ಗ್ರಾಹಕರ ಒತ್ತಾಯಕ್ಕೆ ಮಣಿದ ಮೇಲಾಧಿಕಾರಿ

0
29
loading...

ಕನ್ನಡಮ್ಮ ಸುದ್ದಿ-ಘಟಪ್ರಭಾ: ಸ್ಥಳೀಯ ಸಿಂಡಿಕೇಟ್‌ ಬ್ಯಾಂಕ್‌ ಮ್ಯಾನೇಜರನನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಿದ ರೈತ ಸಂಘ, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಒತ್ತಡಕ್ಕೆ ಮಣಿದ ಮೆಲಾಧಿಕಾರಿಗಳು ಮ್ಯಾನೇಜರನನ್ನು ದಿ.21 ರ ಒಳಗಾಗಿ ಬೇರೆ ಕಡೆ ವರ್ಗಾಯಿಸುವ ಭರವಸೆ ನೀಡಿದರು.
ಕಳೆದ 6 ತಿಂಗಳ ಹಿಂದೆ ಘಟಪ್ರಭಾ ಸಿಂಡಿಕೇಟ ಬ್ಯಾಂಕ್‌ಗೆ ಬಂದಿರುವ ಕೇರಳ ಮೂಲದ ಮ್ಯಾನೇಜರ್‌ಗೆ ಇಂಗ್ಲೀಷ ಮತ್ತು ತಮಿಳು ಹೊರತು ಬೇರೆ ಭಾಷೆ ಮಾತನಾಡಲು ಬಾರದೇ ಗ್ರಾಹಕರ ಜೊತೆ ಅನುಚಿತವಾಗಿ ವರ್ತಿಸುವುದಲ್ಲದೆ ಅವರನ್ನು ಆರೋಪಿಗಳ ತರಹ ನೋಡುತ್ತಿದ್ದ. ಮಾಹಿತಿ ಕೇಳಿದರೆ ಅವರಿಗೆ ಬೈದು ಬ್ಯಾಂಕಿನಿಂದ ಹೊರ ಕಳುಹಿಸುತ್ತಿದ್ದರು ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು ಇಂದು ವಿವಿದ ಸಂಘಟನೆಯವರು ಹಾಗೂ ಸಾರ್ವಜನಿಕರು ಮ್ಯಾನೇಜರ ವರ್ಗಾವಣೆಗೆ ಆಗ್ರಹಿಸಿ ಬ್ಯಾಂಕ್‌ ಬಾಗಿಲು ಹಾಕಿ ಬ್ಯಾಂಕ್‌ ಮುಂದೆ ನೂರಾರು ಜನರು ಸೇರಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ನಿರತರ ಮನವಿ ಸ್ವೀಕರಿಸಲು ಬೆಳಗಾವಿಯಿಂದ ಆಗಮಿಸಿದ ಸಿಂಡಿಕೇಟ್‌ ಬ್ಯಾಂಕ್‌ ಮೇಲಾಧಿಕಾರಿ ಕುಮಾರೇಶ ಮಾತನಾಡಿ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ 5 ದಿನಗಳಲ್ಲಿ ಸ್ಥಳೀಯ ಬ್ಯಾಂಕಿನ ವ್ಯವಸ್ಥಾಪಕರನ್ನು ಬದಲು ಮಾಡಿ ಕನ್ನಡ ಭಾಷೆ ಬರುವವರನ್ನು ನೇಮಿಸುವ ಭರವಸೆ ನೀಡಿದರು.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮುಖಂಡರಾದ ಮಡಿವಾಳಪ್ಪ ಮುಚ್ಚಳಂಬಿ ಮಾತನಾಡಿ, ಬ್ಯಾಂಕ್‌ ಇರುವುದೆ ಗ್ರಾಹಕರಿಗಾಗಿ ಕನ್ನಡ ಭಾಷೆ ಬಾರದೇ ಮತ್ತು ರೈತರು ಮತ್ತು ಗ್ರಾಹಕರೊಂದಿಗೆ ಸರಿಯಾಗಿ ನಡೆದುಕೊಳ್ಳದ ಮ್ಯಾನೇಜರ ನಮಗೆ ಅಗತ್ಯವಿಲ್ಲ ಬದಲಾವಣೆ ಆಗುವ ತನಕ ಹೋರಾಟ ನಡೆಸುವುದಾಗಿ ಹೇಳಿದರು.
ರೈತ ಸಂಘದ ಮುಖಂಡ ಚೂನಪ್ಪ ಪೂಜಾರಿ, ತಾಲೂಕ ಅಧ್ಯಕ್ಷ ಭೀಮಶಿ ಗದಾಡಿ, ಸಾಮಾಜಿಕ ಕಾರ್ಯಕರ್ತ ಬಸವರಾಜ ಹುದ್ದಾರ, ಜಿ.ಎಸ್‌.ರಜಪೂತ, ಸುರೇಶ ಪಾಟೀಲ, ಶಿವಾನಂದ ಚೌಕಾಶಿ, ನಾಗರಾಜ ಚಚಡಿ ಪ್ರತಿಭಟನಾಕರರನ್ನು ಉದ್ದೇಶಿಸಿ ಮಾತಾಡಿದರು.
ಪ್ರತಿಭಟನೆಯಲ್ಲಿ ಮಹಿಳೆಯರು, ಸುತ್ತ-ಮುತ್ತಲಿನ ಹಳ್ಳಿಗಳ ಗ್ರಾಹಕರು, ರೈತ ಸಂಘಟನೆಯ ಕಾರ್ಯಕರ್ತರು, ಕನ್ನಡ ಸೇನೆ, ಕರ್ನಾಟಕ ಯುವ ಸೇನೆ, ಕನ್ನಡ ರಕ್ಷಣಾ ವೇದಿಕೆಯವರು ಸೇರಿ 200ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here