ಎಪಿಎಂಸಿ ಫಲಿತಾಂಶ: ಯಾರಿಗೆ ಸಂಕ್ರಾಂತಿ-ಯಾವ ಪಕ್ಷಕ್ಕೆ ಜಯ

0
26
loading...

ಖಾಜಾಮೈನುದ್ದಿನ್‌ ಪಟೇಲ್‌

ವಿಜಯಪುರ :ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆಯ ಅಭ್ಯರ್ಥಿಗಳಿಗೆ ಸಂಕ್ರಾಂತಿವು ಯಾರಿಗೆ ಒಲಿಯುತ್ತದೆ ಎಂದು ನೋಡಲು ಎಲ್ಲರು ಕಾತುರದಲ್ಲಿ ಇದ್ದಾರೆ.

ಇಂದು ಬೆಳಿಗ್ಗೆ 8 ಗಂಟೆಯಿಂದ ಮತ ಏಣಿಕೆ ಕಾರ್ಯ ನಡೆಯಲಿದೆ. ಮಧ್ಯಾಹ್ನ ಪಲಿತಾಂಶ ಹೊರಬರಲಿದೆ. ಸಂಕ್ರಾಂತಿ ಹಬ್ಬದ್ದು ವಿಜಯಲಕ್ಷ್ಮಿ ಒಲಿದಿದ್ದಾಳೆ ಎಂಬುದು ಹೊರಬರಲಿದೆ. ಜಯದ ಸಂಕೇತ ಯಾವ ಪಕ್ಷದ ಕೈ ಸೇರಲಿದೆ ಎಂದು ಎಲ್ಲರಲ್ಲಿ ಕುತುಹಲ ಇದೆ.

ಯಾವ ಪಕ್ಷದ ಜಯ: ಜಿಲ್ಲೆಯಲ್ಲಿ ಒಟ್ಟು 55 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು, 50 ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು, 12 ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳು ಹಾಗೂ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳದ 7 ಅಭ್ಯರ್ಥಿಗಳ ಭವಿಷ್ಯ ಮತದಾರರು ಬರಿಯಲಿದ್ದಾರೆ. ಜಿಲ್ಲೆಯ ಎಲ್ಲ ಪಕ್ಷದ ರಾಜಕೀಯ ನಾಯಕರು ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ತಮ್ಮ ಬೆಂಬಲಿಗರ ಗೆಲುವಿಗೆ ಅಂತಿಮ ಕಸರತ್ತು ನಡೆಸುತ್ತಿದ್ದಾರೆ.ಈ ಚುನಾವಣೆಯಲ್ಲಿ ಮಾಜಿ ಹಾಲಿ, ಶಾಸಕರುಗಳು ತಮ್ಮ ತಮ್ಮ ಬೆಂಬಲಿಗರನ್ನು ನಿಲ್ಲಿಸಿ ತಮ್ಮ ಪ್ರತಿಷ್ಟೆಯನ್ನು ಉಳಿಸಿಕೊಳ್ಳಲು ಕೇಲವು ದಿನಗಳ ಕಾಲ ಭರದ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಸಿಕೊಂಡಿದ್ದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆ ಮುಂಬರುವ 2018 ರ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಭವಿಷ್ಯ ನಿರ್ಧಾರಿಸಿಲು ಸಹಾಯಕ ವಾಗುತ್ತದೆ. ರೈತರು ಯಾವ ಪಕ್ಷಕ್ಕೆ ಬೆಂಬಲ ನೀಡುತ್ತಾರೆ ಎನ್ನುದನ್ನು ಇಲ್ಲಿ ನಿರ್ಧಾವಾಗಲಿದೆ.

ವಿಧಾನಸಭೆ ಚುನಾವಣೆಯಂತೆ ಇಲ್ಲೂ ಸಹ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿತ ಪಕ್ಷ ಮತ ಸೆಳೆಯಲು ಕಸರತ್ತು ಆರಂಭಿಸಿದ್ದರೂ ಮತಗಟ್ಟೆಯತ್ತ ಸುಳಿಯಲು ಮತದಾರರೇ ಬರಲಿಲ್ಲ ಎಂದು ಸುದ್ದಿಯಾಗಿತ್ತು. ಈ ಚುನಾವಣೆಯು ರಾಜಕೀಯ ವ್ಯಕ್ತಿಗಳ ಅಸ್ತಿತ್ವವನ್ನು ಏಷ್ಟರಮಟ್ಟಿಗೆ ಉಳಿಸಿಕೊಡುತ್ತೊ, ತಾವು ನಂಬಿಕೆ ಇಟ್ಟು ನಿಲ್ಲಿಸಿದ್ದ ವ್ಯಕ್ತಿಯು ಎಷ್ಟರ ಮಟ್ಟಿಗೆ ಜನರನ್ನು ಗಳಿಸಿದ್ದಾರೆ ಎಂಬುದು ತಿಳಿಯಬೇಕಾಗಿದೆ. ಹಾಗೇಯೆ ಯಾರು ಈ ಚುನಾವಣೆಯ ವಿಜಯದ ಮಾಲೆಯನ್ನು ತಮ್ಮ ಕೊರಳಿಗೆ ಹಾಕಿಸಿಕೊಳ್ಳುತ್ತಾರೆ ಎಂದು ಅಭ್ಯರ್ಥಿಗಳಿಗೆ ಕೂತುಹನ ನಿರ್ಮಾಣವಾಗಿದೆ.

==

ಜಿಲ್ಲೆಯ 4 ಎಪಿಎಂಸಿಗಳ 56 ಸ್ಥಾನದ ಪೈಕಿ 14 ಅಭ್ಯರ್ಥಿ ಅವಿರೋಧ ಆಯ್ಕೆಯಾಗಿದ್ದು, 42 ಕ್ಷೇತ್ರಕ್ಕೆ ಮತದಾನ ನಡೆದಿದ್ದು, ವಿಜಯಪುರ- ಬಸವನಬಾಗೇವಾಡಿ ಎಪಿಎಂಸಿ ಚುನಾವಣೆಗೆ 42 ಅಭ್ಯರ್ಥಿ, ತಾಳಿಕೋಟೆ ಎಪಿಎಂಸಿಗೆ 34 ಅಭ್ಯರ್ಥಿ, ಇಂಡಿ ಎಪಿಎಂಸಿಗೆ 23 ಅಭ್ಯರ್ಥಿ, ಸಿಂದಗಿ ಎಪಿಎಂಸಿಗೆ 24 ಅಭ್ಯರ್ಥಿಗಳು ಸೇರಿದಂತೆ ಒಟ್ಟು ಕ್ಷೇತ್ರಕ್ಕೆ 124 ಅಭ್ಯರ್ಥಿಗಳು ಭವಿಷ್ಯೆ ನಿರ್ಧಾರ.

====

ಮತ ಏಣಿಕೆ ಕೇಂದ್ರಗಳು: ನಗರದ ವಿ.ಬಿ.ದರಬಾರ ಹೈಸ್ಕೂಲ್‌, ಮುದ್ದೇಬಿಹಾಳ ಎಂ.ಜಿ.ವಿ. ಕಾಲೇಜ್‌, ಇಂಡಿ ವೀರಭಾರತಿ ವಿದ್ಯಾ ಕೇಂದ್ರ, ಸಿಂದಗಿ ಗೋಲಗೇರಿ ರಸ್ತೆಯ ಎಚ್‌.ಜಿ.ಕಾಲೇಜ್‌ಗಳಲ್ಲಿ ಮತ ಏಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮಸ್ಟರಿಂಗ್‌ ಮತ್ತು ಡಿ ಮಸ್ಟರಿಂಗ್‌ ಕೇಂದ್ರಗಳನ್ನು ವಿಜಯಪುರ ತಾಲೂಕಿಗೆ ಸಂಬಂಧಿಸಿದಂತೆ ವಿಜಯಪುರ ವಿ.ಬಿ.ದರಬಾರ ಹೈಸ್ಕೂಲ್‌, ಬಸವನಬಾಗೇವಾಡಿಗೆ ಸಂಬಂಧಿಸಿದಂತೆ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಮುದ್ದೇಬಿಹಾಳಗೆ ಸಂಬಂಧಿಸಿದಂತೆ ಎಂ.ಜಿ.ವಿ.ಸಿ. ಕಾಲೇಜ್‌ ಮುದ್ದೇಬಿಹಾಳ, ಇಂಡಿಗೆ ಸಂಬಂಧಿಸಿದಂತೆ ವೀರಭಾರತಿ ವಿದ್ಯಾ ಕೇಂದ್ರ ಇಂಡಿ ಹಾಗೂ ಸಿಂದಗಿಗೆ ಸಂಬಂಧಿಸಿದಂತೆ ಎಚ್‌.ಜಿ.ಕಾಲೇಜ್‌, ಗೊಲಗೇರಿ ರಸ್ತೆ, ಸಿಂದಗಿಯಲ್ಲಿ ಸ್ಥಾಪಿಸಲಾಗಿದೆ.

loading...

LEAVE A REPLY

Please enter your comment!
Please enter your name here