03ನೇ ವಾರ ಪಹರ ವೇದಿಕೆ;ನಾಗರಾಜ ನಾಯಕ ಕನ್ನಡª

0
238
loading...

103ನೇ ವಾರ ಪಹರ ವೇದಿಕೆ;ನಾಗರಾಜ ನಾಯಕ
ಕನ್ನಡಮ್ಮ ಸುದ್ದಿ
ಕಾರವಾರ;ಸ್ವಚ್ಛತಾ ಅಭಿಯಾನದ 103 ನೇ ವಾರ ಪೂರೈಸುತ್ತಿರುವ ಪಹರ ವೇದಿಕೆಯು ಈ ಸವಿ ನೆನಪಿಗಾಗಿ ಸ್ವಚ್ಚತೆ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಲು ಡಿ.17 ರಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಪಹರೆ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2015 ರಿಂದ ಪ್ರಾರಂಭವಾದ ಸ್ವಚ್ಛತಾ ಅಭಿಯಾನವು ನೂರು ವಾರಗಳನ್ನು ಯಶಸ್ವಿಯಾಗಿ ಪೂರೈಸಿ ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿಸಿದೆ. ಅಲ್ಲದೆ ಜನರು ಕೂಡ ಸ್ವಚ್ಛತಾ ಕಾರ್ಯದಲ್ಲಿ ಹೆಚ್ಚು ಹೆಚ್ಚು ಭಾಗವಹಿಸಿ ನಗರವನ್ನು ಸ್ವಚ್ಛವಾಗಿಡಲು ಸಹಕಾರ ನೀಡುತ್ತಿದ್ದಾರೆ ಎಂದರು.
2015 ಜ. 3 ರಿಂದ ಆರಂಭವಾದ ಅಭಿಯಾನಕ್ಕೆ ಅಂದಿನ ಜಿಲ್ಲಾಧಿಕಾರಿ ಉಜ್ವಲ್‌ಕುಮಾರ್‌ ಘೋಷ್‌ ಉದ್ಘಾಟಿಸಿದ್ದರು. ನಿರಂತರವಾಗಿ ನಡೆದುಕೊಂಡು ಬಂದಿರುವ ಅಭಿಯಾನವು 25, 50 ಹಾಗೂ 75 ನೇ ವಾರವನ್ನು ಸಾಲುಮರದ ತಿಮ್ಮಕ್ಕ, ಸುರೇಶ ಹೆಬ್ಬಳೆಕರ್‌ ಅವರಂತಹ ಪ್ರಸಿದ್ದ ವ್ಯಕ್ತಿಗಳೊಂದಿಗೆ ಆಚರಿಸಿ ಜನರಲ್ಲಿ ಜಾಗೃತಿ ಮೂಡಿಸಿದೆ. ಅದೆ ರಿತಿ ಈ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಮುರುಗಾ ಮಠದ ಮುರುಘಾಶ್ರೀ ಅವರನ್ನು ಆಹ್ವಾನಿಸಿ ಆಚರಿಸಲಾಗುತ್ತಿದೆ ಎಂದರು.
ಈಗಾಗಲೇ ಸ್ವಚ್ಛತೆ ಬಗೆಗಿನ ಜಾಗೃತಿಗಾಗಿ ಮಕ್ಕಳಿಗೆ ವಿವಿಧ ಸ್ಫರ್ಧೆಗಳನ್ನು ಏರ್ಪಡಿಸಲಾಗಿತ್ತು. ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಚ್ಛತೆ ಬಗೆಗಿನ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿ ಮೂವರನ್ನು ಆಯ್ಕೆ ಮಾಡಲಾಗಿದೆ. ಅದೆ ರಿತಿ ಕನ್ನಡ ಶಾಲೆಗಳಲ್ಲಿ ಸುಚಿತ್ವವನ್ನು ಕಾಪಾಡಿಕೊಂಡ ಶಾಲೆಗಳನ್ನು ಗುರುತಿಸಿ ಬಹುಮಾನವನ್ನು ನೀಡುವ ಇರಾದೆ ಹೊಂದಲಾಗಿದೆ. ಅಲ್ಲದೆ ಈ ಎಲ್ಲ ಸವಿನೆನಪುಗಳ ಹೊತ್ತಿಗೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಹರೆ ವೇದಿಕೆ ಸದಸ್ಯರಾದ ಜಿ.ಡಿ. ಮನೋಜ, ಖೈರೋನ್ನಿಸಾ ಶೇಖ್‌, ರಮೇಶ ಗುನಗಿ, ಚಂದನ ಅರ್ಗೇಕರ್‌, ಇನ್ನಿತರರು ಇದ್ದರು.
——————-
ಫೋಟೊ13ಕಾರವಾರ5

loading...

LEAVE A REPLY

Please enter your comment!
Please enter your name here