ದೇಶಾಭಿಮಾನ ಬೆಳಸಿಕೊಳ್ಳಲು ಕರೆ

0
23
loading...

ಭಾವಸಾರ ಸಮಾಜದಿಂದ ಧ್ವಜಾರೋಹಣ
ಕನ್ನಡಮ್ಮ ಸುದ್ದಿ-ಗದಗ : ದೇಶವಿಂದು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ದೇಶದ ಗಡಿ ಕಾಯುವ ಕಾಯಕದಲ್ಲಿ ನಿರತರಾಗಿರುವ ಸೈನಿಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದೇಶವನ್ನು ಕಾಯುತ್ತಿರುವ ವೀರಯೋಧರ ಕಾರ್ಯ ನೀಜಕ್ಕೂ ಶ್ಲ್ಯಾಘನೀಯ ಎಂದು ಗದಗ ಭಾವಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷ ಸುರೇಶರಾವ್ ಆರ್.ಮಹೇಂದ್ರಕರ ಅಭಿಪ್ರಾಯಪಟ್ಟರು.
ಅವರು ಗುರುವಾರ ಗದುಗಿನ ವಿಠ್ಠಲ ಮಂದಿರದ ಆವರಣದಲ್ಲಿ ಗದಗ ಭಾವಸಾರ ಕ್ಷತ್ರೀಯ ಸಮಾಜದಿಂದ ಪ್ರಜಾರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸ್ವಾತಂತ್ರ್ಯ ಹೋರಾಟಗಾರರ ಶ್ರಮ, ಹೋರಾಟ, ತ್ಯಾಗ ಬಲಿದಾನದಿಂದ ದೊರೆತಿರುವ ಸ್ವಾತಂತ್ರ್ಯವನ್ನು ನಾವಿಂದು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕಿದೆ. ದೇಶದ ಏಕತೆ ಅಖಂಡತೆಗೆ ಬದ್ಧರಾಗಿ ಸಮಾಜದಲ್ಲಿ ಶಾಂತಿ ನೆಮ್ಮದಿ ಸಹಕಾರದೊಂದಿಗೆ ಕೋಮುಸೌಹಾರ್ದತೆಯೊಂದಿಗೆ ಒಗ್ಗಟ್ಟಿನಿಂದ ಬಾಳಲು ನಾವೆಲ್ಲರೂ ಕಂಕಣಬದ್ಧರಾಗಬೇಕಿದೆ ಎಂದರು.
ಭಾವಸಾರ ಕ್ಷತ್ರೀಯ ಸಮಾಜದ ಟ್ರಸ್ಟ ಕಮೀಟಿಯ ಅಧ್ಯಕ್ಷ ಜ್ಞಾನೇಶ್ವರರಾವ್ ಉತ್ತರಕರ ಅವರು ಮಾತನಾಡಿ ನಮ್ಮ ಯುವ ಜನಾಂಗ ದೇಶಾಭಿಮಾನ ಬೆಳಸಿಕೊಳ್ಳಬೇಕು. ಸ್ವಾತಂತ್ರ್ಯ ಹೋರಾಟಗಾರರ ಬದುಕು ಸಾಧನೆಯನ್ನು ಅವರ ಜೀವನ ಚರಿತ್ರೆಯನ್ನು ಅರಿತುಕೊಳ್ಳುವ ಮೂಲಕ ನಾವೂ ದೇಶದ ಭದ್ರತೆಗೆ, ಸಂರಕ್ಷಣೆಗೆ ಮುಂದಾಗಬೇಕೆಂದರು.
ಭಾವಸಾರ ಕ್ಷತ್ರೀಯ ಸಮಾಜ, ಯುವಕ ಮಂಡಳ, ಮಹಿಳಾ ಮಂಡಳ ಹಾಗೂ ಭಾವಸಾರ ವ್ಹಿಜನ್‍ದ ಸರ್ವ ಪದಾಧಿಕಾರಿಗಳು, ಸದಸ್ಯರು, ಹಿರಿಯರು ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರು.

loading...