ನವೋದಯ ಪ್ರವೇಶ ಪರೀಕ್ಷೆ ಯಶಸ್ವಿ

0
161
loading...

ಬೀಳಗಿ: 5ನೇ ತರಗತಿಯಿಂದ 6ನೇ ತರಗತಿಗೆ 2017ರ ಜವಾಹರ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಗೆ ಭಾನುವಾರರಂದು ಇಲ್ಲಿ ನಾಲ್ಕು ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಿತು.

ಇಲ್ಲಿಯ ಆದರ್ಶ ವಿದ್ಯಾಲಯದಲ್ಲಿ 598 ವಿದ್ಯಾರ್ಥಿಗಳು, ಸ್ವಾಮಿ ವಿವೇಕಾನಂದ ವಿಜ್ಞಾನ ಮಹಾವಿದ್ಯಾಲಯದಲ್ಲಿ 395 ವಿದ್ಯಾರ್ಥಿಗಳು, ಸಿದ್ಧೇಶ್ವರ ಪ.ಪೂ.ಕಾಲೇಜ್‌ ನಲ್ಲಿ 398 ವಿದ್ಯಾರ್ಥಿಗಳು ಮತ್ತು ರುದ್ರಗೌಡ್‌ ಪಾಟೀಲ್‌ ಸರಕಾರಿ ಪದವಿ ಕಾಲೇಜನಲ್ಲಿ 206 ವಿದ್ಯಾರ್ಥಿಗಳು ಒಟ್ಟು 1597 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದವು. ಶಿಕ್ಷಕರು ಸೇರಿದಂತೆ 84 ಸಿಬ್ಬಂದಿಯು ಕಾರ್ಯನಿರ್ವಹಿಸಿದರು.

ನಾಲ್ಕು ಪರೀಕ್ಷೆ ಕೇಂದ್ರಗಳಿಗೆ ಕ್ಷೇತ್ರಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ್‌, ತಹಶೀಲ್ದಾರ ಉದಯ್‌ ಕುಂಬಾರ್‌ ವೀಕ್ಷಣೆ ಮಾಡಿದರು. ಈ ಸಂದರ್ಭದಲಿರ್ಶಿಕ್ಷಣ ಸಂಯೋಜಕಿ ಮಲ್ಲಮ್ಮ ಬಿರಾದಾರ್‌ ನಿರಾಣಿ ಸರಕಾರಿ ಪ್ರೌಢ್‌ ಶಾಲೆ ಮುಖ್ಯಗುರುಗಳಾದ ಎಲ್‌ ಎಸ್‌ ನಿಂಬಾಳ್ಕರ್‌ ಇದ್ದರು.

loading...

LEAVE A REPLY

Please enter your comment!
Please enter your name here