4.ತಿಂಗಳು ಗತಿಸಿದರೂ ಸಂಪೂರ್ಣಗೊಳ್ಳದ ಬೆಳ್ಳಟ್ಟಿ ಕೆರೆ ಕಾಮಗಾರಿ

0
29
loading...

ಕೆರೆ ಅಭಿವೃದ್ಧಿ ಹೆಸರಲ್ಲಿ ಲಕ್ಷಾಂತರ ರೂ ಗಳು ಏನಾಯಿತೋ? ಪೂರ್ಣಗೊಳ್ಳದ ಕೆರೆ ಕಾಮಾಗಾರಿ
ಕನ್ನಡಮ್ಮ ಸುದ್ದಿ-ಶಿರಹಟ್ಟಿ : ರಾಜ್ಯದಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಭೀಕರ ಬರಗಾಲ ಆವರಿಸಿದ್ದರಿಂದ ಬರಪೀಡಿತ ಪ್ರದೇಶದಲ್ಲಿ ನೀರಾವರಿ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದ್ದರೂ ಕೂಡಾ ಅದು ಅಧಿಕಾರಿಗಳ ಬೇಜವಾದ್ಬಾರಿಯಿಂದ ಯೋಜನೆಗಳು ವಿಫಲಗೊಳ್ಳುತ್ತಿರುವುದಕ್ಕೆ ತಾಲೂಕಿನ ಬೆಳ್ಳಟ್ಟಿ ಕೆರೆ ಕಾಮಗಾರಿ ಸಾಕ್ಷಿಯಾಗಿದೆ.

ಕಳೆದ ನಾಲ್ಕು ತಿಂಗಳ ಹಿಂದೆ ಬೆಳ್ಳಟ್ಟಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ದೊರೆತು 5 ತಿಂಗಳು ಗತಿಸಿದರೂ ಯಾವುದೇ ಕೆಲಸವಾಗದೇ ಕೆರೆ ಕಾಮಗಾರಿ ಕೆಲಸ ಸಂಪೂರ್ಣವಗದೇ ಸ್ಥಗಿತಗೊಂಡಿದೆ. 16 ಲಕ್ಷ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕೆಲಸವನ್ನು ಕರ್ನಾಟಕ ರೂರಲ್ ಇನ್‍ಫ್ರಾಸ್ಟ್ರಕ್ಚರ್ ಡೆವಲೆಪಮೆಂಟ್ ಲಿಮಿಟೆಡ್‍ಗೆ ನೀಡಲಾಗಿದೆ. ಕೆರೆಯ ಹೊಳೆತ್ತುವುದು ಸೇರಿದಂತೆ ಗಿಡ-ಗಂಟಿಗಳನ್ನು ತೆಗೆಯುವ ಕಲಸ ಮಾಡಬೇಕೆಂದು ನಿಗದಿ ಪಡಿಸಿತ್ತು. ಆದರೆ ಕೇವಲ 3-4 ದಿನ ಜೆಸಿಬಿ ಯಂತ್ರದಿಂದ ಕೆರೆಯ ದಡದಲ್ಲಿ ಗರಸು ಮಣ್ಣನ್ನು ತೆಗೆದು ಪುನಃ ಮಣ್ಣನ್ನು ಅಲ್ಲಿಯೇ ಹಾಕಿದ್ದನ್ನು ಬಿಟ್ಟರೇ ಉಳಿದ್ಯಾವ ಕೆಲಸಗಳೂ ಆಗಿಲ್ಲ.ಕೆರೆಯ ಅಭಿವೃದ್ಧಿ ಹೆಸರಲ್ಲಿ ಲಕ್ಷಾಂತರ ರೂ. ಅನುದಾನವನ್ನು ಗುಳುಂ ಮಾಡುವ ತಂತ್ರ ಹೆಣೆಯಲಾಗಿದೆ ಎಂದು ಗ್ರಾಮದ ಸಾರ್ವಜನಿಕರು ಆರೋಪಿಸಿದ್ದಾರೆ. ಒಂದು ವೇಳೆ ಕೆಲಸ ಪೂರ್ಣಗೊಳಿಸದೇ ವಂಚನೆ ಮಾಡಿದ್ದರೆ ಹೋರಾಟಕ್ಕೂ ಸಿದ್ಧ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಕೆಆರ್‍ಡಿಎಲ್ ಎಎಇಗೆ ಅನೇಕ ಬಾರಿ ಸೂಚಿಸಿದರೂ ತಾಪಂನ ಯಾವುದೇ ಸಭೆಗೆ ಹಾಜರಾಗದೆ, ಸಂಪೂರ್ಣ ಮಾಹಿತಿ ನೀಡದೇ ನುಣುಚಿಕೊಳ್ಳುತ್ತದ್ದಾರೆ ಎಂದು ಇಒ ಹಲವು ಬಾರಿ ಸಭೆಯಲ್ಲಿ ಹೇಳಿದ್ದರೂ ಈ ವರೆಗೂ ಎಇಇ ಯಾವುದೇ ಸಭೆಗೆ ಹಾಜರಾಗಿಲ್ಲ, ಇಂತಹವರಿಗೆ ಪುನಃ ಕೆಲಸ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇಂತಹ ಕಾಮಗಾರಿಗೆ ಚಾಲನೆ ನೀಡುವ ಶಾಸಕ ದೊಡ್ಡಮನಿ, ನಂತರ ಕಾಮಗಾರಿಗಳು ಯಾವ ಸ್ಥಿತಿಯಲ್ಲಿವೆ, ಹಾಗೂ ಗುಣಮಟ್ಟದ ಕಾಮಗಾರಿ ನಡೆಯುತ್ತಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುತ್ತಿರಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಕೆರೆಯ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ, ಆದರೆ ಕಾಮಗಾರಿಯನ್ನು ಪೂರ್ಣಗೊಳಿಸದೇ ಬಿಲ್ ತೆಗೆದಿರಬಹುದು ಹಾಗೂ ತಾಲೂಕಿನಾದ್ಯಂತ ಕೆಆರ್‍ಡಿಎಲ್ ಇಲಾಖೆಯವರು ಮಾಡಿದಂತಹ ಕಾಮಗಾರಿಗಳು ಕಳಪೆ ಮಟ್ಟದ್ದಾಗಿವೆ ಆದ್ದರಿಂದ ಇದಕ್ಕೆ ಸಂಬಂದಿಸಿದ ಮೇಲಾಧಿಕಾರಿಗಳು ಎಎಇ ಅವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಬೆಳ್ಳಟ್ಟಿ ಸಾರ್ವಜನಿಕರ ಆಗ್ರಹವಾಗಿದೆ.

loading...