ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಭೀಮಸೇನ ಬಾಗಿ ಆಯ್ಕೆ

0
29
loading...

ಹುಕ್ಕೇರಿ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಹಾಲುಮತ ಸಮಾಜದ ಯುವ ನ್ಯಾಯವಾದಿ ಭೀಮಸೇನ ಬಾಗಿ ಅವರನ್ನು ಆಯ್ಕೆಗೊಳಿಸಿದ ರೈತ ಬಾಂಧವರಿಗೆ ತುಂಬಾ ಆಭಾರಿಯಾಗಿದ್ದೇವೆ ಎಂದು ಸಮಾಜದ ಗೌರವಾಧ್ಯಕ್ಷ ನಾಗಪ್ಪಣ್ಣಾ ಕರ್ಜಗಿ ಹೇಳಿದರು. ಅವರು ರವಿವಾರ ದಿ.15 ರಂದು ಸಂಕೇಶ್ವರದಲ್ಲಿ ಎ.ಪಿ.ಎಂ.ಸಿ ಚುನಾವಣೆಯಲ್ಲಿ ಬಹುಮತದಿಂದ ಆಯ್ಕೆಯಾದ ಮದಿಹಳ್ಳಿ ಕ್ಷೇತ್ರದ ನ್ಯಾಯವಾದಿ ಭೀಮಸೇನ ಬಾಗಿ ಅವರನ್ನು ಸತ್ಕರಿಸಿ ಮಾತನಾಡುತ್ತಿದ್ದರು.ತಾಲೂಕಿನಲ್ಲಿ ನಮ್ಮ ಸಮಾಜಕ್ಕೆ ಆದ್ಯತೆ ನೀಡಿದ ಕತ್ತಿ ಸಹೋದರರಿಗೂ ಕೃತಜ್ಞತೆ ಅರ್ಪಿಸಿದರು.ಸಮಾಜದ ತಾಲೂಕಾಧ್ಯಕ್ಷ ಭೀಮಣ್ಣಾ ರಾಮಗೋನಟ್ಟಿ ಮಾತನಾಡಿದರು.ಸತ್ಕಾರ ಸ್ವೀಕರಿಸಿ ಮಾತನಾಡಿದ ಭೀಮಸೇನ ಬಾಗಿ ಚುನಾವಣೆಯಲ್ಲಿ ಶೃಮಿಸಿದ ಎಲ್ಲ ಗಣ್ಯರಿಗೂ,ಆತ್ಮೀಯರಿಗೂ ಹಾಗೂ ಪರೋಕ್ಷ,ಅಪರೋಕ್ಷವಾಗಿ ಸಹಕರಿಸಿದವರನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಹಾಲುಮತ ಸಮಾಜದ ಗಣ್ಯರಾದ ಗಜಾನನ ಕೊಳ್ಳಿ,ಶಂಕರರಾವ ಹೆಗಡೆ,ತಾ.ಪಂ ಸದಸ್ಯ ದುಂಡಪ್ಪಾ ಮೆಕ್ಕಳಕಿ,ಕೆಂಪಣ್ಣಾ ಪೂಜೇರಿ,ಪುಂಡಲೀಕ ಕಮತೆ,ಸಂತೋಷ ನೆಳ್ಳಿ ಮೊದಲಾದವರಿದ್ದರು. ನ್ಯಾಯವಾದಿ ಅಪ್ಪಾಸಾಹೇಬ ಹೆಗಡೆ ಸ್ವಾಗತಿಸಿ,ನಿರೂಪಿಸಿ,ವಂದಿಸಿದರು.

loading...

LEAVE A REPLY

Please enter your comment!
Please enter your name here