ಜಗದೀಶ ಪರ್ನಾಂಡಿಸ್‍ಗೆ ಸನ್ಮಾನ

0
24
loading...

ಕನ್ನಡಮ್ಮ ಸುದ್ದಿ-ಭಟ್ಕಳ : ನಗರದ ತಾಲೂಕು ಕ್ರೀಡಾಂಗಣದಲ್ಲಿ ಜರುಗಿದ 68ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಟ್ಕಳ ತಾಲೂಕಿನ ಗುಳ್ಮಿ ನಿವಾಸಿ ಜಗದೀಶ ಜುಜೆ ಪರ್ನಾಂಡಿಸ್‍ರವರನ್ನು ಸನ್ಮಾನಿಸಲಾಯಿತು.
ಉಡುಪಿಯ ಆದರ್ಶ ಆಸ್ಪತ್ರಯಲ್ಲಿ ಸೀನಿಯರ್ ಮೆಡಿಕಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ತುರ್ತು ಸಂದರ್ಭದಲ್ಲ ರೋಗಿಗಳಿಗೆ ರಕ್ತ ಅವಶ್ಯಕತೆ ಪೂರೈಸುವುದರ ಜೋತೆಗೆ ರೋಗಿಗಳಿಗೆ ಬೇಕಾದ ಎಲ್ಲಾ ಅವಶ್ಯಕತೆಗಳನ್ನು ತಕ್ಷಣ ಪೂರೈಸಿ ಅವರ ನೆರವಿಗೆ ಧಾವಿಸುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಭಟಳ, ಕುಂದಾಪುರ ಹಾಗು ಮುರ್ಡೆಶ್ವರ ಭಾಗದ ಹಲವು ರೋಗಿಗಳು ಇವರಿಂದ ಸಹಾಯ ಪಡೆದಿರುತ್ತಾರೆ. ಇವರ ಈ ಸಮಾಜ ಸೇವೆಯನ್ನು ಗುರುತಿಸಿ ಭಟ್ಕಳ ಶಾಸಕ ಮಂಕಾಳ ಎಸ್ ವೈದ್ಯ ಶಾಲು ಹೊದಿಸಿ ಸನ್ಮಾನಿಸಿದರು. ಸಹಾಯಕ ಕಮೀಷನರ್ ಎಂ.ಎನ್ ಮಂಜುನಾಥ, ತಹಶಿಲ್ದಾರ ವಿ ಎಂ ಬಾಡಕರ್, ಬಿ.ಇ.ಓ ವೆಂಕಟೆಶ ಪಟಗಾರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

loading...