ಟಿಪ್ಪರ ಹರಿದು ವಿದ್ಯಾರ್ಥಿಯ ಸಾವು

0
19

ಕನ್ನಡಮ್ಮ ಸುದ್ದಿ
ಬೆಳಗಾವಿ: ಟಿಪ್ಪರ ಹರಿದು ಬಾಲಕನೊಬ್ಬ ಮೃತ ಪಟ್ಟ ಘಟನೆ ಇಲ್ಲಿಯ ಕ್ಯಾಂಪ ಪ್ರದೇಶದ ಗಣೇಶಪೂರ ರಸ್ತೆಯ ಮೇಲೆ ಸಂಭವಿಸಿದೆ.
ಕ್ಯಾಂಪ್‌ ಪ್ರದೇಶದಲ್ಲಿರುವ ಜಿ.ಎ.ಪ್ರೌಢ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದ 14 ವರ್ಷದ ಯುಸೂಫ್‌ ಹದಲಿ ಮೃತ ದುರ್ದೈವಿ. ಸೈಕಲ್‌ ಮೇಲೆ ಶಾಲೆಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಟಿಪ್ಪರ ಡಿಕ್ಕಿ ಹೊಡೆದ ಪರಿಣಾಮ ಈ ಬಾಲಕ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ.
ಡಿಕ್ಕಿ ಸಂಭವಿಸುತ್ತಲೆ ಅಲ್ಲಿಯೇ ಇದ್ದ ಆರ್ಮಿ ಸಿಬ್ಬಂದಿಗಳು ಟಿಪ್ಪರ ಚಾಲಕನನ್ನು ಹಿಡಿದು ಸಂಚಾರಿ ಪೋಲಿಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಡಿಸಿಪಿ ಅಮರನಾಥ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ದಕ್ಷಿಣ ಸಂಚಾರಿ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...

LEAVE A REPLY

Please enter your comment!
Please enter your name here