ದೇಶದ ಅಭಿವೃಧ್ಧಿಯಲ್ಲಿ ಯುವ ಶಕ್ತಿಯ ಪಾತ್ರ ಮಹತ್ವದು

0
51
loading...

ಕನ್ನಡಮ್ಮ ಸುದ್ದಿ-ಮೂಡಲಗಿ: ಬಲಿಷ್ಠ ಭಾರತ ನಿರ್ಮಾಣಕ್ಕೆ ಸ್ವಾಮಿ ವಿವೇಕಾನಂದರ ತತ್ವಗಳು ಮಾದರಿಯಾಗಿವೆ ನಮ್ಮ ಭಾರತ ದೇಶದ ವೀರ ಸನ್ಯಾಸಿ ದೇಶ ಕಂಡ ಆಧ್ಯಾತ್ಮಿಕ ವೀರಪುರಷ ನಮ್ಮ ದೇಶದ ಹಿರಿಮೆಯನ್ನು ವಿಶ್ವಕ್ಕೆ ಸಾರಿದ ಮಹಾನಚೇತನ ಸ್ವಾಮಿವಿವೇಕಾನಂದರು. ದೇಶದ ಅಭಿವೃಧ್ಧಿಯಲ್ಲಿ ಯುವ ಶಕ್ತಿಯ ಪಾತ್ರ ಮಹತ್ವದು ಎಂದು ಅರಿತು ಅದನ್ನು ವಿಶ್ವಕ್ಕೆ ಸಾರಿದರು ಎಂದು ಅಖಿಲ ಭಾರತೀಯ ವಿದ್ಯಾಪರಿಷತ್‌ ಸಂಘಟನೆಯ ರಾಷ್ರ್ಟೀಯ ಕಾರ್ಯಕಾರಣಿ ಸದಸ್ಯರಾದ ಪೃಥ್ವಿಕುಮಾರ ಯುವಕರಿಗೆ ಕರೆ ನೀಡಿದರು.
ಸ್ಥಳೀಯ ಆರ್‌ಡಿ ಸೊಸೈಟಿಯ ಅಂಗ ಶೈಕ್ಷಣಿಕ ಸಂಸ್ಥೆಗಳು ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಘಟಕ ಮೂಡಲಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸ್ವಾಮಿ ವಿವೇಕಾನಂದರ 154ನೇ ಜನ್ಮ ದಿನಾಚರಣೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಸ್ವಾಮಿವಿವೇಕಾನಂದರ ಜೀವನದ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ವಿಶ್ವದಲ್ಲಿಯೇ ಭಾರತೀಯ ಯುವಶಕ್ತಿಯ ಮಹತ್ವವನ್ನು ತಿಳಿಸಿಕೊಡಲು ಮುಂದಾಗುವುದು ಅವಶ್ಯವಿದೆ ಎಂದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕ ಸಿದ್ದೇಶ್ವರ ಮೆಳವಂಕಿ ಮಾತನಾಡಿ, ಸ್ವಾಮಿವಿವೇಕಾನಂದರು ನಮ್ಮ ದೇಶದ ಹಿರಿಮೆಯನ್ನು ಜಗತ್ತಿಗೆ ಸಾರಿದ ಸಾದ್ವಿಕರಾಗಿದ್ದಾರೆ ಅವರ ಆದರ್ಶಗಳು ನಮ್ಮ ಬದುಕನ್ನು ಅರ್ಥಪೂರ್ಣಗೊಳುಸುತ್ತೇವೆ ಎಂದರು. ಕಾಲೇಜು ವಿದ್ಯಾರ್ಥಿ ಅಲ್ಲಯ್ಯಾ ಚಿಮ್ಮಡ ಮಾತನಾಡಿ, ದೇಶದ ಯವಚೇತನ ನೇತಾರ ಸ್ವಾಮಿವಿವೇಕಾನಂದರು ನಮ್ಮಂತಹ ಯುವ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದಾರೆ ಎಂದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸಂತೋಷ ಪಾರ್ಶಿ ವಹಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಸಂಜೀವ ವಾಲಿ, ಸಾಯಿ ಪಿಯು ಕಾಲೇಜು ಸಂಚಾಲಕ ಮಲ್ಲಿನಾಥ ಶೆಟ್ಟಿ, ಎಬಿವಿಪಿ ಜಿಲ್ಲಾ ಸಂಚಾಲಕ ಬಸವರಾಜ ಪಟ್ಟಣಶೆಟ್ಟಿ, ನಗರ ಕಾರ್ಯದರ್ಶಿ ದುಂಡಪ್ಪಾ ಬಳಿಗಾರ, ನಗರ ಸಹಕಾರ್ಯದರ್ಶಿ ಶ್ರೀಶೈಲ್‌ ಲೋಕನ್ನವರ ಉಪನ್ಯಾಸಕರಾದ ಶಿವಾನಂದ ಸತ್ತಿಗೇರಿ, ಸಂಗಮೇಶ ಕುಂಬಾರ, ಯಲ್ಲೇಶ ಕೋರಿಶೆಟ್ಟಿ, ಮಹಾದೇವ ಮುನ್ಯಾಳ, ಸುಭಾಸ ಮಾಲೋಜಿ. ಮತ್ತಿತರರು ಹಾಜರಿದ್ದರು. ಉಪನ್ಯಾಸಕ ವಿಠ್ಠಲ ಪೋದ್ದಾರ ನಿರೂಪಿಸಿದರು. ರಾಚಯ್ಯಾ ನಿರ್ವಾಣಿ ಸ್ವಾಗತಿಸಿದರು. ಪ್ರಾಚಾರ್ಯ ಸತ್ಯೇಪ್ಪಾ ಗೋಟೂರೆ ವಂದಿಸಿದರು

loading...

LEAVE A REPLY

Please enter your comment!
Please enter your name here