ನಿಚ್ಛಲಮಕ್ಕಿ ವೆಂಕಟರಮಣ ದೇವರ ಪುನರ್ ಪ್ರತಿಷ್ಠಾ ಮಹೋತ್ಸವ

0
23
loading...

ಕನ್ನಡಮ್ಮ ಸುದ್ದಿ-ಭಟ್ಕಳ : ಭಟ್ಕಳ ಆಸರಕೇರಿ ನಿಚ್ಛಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನದ ನವೀಕೃತ ಶಿಲಾಮಯ ಗರ್ಭಗುಡಿಯ ಶ್ರೀ ದೇವರ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮ ಇಂದಿನಿಂದ ವಿದ್ಯುತ್ಕವಾಗಿ ಪ್ರಾರಂಭಗೊಂಡಿದೆ.
ಜ.28 ರಿಂದ ಫೆ.4ರವರೆಗೆ ನಡೆಯುವ ವಿಜೃಂಬಣೆ ಮಹೋತ್ಸವದಲ್ಲಿ ಪ್ರತಿನಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಲಿದೆ. ಕಾರ್ಯಕ್ರಮದ ಪೂರ್ವವಾಗಿ ತಾಲೂಕಿನ 18 ಕೂಟದ ನಾಮಧಾರಿ ಭಕ್ತರು ಶುಕ್ರವಾರ ತಮ್ಮ ತಮ್ಮ ಕೂಟದ ಹೊರಕಾಣಿಕೆಯನ್ನು ಮೆರವಣಿಗೆಯ ಮೂಲಕ ತಂದು ದೇವಾಲಯಕ್ಕೆ ಒಪ್ಪಿಸಿ ಹೋದರು. ಮುಂಡಳ್ಳಿ ಹಾಗೂ ಮುಟ್ಟಳ್ಳಿ ಕೂಟದ ಭಕ್ತರು ಚಂಡೆ ವಾದ್ಯದ ಮೂಲಕ ಮೆರವಣಿಗೆ ಬಂದು ಹೊರಕಾಣಿಕೆ ಒಪ್ಪಿಸಿದರೆ. ಮಣ್ಕುಳಿ ಹಾಗೂ ಹುರಳಿಸಾಲ ಕೂಟದ ಭಕ್ತರು ಪಂಚವಾದ್ಯದ ಮೂಲಕ ಮೆರವಣಿಗೆ ಬಂದು ಹೊರೆಕಾಣಿಕೆ ಒಪ್ಪಿಸಿದರು.
ಧಾರ್ಮಿಕ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಕ್ತರಿಗೆ ಎಲ್ಲಿಯೂ ಕುಂದುಕೊರತೆ ಆಗದ ರೀತಿಯಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ.

loading...