರೀನಾಥ ಮಿರಾಶಿ, ವಿಜಯ್ ಮಿರಾಶಿ, ರಾಹುಲ್ ಮಡಿವಾಳ, ಕೃಷ್ಣ ಹರಿಜನ, ಕೃಷ್ಣ ಗೌಡ, ರವಿ ಗೌಡ, ರಾಘು ಗೌಡ, ಸುಬ್ರಹ್ಮಣ್ಯ ಸಮರು, ಅರ್ಜುನ ಗವಸ, ಮಲ್ಲಿಕಾರ್ಜುನ ಉಪ್ಪಾರ, ಸುಮೇರ್ ಜೈನ್, ಪ್ರವೀಣ ಪರಮಾರ, ರಮೇಶ ಹೊಸಮನಿ, ಗಣೇಶ ಗುಳೆ ಹೀಗೆ ಮೊದಲಾದವರ ತಂಡ ಪ್ರಾಮಾಣಿಕ ಸೇವೆಗೈಯುತ್ತಿದೆ.

ಭಾನುವಾರ ಬಂತೆಂದರೆ ಬಹುತೇಕ ಜನರು ಅದರಲ್ಲೂ ಯುವ ಜನರು ಮೋಜು ಮಸ್ತಿ, ಮನೋರಂಜನೆ ಎಂದು ಕಾಲ ಕಳೆಯುತ್ತಿರುವುದನ್ನು ನೋಡುತ್ತೇವೆ. ಅಂಥವರಿಗೆ ಮಾದರಿಯಾಗಬಲ್ಲರು ದಾಂಡೇಲಿಯ ಹಿಂದೂ ಜಾಗರಣಾ ವೇದಿಕೆಯ ಈ ಕಾರ್ಯಕರ್ತರು ಎಂದರೆ ಅತಿಶಯೋಕ್ತಿ ಎನಿಸದು.

loading...