ಕೌಟಿಲ್ಯ ಗ್ರಾಹಕರ ವೇದಿಕೆಯಲ್ಲಿ ಮಕ್ಕಳ ಅಂಗಡಿಗಳ ಕಾರ್ಯಕ್ರಮ

0
33
loading...

ಅಂಕೋಲಾ : ಪಟ್ಟಣದ ಕೇಣಿ ಸರಕಾರಿ ಪ್ರೌಢ ಶಾಲೆಯಲ್ಲಿ ಜ.10 ರಂದು ಆಯೋಜಿಸಿದ ಕೌಟಿಲ್ಯ ಗ್ರಾಹಕರ ವೇದಿಯನ್ನು ಪುರಸಭೆ ಸದಸ್ಯ ಸಂದೀಪ ಜಿ. ಬಂಟ ಅವರು ಉದ್ಘಾಟಿಸುವ ಮೂಲಕ ವಿದ್ಯಾರ್ಥಿಗಳು ಅಂಗಡಿಯಲ್ಲಿ ವ್ಯಾಪರ ಮಾಡಲು ಚಾಲನೆ ನೀಡಿದರು.

ಬಳಿಕ ಅವರು ಮಾತನಾಡಿ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ದಿನಿತ್ಯದ ಚಟುವಟಿಕೆಯಲ್ಲಿ ವ್ಯವಹಾರಿಕ ವಾಗಿ ಹಾನಿ ಮತ್ತು ಲಾಭದ ಅನುಭವನ್ನು ತಿಳಿದುಕೊಳ್ಳುವ ಮೂಲಕ ಕೌಟಿಲ್ಯ ಗ್ರಾಹಕರ ವೇದಿಕೆ ಸಹಕಾರಿ ಯಾಯಿತು ಎಂದು ಸಂದೀಪ ಬಂಟ ಅಭಿಪ್ರಾಯಪಟ್ಟರು.

ಕ್ಷೇತ್ರ ಸಮನ್ವಯಾಧಿಕಾರಿ ರಾಜೇಂದ್ರ ನಾಯ್ಕ ಅವರು ಮಾತನಾಡಿ ವಿದ್ಯಾರ್ಥಿಗಳು ಹೈಸ್ಕೂಲ್‌ ಮಟ್ಟದಲ್ಲಿ ವ್ಯವಹಾರ ಜ್ಞಾನದ ಅನುಭವ ಪಡಿದುಕೊಂಡರೆ ಮುಂದಿನ ಜೀವನದಲ್ಲಿ ವಾಣಿಜ್ಯ ಕ್ಷೇತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುಲು ಸಹಾಯವಾಗುತ್ತದೆ.

ಪಿ.ಎಂ.ಹೈಸ್ಕೂಲ್‌ ಶಿಕ್ಷಕ ನಾಗಪತಿ ಹೆಗಡೆ, ಮುಖ್ಯೋಧ್ಯಾಯಪಕಿ ಜಯಶ್ರೀ ನಾಯಕ ಮಾತನಾಡಿದರು. ಶಿಕ್ಷಕರಾದ ರಮಾನಂದ ವಿ.ನಾಯಕ, ಶಾಂತಾರಾಮ ವಿ. ನಾಯಕ, ವಿಜಯ ಎಚ್‌. ಗಾಂವಕರ, ರವಿ ಎನ್‌. ಮಿಟಭಾವಕರ, ವೀಣಾ ನಾಯಕ, ಮಾಲತಿ ಎಂ.ನಾಯ್ಕ, ಶುಭಕರಿ ಎನ್‌.ನಾಯಕ, ಎಸ್‌.ಡಿ.ಎಂ.ಸಿ ಅಧ್ಯಕ್ಷ ವಿಜಯ ಬಂಟ ಸೇರಿದಂತೆ ಹಲವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here