ಘೋಟ್ನೇಕರ ಪುತ್ರ ಶ್ರೀನಿವಾಸಗೆ ಎಪಿಎಂಸಿ ಅಧ್ಯಕ್ಷ ಪಟ್ಟ?

0
31
loading...

· ಶಾಪುರಕರ ನಾಗರಾಜ

ಹಳಿಯಾಳ: ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಘೋಟ್ನೇಕರ ಪುತ್ರ ಶ್ರೀನಿವಾಸ ಇವರನ್ನು ಹಳಿಯಾಳ ಹಾಗೂ ಜೋಯಿಡಾ ತಾಲೂಕುಗಳನ್ನೊಳಗೊಂಡ ಹಳಿಯಾಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನಮಾನ ನೀಡಲಿರುವ ಬಗ್ಗೆ ಇಲ್ಲಿನ ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ.

ಹಳಿಯಾಳ ಹಾಗೂ ಜೋಯಿಡಾ ತಾಲೂಕುಗಳನ್ನೊಳಗೊಂಡಿರುವ 13 ಸದಸ್ಯರಿರುವ ಇಲ್ಲಿನ ಎಪಿಎಂಸಿ ಆಡಳಿತ ಮಂಡಳಿಯಲ್ಲಿ ಕಾಂಗ್ರೆಸ್‌ ಪಕ್ಷದ ಬೆಂಬಲಿತರು ಒಟ್ಟು 7 ನಿರ್ದೇಶಕರನ್ನು ಹೊಂದಿರುವ ಮೂಲಕ ಆಡಳಿತ ನಡೆಸುವ ಬಹುಮತ ಕಾಂಗ್ರೆಸ್‌ ಹೊಂದಿದೆ. ಶ್ರೀನಿವಾಸ ಶ್ರೀಕಾಂತ ಘೋಟ್ನೇಕರ ಇವರು ಹಳಿಯಾಳ ಕೃಷಿಕ ಮತಕ್ಷೇತ್ರದಲ್ಲಿ ವಿಜೇತರಾಗುವ ಮೂಲಕ ಎಪಿಎಂಸಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಯುವಕಾಂಗ್ರೆಸ್‌ ಅಧ್ಯಕ್ಷರಾಗಿರುವ ಶ್ರೀನಿವಾಸ ಘೋಟ್ನೇಕರ ಯುವಕಾಂಗ್ರೆಸ್‌ ವಲಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಈ ಭಾಗದ ಆಡಳಿತದಲ್ಲಿ ಸಚಿವ ದೇಶಪಾಂಡೆಯವರ ನಂತರ ತನ್ನದೇ ಆದ ವಿಶೇಷ ಪ್ರಭಾವ ಹೊಂದಿರುವ ವಿಧಾನ ಪರಿಷತ್‌ ಸದಸ್ಯರಾಗಿರುವ ಎಸ್‌.ಎಲ್‌. ಘೋಟ್ನೇಕರ ಅವರ ಸುಪುತ್ರರಾಗಿದ್ದಾರೆ. ಶ್ರೀನಿವಾಸರನ್ನು ಎಪಿಎಂಸಿ ಅಧ್ಯಕ್ಷರನ್ನಾಗಿಸಬೇಕು ಎಂಬುದು ಬಳಗದಲ್ಲಿರುವ ಘೋಟ್ನೇಕರ ಆಪ್ತರ, ಹಿತೈಷಿಗಳ ಹೆಬ್ಬಯಕೆಯಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀನಿವಾಸ ಘೋಟ್ನೇಕರ ಅವರೇ ಅಧ್ಯಕ್ಷರಾಗಲಿದ್ದಾರೆ ಎಂಬ ಖಚಿತ ವಿಶ್ವಾಸದ ಮಾತುಗಳು ಆ ಬಳಗದಲ್ಲಿ ಚಲಾವಣೆಯಲ್ಲಿವೆ.

ಈ ಬಗ್ಗೆ ಪತ್ರಿಕೆ ಪ್ರತಿನಿಧಿ ಶ್ರೀನಿವಾಸ ಶ್ರೀಕಾಂತ ಘೋಟ್ನೇಕರ ಅವರನ್ನು ಸಂಪರ್ಕಿಸಿ ಪ್ರಶ್ನಿಸಿದಾಗ ಉತ್ತರಿಸಿದ ಅವರು ಪಕ್ಷದ ವರಿಷ್ಠರ (ಹೈಕಮಾಂಡ್‌) ಯಾವುದೇ ನಿರ್ಣಯಕ್ಕೆ ತಾನು ಬದ್ಧನಿರುವದಾಗಿ ತಿಳಿಸಿದ್ದಾರೆ.

-: ದೇಶಪಾಂಡೆ ಅಭಿನಂದನೆ :-

ಎಪಿಎಂಸಿ ಚುನಾವಣೆಯಲ್ಲಿ ಶ್ರೀನಿವಾಸ ಎಸ್‌. ಘೋಟ್ನೇಕರ ಚುನಾಯಿತರಾಗಿರುವುದರಿಂದ ಸಚಿವ ದೇಶಪಾಂಡೆಯವರು ಜ.15 ರಂದು ಬೆಳಿಗ್ಗೆಯೇ ಘೋಟ್ನೇಕರ ನಿವಾಸಕ್ಕೆ ತೆರಳಿ ಶ್ರೀನಿವಾಸರಿಗೆ ಅಭಿನಂದಿಸಿದರು. ಎಂಎಲ್‌ಸಿ ಎಸ್‌.ಎಲ್‌. ಘೋಟ್ನೇಕರ, ತಮ್ಮ ಪತ್ನಿಯೊಂದಿಗೆ ಈ ಸಂದರ್ಭದಲ್ಲಿ ಇದ್ದರು. ಪುರಸಭೆ ಉಮೇಶ ಬೋಳಶೆಟ್ಟಿ ಸಹ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here