ದಾಂಡೇಲಿ ಹೋರಾಟ ಸಮಿತಿಯಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊಸ ವರ್ಷ ಆಚರಣೆ

0
27
loading...

ಕನ್ನಡಮ್ಮ ಸುದ್ದಿ-ದಾಂಡೇಲಿ : ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಸಿಹಿ ಹಂಚುವ ಮೂಲಕ ದಾಂಡೇಲಿ ಹೋರಾಟ ಸಮಿತಿಯವರು ಭಾನುವಾರ ಹೊಸ ವರ್ಷವನ್ನು ಆಚರಿಸಿದರು.
ದಾಂಡೇಲಿ ಹೋರಾಟ ಸಮಿತಿಯ ಹೋರಾಟದ ಫಲವಾಗಿ ಸುಧಾರಣಾ ಸ್ಥಿತಿಗೆ ತಲುಪಿದ ಆಸ್ಪತ್ರೆಯ ಕಾರ್ಯ ಚಟುವಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ ಸಮಿತಿಯ ಉಪಾಧ್ಯಕ್ಷ ಇಲಿಯಾಸ ಕಾಟಿ ಹೃದಯ ರೋಗ ತಜ್ಞರು ನೇಮಕವಾಗಿದ್ದರೂ ಅವರಿಗೆ ಸೂಕ್ತ ಸೌಲಭ್ಯಗಳಿಲ್ಲದ ಕಾರಣ ಸರಿಯಾಗಿ ಕಾರ್ಯನಿರ್ವಹಿಸಲು ಆಗುತ್ತಿಲ್ಲಾ. ಹಾಗಾಗಿ ಕೂಡಲೇ ಇ.ಸಿ.ಜಿ. ಯಂತ್ರ ಒದಗಿಸಬೇಕು. ಡಯಾಲಿಸಸ್ ಬಗ್ಗೆ ಪ್ರಚಾರ ವೇಗವನ್ನು ಪಡೆದುಕೊಳ್ಳಬೇಕು. ಸ್ವಯಂ ಹಿತಾಸಕ್ತಿಗಾಗಿ ವರ್ಗವಾದ ಡಾ: ಶ್ರೀಶೈಲಾ ಮಾದಣ್ಣವರ ಮಾದಣ್ಣವರ ಮತ್ತು ಡಾ: ಹಿರೇಮಠ ರವರನ್ನು ಮರಳಿ ದಾಂಡೇಲಿಗೆ ನಿಯೋಜನೆ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೇಕ್ ಕತ್ತರಿಸಿ ಆಸ್ಪತ್ರೆಯ ರೋಗಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಸಿಹಿಹಂಚಲಾಯಿತು. ದಾಂಡೇಲಿ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಯ್ಯಾ ಅಂದಾಕಾರಿಮಠ, ಕಾರ್ಯದರ್ಶಿ ಚಂದ್ತಕಾಂತ ನಡಿಗೇರ, ಖಜಾಂಚಿ ಜಹಾಂಗೀರ್ ಬಾಬಾ ಖಾನ್, ಸದಸ್ಯರಾದ ರಾಜೇಶ ತಳೇಕರ್, ಜಗದೀಶ ಸಿದ್ದಪ್ಪನವರ ಮುಖ್ಯ ವೈದ್ಯಾಧಿಕಾರಿ ಡಾ.ವಿಜಯ, ವೈದ್ಯ ಚಿದಂಬರ್, ಸಿಬ್ಬಂದಿ ಮುಂತಾದವರು ಹಾಜರಿದ್ದರು.

loading...