ಅಜ್ಜಿಕಟ್ಟಾ ಶಾಲೆಗೆ ಕಪಾಟು ಕೊಡುಗೆ

0
30
loading...

ಅಂಕೋಲಾ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಕೋಲಾ ಬಿ, ಪುಂಡಲೀಕ ಬೇಣ, ಅಂಬಾರಕೊಡ್ಲ, ಬೇಳಾಬಂದರ್‌ ಒಕ್ಕೂಟದ ವತಿಯಿಂದ ಪಟ್ಟಣದ ಅಜ್ಜಿಕಟ್ಟಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಪಾಟನ್ನು ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಯೋಜನಾಧಿಕಾರಿ ನಾಗರತ್ನ ಹೆಗಡೆ, ಯೋಜನೆಯ ಎಲ್ಲ ಕಾರ್ಯ ಚಟುವಟಿಕೆಗೆ ಶಾಲೆಯ ಸಹಕಾರ ಸದಾ ಇದ್ದು, ಈ ಹಿನ್ನೆಲೆಯಲ್ಲಿ ಈ ಕಪಾಟು ನೀಡುವ ಮೂಲಕ ಶಾಲೆಯ ಸಹಕಾರ ಸ್ಮರಿಸಿಕೊಳ್ಳಲಾಗಿದೆ ಎಂದರು. ವರದಿಗಾರ ವಿಠ್ಠಲದಾಸ ಕಾಮತ್‌ ಕಪಾಟು ಕೀಲಿಕೈಯನ್ನು ಮುಖ್ಯಾಧ್ಯಾಪಕಿ ಕುಸುಮಾ ಲಕ್ಷ್ಮೇಶ್ವರ ಅವರಿಗೆ ಹಸ್ತಾಂತರಿಸಿದರು. ಶಿಕ್ಷಕಿ ಭವಾನಿ ನಾಯಕ ಮಾತನಾಡಿದರು. ಮೇಲ್ವಿಚಾರಕ ಈಶ್ವರ ದೇಸಾಯಿ ವಂದಿಸಿ ದರು. ಕಸ್ತೂರಿ ಆಗೇರ್‌ ನಿರ್ವಹಿಸಿದರು. ಸೇವಾ ಪ್ರತಿನಿಧಿ ಪದ್ಮಾ, ಸುಮಾ ರಾಜು ಶಡಗೇರಿ, ರಿಹಾನಾ ಶೇಖ ಮತ್ತಿತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here