ನವೋದಯ ಪೂರ್ವಭಾವಿ ಸ್ಪರ್ಧಾತ್ಮಕ ಪರೀಕ್ಷೆ

0
87
loading...

ಮೂಡಲಗಿ: ವಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಳು ಸತತ ಮಾರ್ಗದರ್ಶನ, ವಿಶೇಷ ತರಗತಿಗಳ ಆಯೋಜನೆ, ಪೋನ್‌ ಇನ್‌ ಕಾರ್ಯಕ್ರಮ, ಉಚಿತವಾಗಿ ತಯಾರಿ ಪುಸ್ತಕಗಳನ್ನು ವಿತರಿಸುವ ಮೂಲಕ ಅತೀ ಹೆಚ್ಚು ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು ವಿಶೇಷವಾಗಿದೆ ಎಂದು ಚಿಕ್ಕೋಡಿ ಡಿ.ಡಿ.ಪಿ.ಐ ಗಜಾನನ ಮನ್ನಿಕೇರಿ ಹೇಳಿದರು.

ಅವರು ನಗರದಲ್ಲಿ ರವಿವಾರ ಜರುಗಿದ ಜವಾಹರ ನವೋದಯ ಪೂರ್ವಭಾವಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಮಾತನಾಡಿದರು. ಮೂಡಲಗಿ ವಲಯದಲ್ಲಿ ಪ್ರತಿ ವರ್ಷವು ಅತಿ ಹೆಚ್ಚು ವಿದ್ಯಾರ್ಥಿಗಳು ನವೋದಯ ಪೂರ್ವಭಾವಿ ಪರೀಕ್ಷೆಗೆ ಹಾಜರಾಗುತ್ತಿದ್ದು, ಶೈಕ್ಷಣಿಕವಾಗಿ ಮಕ್ಕಳಿಗೆ ಸ್ಪರ್ಧಾತ್ಮಕ ಮನೋಬಾವನೆಯನ್ನು ಮೂಡಿಸುವಲ್ಲಿ ಸಹಾಯಕವಾಗುವದೆಂದರು. ಹೆಚ್ಚುವರಿ ತರಗತಿಗಳನ್ನು ಆಯೊಜಿಸುವ ಮೂಲಕ ಮಕ್ಕಳಿಗೆ ಸಹಾಯ ಮಾಡಿದ ಶಿಕ್ಷಕರಿಗೆ, ಮುಖ್ಯೋಪಾಧ್ಯಯರು, ಪಾಲಕರ ಕಾರ್ಯವನ್ನು ಶ್ಲಾಘಿಸಿದರು.

ಕೋಥಳಿ ನವೋದಯ ವಿದ್ಯಾಲಯದ ಪ್ರಾಚಾರ್ಯ ವಿ ರಾಮನಾಥನ್‌ ಮಾತನಾಡಿ, ಮೂಡಲಗಿ ವಲಯದಿಂದ3233ಮಕ್ಕಳು ಅರ್ಜಿಸಲ್ಲಿಸಿದ್ದು 99 ಮಕ್ಕಳು ಗೈರು ಹಾಜರಾಗಿ ಒಟ್ಟು 3134 ಮಕ್ಕಳು ಹಾಜರಾಗಿದ್ದು, ಇದು ದಕ್ಷಿಣ ಭಾರತದ ನವೋದಯ ಕೇಂದ್ರವಾದ ಹೈದರಾಬಾದನ ಪ್ರದೇಶ ವ್ಯಾಪ್ತಿಯಲ್ಲಿಯೇ ಅತೀ ಹೆಚ್ಚು ಮಕ್ಕಳು ನವೋದಯ ಪರೀಕ್ಷೆಗೆ ಹಾಜರಾಗಿರುವ ದಾಖಲೆಯಾಗಿದೆ. ಇಲ್ಲಿಯ ವ್ಯವಸ್ತೆ ಅಚ್ಚುಕಟ್ಟಾಗಿದ್ದು ಪರೀಕ್ಷೆ ಕ್ರಮ ತೃಪ್ತಿಕರವಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿ.ಇ.ಒ ಅಜೀತ ಮನ್ನಿಕೇರಿ, ಗೋಕಾಕ ತಾ.ಪಂ ಇ.ಒ ಚನ್ನಪ್ಪನವರ, ಕ್ಷೇತ್ರ ಸಮನ್ವಯಾಧಿಕಾರಿ ಎಲ್‌.ಐ ಕೊಳವಿ, ನವೋದಯ ಪರೀಕ್ಷಾ ಕೇಂದ್ರದ ಮಾನಪ್ಪ ಹವಾಲ್ದಾರ, ಎಮ್‌.ಎಚ್‌ ಹೊನ್ನನಾಯಕರ, ನಾಗವೇಣಿ ನಾಯಿಕ, ಬಸಮ್ಮ ಇಂಚಲ, ಶಿಕ್ಷಕ ಸಂಘಟನೆಯ ಎಸ್‌.ಎಮ್‌ ಲೋಕನ್ನವರ, ಬಿ.ಆರ್‌.ಪಿ ಕೆ.ಎಲ್‌ ಮೀಶಿ ಹಾಜರಿದ್ದರು. 9 ಪರೀಕ್ಷಾ ಕೇಂದ್ರಗಳಲ್ಲಿ ಅಧೀಕ್ಷಕರು, ಕೊಠಡಿ ಮೆಲ್ವಿಚಾರಕರು ಹಾಗೂ ಪೋಲಿಸ್‌ ಸಿಬ್ಬಂದಿ ಸೂಕ್ತ ಭದ್ರತೆ ವ್ಯವಸ್ಥೆಮಾಡಿದ್ದರು.

loading...

LEAVE A REPLY

Please enter your comment!
Please enter your name here