ಡೋಂಗರಪಳ್ಳಿ ರಸ್ತೆ ಕಳಪೆ ಕಾಮಾಗಾರಿ ವಿರೋಧಿಸಿ ಸಾರ್ವಜನಿಕರಿಂದ ಮನವಿ

0
23
loading...

ಕನ್ನಡಮ್ಮ ಸುದ್ದಿ-ಭಟ್ಕಳ : ಭಟ್ಕಳ ಪುರಸಭೆ ವ್ಯಾಪ್ತಿಯ ಡೋಂಗರ್‍ಪಳ್ಳಿ ಪ್ರದೇಶದಲ್ಲಿ ಸುಮಾರು 12ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವರಸ್ತೆಕಾಮಾಗಾರಿ ಕಳಪೆ ಗುಣಮಟ್ಟದ್ದಾಗಿದ್ದುಇದುರಸ್ತೆ ಸಂಚಾರಕ್ಕೆಯೋಗ್ಯವಲ್ಲಎಂದು ಆಗ್ರಹಿಸಿ ಆ ಭಾಗದ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಪುರಸಭೆಅಧ್ಯಕ್ಷ ಹಾಗೂ ಮುಖ್ಯಾಧಿಕಾರಿ ಮನವಿ ಸಲ್ಲಿಸಿದ್ದು ಕೂಡಲೆ ಅಧಿಕಾರಿಗಳು ಪರಿಶೀಲನೆ ನಡೆಸಿ ಗುತ್ತಿಗೆದಾರರ ಮೇಲೆ ಕ್ರಮಕೈಕೊಳ್ಳಬೇಕೆಂದು ಆಗ್ರಹಿಸಲಾಗಿದೆ.
ಮೂನ್ ಸ್ಟಾರ್ ಸ್ಪೋಟ್ರ್ಸ್‍ಕ್ಲಬ್, ಡೋಂಗರ್ ಪಳ್ಳ ಮಸ್ಜಿದ್-ಇ-ಖಿಝರ್ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರು ಮನವಿಯನ್ನು ಅರ್ಪಿಸಿದ್ದು ರಸ್ತೆಕಾಮಾಗಾರಿತರಾತುರಿಯಲ್ಲಿ ಪೂರ್ಣಗೊಳಿಸಿದ್ದು ಇದು ಸಂಚಾರಕ್ಕೆಯೋಗ್ಯವಾಗಿಲ್ಲ. ಸಂಚಾರಕ್ಕೆ ಮೊದಲೆ ರಸ್ತೆಗಳಲ್ಲಿ ಹೊಂಡಗಳು ಕಾಣಿಸಿಕೊಂಡಿದ್ದು ಇದೊಂದು ಕಳಪೆ ಗುಣಮಟ್ಟದಕಾಮಾಗಾರಿಯಾಗಿದೆಎಂದು ಮನವಿಯಲ್ಲಿಆರೋಪಿಸಲಾಗಿದೆ.
ಸುಸಜ್ಜಿತರಸ್ತೆ ನಿರ್ಮಾಣದ ಸಮಾಧಾನದಲ್ಲಿ ನಮಗೆ ಕಳಪೆ ಕಾಮಾಗಾರಿಯಿಂದಾಗಿ ನಿರಾಶೆಯಾಗಿದ್ದು, ಕಾಮಾಗಾರಿಯಕುರಿತಂತೆತಜ್ಞರಿಂದ ಪರಿಶೀಲನೆ ಮಾಡಿಸಬೇಕು, ರಸ್ತೆಯಗುಣಮಟ್ಟ ಸುಧಾರಿಸದೆ ಹೋದರೆಗುತ್ತಿಗೆದಾರರಿಗೆ ನೀಡುವ ಬಿಲ್ ನ್ನುತಡೆಹಿಡಿಯಬೇಕುಎಂದುಆಗ್ರಹಿಸಲಾಗಿದ್ದುಒಂದು ವೇಳೆ ನಮ್ಮ ನ್ಯಾಯಯುತವಾಗಿರುವ ಬೇಡಿಕೆಈಡೇರದೆ ಹೋದರೆ, ಪುರಸಭೆಯ ಮುಂದೆಧರಣಿ ನಡೆಸುವುದರ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿಎಚ್ಚರಿಕೆಯನ್ನು ನೀಡಲಾಗಿದೆ.
ಮನವಿ ಸ್ವೀಕರಿಸಿ ಮಾತನಾಡಿದ ಪುರಸಭೆಅಧ್ಯಕ್ಷ ಮುಹಮ್ಮದ್ ಸಾದಿಕ್ ಮಟ್ಟಾ ಸಂಬಂಧಿಸಿದ ಇಂಜಿನಿಯರ್‍ಕರೆದುಕೊಂಡುಕಾಮಾಗಾರಿಯನ್ನು ಪರಿಶೀಲನೆ ನಡೆಸಲಾಗುವುದು ಎಂಬ ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ನೌಜವಾನ್‍ಇತ್ತೆಹಾದ್‍ಕಮಿಟಿ ಪ್ರಧಾನ ಕಾರ್ಯದರ್ಶಿ ಇನಾಯತುಲ್ಲಾ ಗವಾಯಿ, ಮುಹಮ್ಮದ್ ಶಮೂನ್‍ಎಚ್.ಎಫ್, ಜಾವೀದ್‍ಆಹಮದ್, ಅಬ್ದುಲ್ ವಹಾಬ್, ಮುಹಮ್ಮದ್‍ಜಲಾಲ್, ಅನೀಸ್‍ತೋನ್ಸೆ, ಮತ್ತಿತರರು ಉಪಸ್ಥಿತರಿದ್ದರು.

loading...