ಆಧುನಿಕ ಭಾರತದಲ್ಲಿ ಮಹಿಳೆಯರ ಪಾತ್ರ ಕುರಿತು ಚಿಂತನೆ

0
350
loading...

ಕನ್ನಡಮ್ಮ ಸುದ್ದಿ-ವಿಜಯಪುರ : ಮಹಿಳೆ ಸ್ವಾಭಿಮಾನಿಯಾಗಿ ಎಲ್ಲ ಕ್ಷೇತ್ರದಲ್ಲಿ ದುಡಿಯುವ ಕ್ಷಮತೆಯನ್ನು ಹೊಂದಿದ್ದಾಳೆ ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷೆ ನೀಲಮ್ಮಾ ಮೇಟಿ ಹೇಳಿದರು.
ತಾಳಿಕೋಟಿ/ಮುದ್ದೇಬಿಹಾಳ ತಾಲೂಕಿನ ಮೂಕಿಹಾಳ ಗ್ರಾಮದಲ್ಲಿ ಹಜರತ್‌ ಲಾಡ್ಲೆಮಶಾಕ ದರ್ಗಾ ಕಮೀಟಿಯಿಂದ 2017ರ ಜಾತ್ರಾ ಮಹೋತ್ಸವದಲ್ಲಿ ಆಧುನಿಕ ಭಾರತದಲ್ಲಿ ಮಹಿಳೆಯರ ಪಾತ್ರ ಕುರಿತು 2ನೇ ದಿನದ ಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಯೊಂದು ಕ್ಷೇತ್ರದಲ್ಲಿ ಕಾರ್ಯಸಾಧನೆ ಮಾಡುವ ಗುಣವಂತಿಕೆ ಹೊಂದಿದ್ದಾಳೆ. ಮಹಿಳೆ ಅಬಲೆ ಮತ್ತು ಅಸಮರ್ಥಳಲ್ಲ. ಕುಟುಂಬದ ಸರ್ವಾಂಗೀಣ ಅಭಿವೃದ್ದಿಗಾಗಿ ದುಡಿಯುವ ಮಹಿಳೆ ಅತ್ಯಂತ ಗೌರವಕ್ಕೆ ಪಾತ್ರಳಾಗಿದ್ದಾಳೆ. ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ತೀವ್ರವಾಗಿ ಖಂಡಿಸುತ್ತೇನೆ. ಸ್ವಾಭಿಮಾನಿಯಾಗಿ ಬದುಕುವ ಮಹಿಳೆಗೆ ತೊಂದರೆಯಾಗಬಾರದು. ವಿದ್ಯಾವಂತಳಾದ ಮಹಿಳೆ ಸಮಾಜಕ್ಕೆ ಮಾದರಿಯಾಗಿ ಬದುಕಬೇಕು ಎಂದರು.
ಮಾಜಿ ಜಿ.ಪಂ ಅಧ್ಯಕ್ಷೆ ಅಪ್ಸರಾಬೇಗಂ ಚಪ್ಪರಬಂದ ಮಾತನಾಡಿ, ಮಹಿಳೆಯರು ಸಮಾನ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಪುರುಷರಿಗೆ ಸಿಗುವ ಸೌಲಭ್ಯಗಳು ಮಹಿಳೆಯರಿಗೆ ಸಿಗುತ್ತಿಲ್ಲ. ಮರಚಿಕೆಯಾಗಿವೆ. ಮಹಿಳೆಗೆ ಆಸ್ತಿ ಹಕ್ಕಿನಲ್ಲಿ ತಾರತಮ್ಯ ಕಾಣುತ್ತಿದ್ದೇವೆ. ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಭ್ರೂಣ ಹತ್ಯೆ ಜಾಗೃತಿ ಕಾರ್ಯಕ್ರಮ ಮಾಡುವುದರ ಮೂಲಕ ಭ್ರೂಣ ಹತ್ಯೆಯನ್ನು ತಡೆಯುವ ಮಾರ್ಗವನ್ನು ಕಂಡುಕೊಳ್ಳಬೇಕು ಎಂದರು.
ಕೃಷಿ ಅಧಿಕಾರಿ ಶ್ರೀಮತಿ ನಾಡಗೌಡ ಮಾತನಾಡಿ ಮಹಿಳಾ ಪರ ಕಾನೂನುಗಳು ಇನ್ನೂ ಕಠಿಣವಾಗಿರಬೇಕು. ಶಿಕ್ಷೆ ಶೀಘ್ರವಾಗಬೇಕು. ಗ್ರಾಮೀಣ ಸಮಾಜದಲ್ಲಿ ಮಹಿಳಾ ಕಾನೂನುಗಳ ಕುರಿತು ಜಾಗೃತಿ ಮೂಡಿಬೇಕು. ಮಹಿಳೆಯರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಬೇಕು. ಗ್ರಾಮೀಣ ಸಮಾಜದಲ್ಲಿ ಮಹಿಳೆಯರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆ ಸರಕಾರದ ಸೌಲಭ್ಯಗಳನ್ನು ತಿಳಿಸಬೇಕು ಎಂದರು.
ಹಿರಿಯ ನ್ಯಾಯವಾದಿ ಎಂ.ಎಂ. ಸುತಾರ, ಜೆಡಿಎಸ್‌ ಕಾರ್ಯಾಧ್ಯಕ್ಷ ದಿಲಾವರ್‌ ಖಾಜಿ, ಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಬಿ.ಎಸ್‌. ಪಾಟೀಲ ಯಾಳಗಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜುಗೌಡ ಪಾಟೀಲ, ಕೆಂಚಪ್ಪ ಬಿರಾದಾರ ಮಾತನಾಡಿದರು. ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಮುಖ್ಯ ಅಧ್ಯಾಪಕಿ ಸುನಂದಾ ಕೋಳೂರ ಹೋರಾಟಗಾರ ಸಿದ್ದಣ್ಣ ಮೇಟಿ, ಕಾಶೀಮಪಟೇಲ ಪಾಟೀಲ, ಬಿ.ಎಸ್‌. ಇಸ್ಲಾಮಪೂರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ವಿಶ್ವನಾಥ ಗಣಾಚಾರಿ ಮತ್ತು ಆರ್‌.ಎಚ್‌. ವಾಲಿಕಾರ ಕಾರ್ಯಕ್ರಮ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here