“ಇಟನಾಳದಲ್ಲಿ ಅದ್ದೂರಿಯಾಗಿ ಜರುಗಿದ ಶ್ರೀ ಮೌನೇಶ್ವರ ಜಾತ್ರೆ”

0
27
loading...

“ಇಟನಾಳದಲ್ಲಿ ಅದ್ದೂರಿಯಾಗಿ ಜರುಗಿದ ಶ್ರೀ ಮೌನೇಶ್ವರ ಜಾತ್ರೆ”

ಗುರ್ಲಾಪೂರ 16: ಸಮೀಪದ ಇಟನಾಳ ಗ್ರಾಮದ ಶ್ರೀ ಮೌನೇಶ್ವರ ಜಾತ್ರೆಯೂ ದಿ: 13ರಂದು ಪ್ರತಿ ವರ್ಷದಂತೆ ಈ ವರ್ಷವು ವಿಜೃಂಭನೆಯಿಂದ ಜರಗಿತು.

ಶ್ರೀ ಶ್ರೀ ಶ್ರೀ ಶಿವಯೋಗಿ ಡಾ|| ಮುರುಘರಾಜೇಂದ್ರ ಮಹಾಸ್ವಾಮಿಗಳು ಸುಕ್ಷೇತ್ರ ಮುಗಳಖೋಡ ಇವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮಗಳು ಜರುಗಿದವು ಹಾಗೂ ಶ್ರೀ ಶ್ರೀ ಶ್ರೀ ವೇ ಮೂ ಮೌನೇಶ್ವರ ಮಹಾಸ್ವಾಮಿಗಳು ದಕ್ಷೀಣ ಕಾಶಿ ತಿಂಥಣಿ ಇವರ ನೇತೃತ್ವದಲ್ಲಿ 251 ದಂಪತಿಗಳಿಂದ ಶ್ರೀ ವಿಶ್ವಕರ್ಮ ಹೋಮ ಮಹಾಯಜ್ಞಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಹೋಮ ಮಹಾಯಜ್ಞಗಳಲ್ಲಿ ಪಾಲ್ಗೊಳ್ಳುವದರಿಂದ ದುಷ್ಟ ಶಕ್ತಿಗಳು ನಾಶವಾಗಿ ಮನುಷ್ಯನಲ್ಲಿ ಭಕ್ತಿ ಭಾವಗಳು ಹೆಚ್ಚುತ್ತಾ ಸುಖ-ಶಾಂತಿ ನೆಲೆಸುವುದು ಎಂದು ಅವರು ಹೇಳಿದರು.

ಶ್ರೀ ಶ್ರೀ ಪಾದಬೋಧ ಮಹಾಸ್ವಾಮಿಗಳು ಸಿದ್ದ ಸಂಸ್ಥಾನ ಮಠ, ಮೂಡಲಗಿ ಇವರು ಮಾತನಾಡಿ ಹೋಮ ಮಹಾಯಜ್ಞಗಳು ಜಗತ್ತಿನ ಕಲ್ಯಾಣಕ್ಕಾಗಿ ಆದಿಕಾಲದಿಂದ ನಡೆದುಕೊಂಡು ಬಂದ ಪದ್ದತಿ ಹೋಮ ಮಹಾಯಜ್ಞಗಳನ್ನು ನಡೆಸುವುದರಿಂದ ಸಿಸ್ಟರ ರಕ್ಷಣೆ, ದುಷ್ಟರ ನಾಶದಿಂದ ಜಗತ್ತಿನಲ್ಲಿ ಸುಖ-ಶಾಂತಿ ಲಭಿಸುವುದೆಂದು ಹೇಳಿದರು.

ಕನ್ನಡದ ಕಬೀರ ಇಬ್ರಾಹಿಂ ಸುತಾರ ಅವರಿಂದ ಪ್ರವಚನ ಕಾರ್ಯಕ್ರಮ ನಡೆಯಿತು.

3 ಗಂಟೆಗೆ ಶ್ರೀ ಸಿರಸಂಗಿ ಕಾಳಿಕಾದೇವಿ ಶ್ರೀಶೈಲ್‌ ಮಲ್ಲಿಕಾರ್ಜುನ ಶ್ರೀ ಮೌನೇಶ್ವರ ಪಲ್ಲಕ್ಕಿ ಉತ್ಸವದೊಂದಿಗೆ ಗಂಗಾಸ್ನಾನ 63 ಜನ ಪಟ್ಟದ ಪುರವಂತರ ಹಾಗೂ ತಿಂಥಣಿ ಇವರಿಂದ ಮಹಾ ಸೇವೆಯೂ ಸಕಲ ವಾದ್ಯಮೇಳದೊಂದಿಗೆ ಜರುಗಿತು.

ಕಾರ್ಯಕ್ರಮದಲ್ಲಿ ಬಿ.ಆರ್‌.ಪಾಟೀಲ, ಕಲ್ಲಪ್ಪ ಬಡಿಗೇರ, ಚನ್ನಪ್ಪ ಮಗದುಮ್‌, ದೂಳಪ್ಪ ಮುತ್ನಾಳ, ಅರ್ಜುನ ನಾಯ್ಕವಾಡಿ, ಧರೇಪ್ಪಾ ಬಾಗ್ಗೋಳ, ಮಾಧು ಮಾರಾಪೂರ, ಈರಪ್ಪ ಬಡಿಗೇರ, ಅರುಣ ಪತ್ತಾರ, ಎ.ಎಸ್‌.ಗದಾಡಿ, ವಿಠ್ಠಲ ಅರಭಾಂವಿ, ಚನ್ನಪ್ಪ ಪಾಟೀಲ, ಗಿರಿಗೌಡ ಪಾಟೀಲ, ಸಂಕಪ್ಪ ಸುಣಧೋಳಿ, ಮಹಾಂತೇಶ ಬೆನ್ನಳ್ಳಿ, ಮಾರುತಿ ಬ್ಯಾಕೂಡ, ಬಸು ಬೆಳವಿ, ಕಾಳಪ್ಪ ಬಡಿಗೇರ, ವಿರುಪಾಕ್ಷ ಬಡಿಗೇರ ಹಾಗೂ ಅಪಾರ ಜನ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here