ಗಣಾಚಾರಿ ಕಾಲೇಜಿನ ವಿದ್ಯಾರ್ಥಿನಿಯರ ಸಾರಿ ಡೇ

0
69
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ: ಪಟ್ಟಣದ ಗಣಾಚಾರಿ ಶಿಕ್ಷಣ ಸಂಸ್ಥೆಯ ಈರಮ್ಮ ಬಸಪ್ಪ ಗಣಾಚಾರಿ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಬುಧವಾರ ಹಬ್ಬದ ವಾತಾವರಣ ಸೃಷ್ಠಿಯಾಗಿತ್ತು ಪ್ರತಿದಿನ ಕಾಲೇಜಿಗೆ ಸಮವಸ್ತ್ರದಲ್ಲಿ ಬರುವ ವಿದ್ಯಾರ್ಥಿನಿಯರು ತಲೆ ತುಂಬ ಹೂವು, ಕೈತುಂಬಾ ಬಳೆ, ಭವ್ಯ ಭಾರತದ ಪರಂಪರೆಯನ್ನು ಬಿಂಬಿಸುವ ರಂಗು ರಂಗೀನ ಸೀರೆಗಳನ್ನು ಉಟ್ಟುಕೊಂಡು ಗಮನ ಸೆಳೆದರು.

ಕಾಲೇಜಿಲ್ಲಿ ನಡೆದ ಸಾರಿ ಡೇ ನಿಮಿತ್ಯ ದೇಶಿಯ ಉಡುಗೆ ತೊಟ್ಟು ಸಂಭ್ರಮಿಸಿದರು.

ಭಾರತೀಯ ಸಂಸ್ಕೃತಿ ಬಿಂಬಿಸುವ ದೇಶಿಯ ಇಲಕಲ್ಲ, ಬನಾರಸ್‌, ಕಾಂಜಿವರಂ, ಮೈಸೂರ ಸಿಲ್ಕ ಮುಂತಾದ ತರೇಹವಾರಿ ರಂಗುರಂಗೀನ ಸೀರೆಗಳನ್ನು ತೊಟ್ಟು ಖುಷಿಪಟ್ಟರು. ವಿದ್ಯಾರ್ಥಿನಿ ಬಸಮ್ಮ ಕಲಭಾವಿ ಮಾತನಾಡಿ, ಇಂದಿನ ಯುವಕರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ದೇಶಿಯ ಕಲೆಯನ್ನು ಮರೆಯುತ್ತಿದ್ದಾರೆ. ಪ್ರಚೋದನಕಾರಿ ಬಟ್ಟೆಗಳನ್ನು ಧರಿಸಿ ಇನ್ನೊಬ್ಬರಿಗೆ ಅಸಹ್ಯವಾಗುವ ರೀತಿಯಲ್ಲಿರದೆ ನಮ್ಮ ಸಂಸ್ಕೃತಿಯನ್ನು ಸಾರುವ ಇಂತಹ ದೇಶಿಯ ಉಡುಗೆಗಳನ್ನು ತೊಡುವದರಿಂದ ಎಲ್ಲರೂ ಗೌರವದಿಂದ ಕಾಣುತ್ತಾರೆ. ನಮಗೆ ಸಾರಿಡೇ ಮಾಡಲು ಅವಕಾಶ ಕಲ್ಪಿಸಿ ನಾಡಿಗೆ ಒಳ್ಳೆಯ ಸಂದೇಶ ಸಾರಲು ಅವಕಾಶ ಮಾಡಿಕೊಟ್ಟ ಉಪನ್ಯಾಸ ಬಳಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಉಪನ್ಯಾಸಕಿ ಸವಿತಾ ರೊಟ್ಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ಅಧ್ಯಯನದ ಜೊತೆಗೆ ಭಾರತೀಯ ಇತಿಹಾಸ, ಸಂಸ್ಕೃತಿ, ಕಲೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂದು ವಿದ್ಯಾರ್ಥಿನಿಯರಿಗೆ ದೇಶಿಯ ಸಾರಿ ಡೇ ಅನ್ನು ಆಚರಿಸಲಾಗುತ್ತಿದೆ. ಪ್ರತಿಯೊಬ್ಬರು ಪಾಶ್ಚಿಮಾತ್ಯವನ್ನು ಅನುಕರಣೆ ಮಾಡದೇ ದೇಶಿಯ ಕಲೆಯನ್ನು ಉಳಿಸುವದಾಗಬೇಕು ಎಂದರು.

ಪ್ರಾಚಾರ್ಯ ಡಾ. ಸಿ.ಬಿಗಣಾಚಾರಿ ಮಾತನಾಡಿ, ಇಂದಿನ ಯುವಕರು ದೇಶಿಯ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವದು ಅವಶ್ಯವಾಗಿದೆ ಎಂದರು. ಸಂದರ್ಭದಲ್ಲಿ ಅರುಣಾ ಬೋಳೆತ್ತಿನ, ಭಾರತಿ ಪಾಟೀಲ, ಸೀಮಾ ರೂಡಬಸಣ್ಣವರ, ಸಿ.ಪಿ.ಕುಸುಗಲ್‌, ಪ್ರೇಮಾ ದಿನ್ನಿಮನಿ ಹಾಗೂ ಸಾವಿರಾರು ವಿದ್ಯಾರ್ಥಿನಿಯರು ಇದ್ದರು.

loading...

LEAVE A REPLY

Please enter your comment!
Please enter your name here