ಗಾಂಜಾ ಮಾರಾಟ: ವ್ಯಕ್ತಿ ಬಂಧನ

0
37
loading...

ಕನ್ನಡಮ್ಮ ಸುದ್ದಿ ಬೆಳಗಾವಿ: ಇಲ್ಲಿನ ವೈಭವ ನಗರದ ಬಸ್‌ ನಿಲ್ದಾಣ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ಸೋಮವಾರ ಬೆಳಿಗ್ಗೆ ನಗರದಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಅಶೋಕ ನಗರದ ನಿಕಾಬ್‌ ದಸ್ತಗೀರಸಾಬ ಪಿರಜಾದೆ (36) ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ ಪೊಲೀಸರು ಬಂಧಿತನಿಂದ ರೂ. 6000 ಮೌಲ್ಯದ 600ಗ್ರಾಂ. ಗಾಂಜಾ ಮಾರಾಟಕ್ಕೆ ಬಳಕೆ ಮಾಡುತ್ತಿದ್ದ ದ್ವಿಚಕ್ರ ವಾಹನ, ರೂ. 1200 ನಗದು ಹಾಗೂ ಮೊಬೈಲ್‌ ವಶಕ್ಕೆ ಪಡೆದುಕೊಂಡಿದ್ದಾರೆ.
ಮಾರ್ಕೆಟ ಸಹಾಯಕ ಪೊಲೀಸ ಆಯುಕ್ತ ಶಿವುಕುಮಾರ ಮಾರ್ಗದರ್ಶನದಲ್ಲಿ ಎಪಿಎಂಸಿ ಠಾಣೆಯ ಪೊಲೀಸ್‌ ಇನ್ಸಸ್ಪೆಕ್ಟರ ಜೆ.ಎಂ.ಕಾಲಿಮಿರ್ಚಿ ಹಾಗೂ ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ಕುರಿತು ಎಪಿಎಂಸಿ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...

LEAVE A REPLY

Please enter your comment!
Please enter your name here