ಕಮದಾಳ: ಚಿತ್ರಕಲಾ ಶಿಕ್ಷಕರ ಕಾರ್ಯಾಗಾರ

0
21
loading...

ನಿಡಗುಂದಿ: ಶಿಕ್ಷಕ ನಿರಂತರ ವಿದ್ಯಾರ್ಥಿಯಾಗಿ ಸದಾ ಹೊಸ ಹೊಸ ಕಲಿಕೆಯ ಹುಡುಕಾಟದಲ್ಲಿ ತೊಡಗಿದಾಗ ಮಾತ್ರ ಮಕ್ಕಳಿಗೆ ತೃಪ್ತಿದಾಯಕ ಬೋಧನೆಗೈಯಲು ಸಾಧ್ಯವೆಂದು ಜಿಲ್ಲೆಯ ಹಿರಿಯ ಚಿತ್ರಕಲಾವಿದ, ಸಾಹಿತಿ ಡಾ ಫ.ಗು. ಸಿದ್ದಾಪುರ ಹೇಳಿದರು.

ಪಟ್ಟಣದ ಕಮದಾಳಪುನರ್ವಸತಿ ಕೇಂದ್ರದಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗಿದ ಬಸವನಬಾಗೇವಾಡಿ ತಾಲ್ಲೂಕು ಚಿತ್ರಕಲಾ ಮತ್ತು ವೃತ್ತಿ ಶಿಕ್ಷಣ ಶಿಕ್ಷಕರ ವಿಷಯ ಬೋಧಕರ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಸೃಜನಶೀಲ ಅಭಿವ್ಯಕ್ತಿಗೆ ಚಿತ್ರಕಲೆ ಪೂರಕವಾಗಿದ್ದು, ಆ ನಿಟ್ಟಿನಲ್ಲಿ ವಿನೂತನ ರಚನಾತ್ಮಕ ತಂತ್ರಗಾರಿಕೆ ವಿಧಾನ ಮತ್ತು ಶೈಲಿಯೊಂದಿಗೆ ಪರಿಣಾಮಕಾರಿಯಾಗಿ ವಿಷಯ ಮಂಡಿಸಲು ಚಿತ್ರಕಲಾ ಶಿಕ್ಷಕ ಸಮೂಹ ಮುಂದಾಗಬೇಕು ಎಂದರು.

ಶಿಕ್ಷಣ ವೃತ್ತಿಯಲ್ಲಿದ್ದವರು, ಎಲ್ಲಕ್ಕಿಂತ ಹೆಚ್ಚು ಆನಂದ ಪಡೆಯುವ ಸೌಭಾಗ್ಯ, ಸಂಪತ್ತು, ತಮ್ಮದಾಗಿಸಿಕೊಂಡಿದ್ದಾರೆ, ಶಿಕ್ಷಕ ತರಬೇತಿಗಳು ಮುಗಿದ ಬಳಿಕ ನಾನು ಶಿಕ್ಷಕನಾದೇ ಎಂದು ಭಾವಿಸಬಾರದು, ಜ್ಞಾನಕ್ಕೆ ಗಡಿರೇಖೆಯಿಲ್ಲ ಎಂಬುದನ್ನು ಅರಿತು ನಡೆಯಬೇಕು, ಚಿತ್ರಕಲೆ ಒಂದು ಮೂಲೆಯಲ್ಲಿರುವಂತಹ ವಿಷಯವಲ್ಲ, ಅದು ಎಲ್ಲ ವಿಷಯಗಳ ಬೆನ್ನೆಲುಬಾಗಿದೆ, ಈ ಕಲೆ ವಿಶ್ವವ್ಯಾಪಿಯಾಗಿ ಹರಡಿದೆ ಎಂದರು. ಎ.ಎಂ. ಚೆಟ್ಟಿ ಎಂಬುವವರು ರಾಜ್ಯದ ಶ್ರೇಷ್ಠ ನೈಜ ಸೃಜನಶೀಲ ಕಲಾವಿದರೊಬ್ಬರು, ಇವರ ಆದರ್ಶ ನಮಗೆ ಮಾದರಿ, ಇಳಿ ವಯಸ್ಸಿನಲ್ಲಿಯೂ ಮೀಸೆಗೆ ಬಣ್ಣ ಹಚ್ಚುವುದರ ಜೊತೆಗೆ ಸ್ಕೆಚ್‌ ಹಾಕುವುದನ್ನು ಎಂದಿಗೂ ಮರೆಯಲಿಲ್ಲ, ಅವರಿಗೆ ಇನ್ನೂ ನಾನು ತರುಣ ಎನ್ನುವ ಮನೋಭಾವನೆ ಇದೆ, ಹೀಗಾಗಿ ಎಲ್ಲಾ ಶಿಕ್ಷಕರು ಇಳಿ ವಯಸ್ಸಿನಲ್ಲಿಯೂ ಶ್ರೇಷ್ಠತೆಯನ್ನು ಪ್ರದರ್ಶಿಸಬೇಕು ಎಂದರು.

ಸಾಧಕರಿಗೆ ಸನ್ಮಾನ: ವಿಜಯಪುರ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ನೂತನ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಸ್‌.ಐ. ಬಗಲಿ, ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಜಿ.ಎಸ್‌. ಪಾಟೀಲ, ರಾಜ್ಯ ಮಟ್ಟದ ವೃತ್ತಿ ಶಿಕ್ಷಣ ಕಲಾ ಪ್ರದರ್ಶನದಲ್ಲಿ ತಮ್ಮ ಕೌಶಲ್ಯ ಮೆರೆದಿರುವ ಬಿ.ಬಿ. ಕಲಾಲ್‌, ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕ ಎಲ್‌.ಬಿ. ಬಜಂತ್ರಿ, ಖ್ಯಾತ ಅಂತರರಾಷ್ಟ್ರೀಯ ಕಲಾವಿದ ಕೆ.ಗಂಗಾಧರ, ಶಿವನಗೌಡ ಪಾಟೀಲ, ಹನುಮಂತ ಸುನಗದ, ಹನುಮಂತಗೌಡ ಪಾಟೀಲ, ತಿಪ್ಪಣ್ಣ ಕುಂದರಗಿ, ಡಾ ಸಂಗಮೇಶ ಗೂಗಿಹಾಳ, ಜೆ.ಎಸ್‌. ಪಾಟೀಲ, ಐ.ಆರ್‌. ಮಠ ಮೊದಲಾದವರು ವೇದಿಕೆಯ ಮೇಲಿದ್ದರು. ಸಂಘಟನೆಯ ಜಿಲ್ಲಾಧ್ಯಕ್ಷ ಎಸ್‌.ಐ. ಬಗಲಿ ಪ್ರಾಸ್ತವಿಕವಾಗಿ ಮಾತನಾಡಿದರು. ಜಿ.ಆರ್‌. ಜಾಧವ ಸ್ವಾಗತಿಸಿದರು. ಬಿ.ಎಸ್‌. ಹಂಚಲಿ ನಿರೂಪಿಸಿದರು. ಪಿ.ಬಿ. ಕೂಚಬಾಳ ವಂದಿಸಿದರು.

loading...

LEAVE A REPLY

Please enter your comment!
Please enter your name here