ಪರೊಪಕಾರ ಮಾಡುವ ಸದ್ಗುಣ ಬೆಳೆಸಿಕೊಳ್ಳಿ: ತಡಸನವರ

0
51
loading...

ಬೆಟಗೇರಿ: ಪ್ರತಿಯೊಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಪರೊಪಕಾರ ಮಾಡುವ ಸದ್ಗುಣ ಬೆಳೆಸಿಕೊಳ್ಳಬೇಕು, ಪ್ರತಿ ಮನುಷ್ಯ ಸಹಕಾರಿ ರಂಗದಲ್ಲಿ ಸಾಧ್ಯವಾದಷ್ಟು ಸೇವೆ ಗೈಯಲು ಪ್ರಯತ್ನಿಸಬೇಕೆಂದು ನಾಗನೂರ ಅರ್ಬನ್‌ ಕ್ರೇಡಿಟ್‌ ಸೌಹಾರ್ದ ಸಹಕಾರಿಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ತಡಸನವರ ಹೇಳಿದರು.

ಬೆಂಗಳೂರಿನ ಭಾರತ ರತ್ನ ಸರ್‌ ಎಮ್‌ ವಿಶ್ವೇಶ್ವರಯ್ಯ ಟ್ರಸ್ಟನವರು ಕೊಡಮಾಡುವ ರಾಜ್ಯ ಮಟ್ಟದ ಅತ್ಯುನ್ನತ ಪುರಸ್ಕಾರವಾದ “ಸಹಕಾರ ರತ್ನ” ಪ್ರಶಸ್ತಿಯೂ ನಾಗನೂರ ಅರ್ಬನ್‌ ಕ್ರೇಡಿಟ್‌ ಸೌಹಾರ್ದ ಸಹಕಾರಿಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ತಡಸನವರ ಅವರಿಗೆ ಲಭಿಸಿದ ಪ್ರಯುಕ್ತ ನಾಗನೂರ ಅರ್ಬನ್‌ ಕ್ರೇಡಿಟ್‌ ಸೌಹಾರ್ದ ಸಹಕಾರಿಯ ಪ್ರಧಾನ ಕಚೇರಿಯ ಸಭಾ ಭವನದಲ್ಲಿ ಆಯೋಜಿಸಿದ ಸತ್ಕಾರ ಹಾಗೂ ಅಭಿನಂದನಾ ಸಮಾರಂಭದಲ್ಲಿ ಬೆಟಗೇರಿ ಶಾಖೆಯ ಸಲಹಾ ಸಮಿತಿ ಅವರಿಂದ ಸತ್ಕಾರ ಸ್ವೀಕರಿಸಿ ಮಾತನಾಡಿ, ಎಲ್ಲಕ್ಕಿಂತ ಜನರ ಅಭಿಮಾನ ದೊಡ್ಡದು ಎಂದರು.

ನಾಗನೂರ ಅರ್ಬನ್‌ ಕ್ರೇಡಿಟ್‌ ಸೌಹಾರ್ದ ಸಹಕಾರಿಯ ಬೆಟಗೇರಿ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರು ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಬಸವರಾಜ ತಡಸನವರ ಅವರಿಗೆ ಶಾಲು ಹೋದಿಸಿ ನೆನಪಿನ ಕಾಣಿಕೆ ನೀಡಿ ಸತ್ಕರಿಸಿದರು.

ಚಿಪ್ಪಲಕಟ್ಟಿ ಸಿದ್ಧಾರೂಢ ಮಠದ ಆತ್ಮಾನಂದ ಸ್ವಾಮಿಗಳು ದಿವ್ಯ ಸಾನಿಧ್ಯ, ಮಾಜಿ ಸಚಿವ ಆರ್‌ ಎಮ್‌ ಪಾಟೀಲ, ಎಮ್‌ ಬಿ ಹೊಸಮನಿ, ಪಿ ಎಲ್‌ ಬಬಲಿ ಮುಖ್ಯತಿಥಿಗಳಾಗಿ ಮಾತನಾಡಿದರು. ಕಲ್ಲಪ್ಪ ಕರಿಹೊಳಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಬಿಡಿಸಿಸಿ ಬ್ಯಾಂಕ್‌ ನಿವೃತ್ತ ವ್ಯವಸ್ಥಾಪಕ ಬಾಳಗೌಡ ಪಾಟೀಲ, ಶಂಕರ ಹೊಸಮನಿ, ಬೆಟಗೇರಿ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಮಲ್ಲಪ್ಪ ಕಂಬಿ, ಈಶ್ವರ ಮುಧೋಳ, ಕಲ್ಲಪ್ಪ ದಾಸಂಗಳಿ, ಮಲ್ಲಪ್ಪ ಪಣದಿ, ಜಿ ಕೆ ಕರಿಹೊಳಿ, ಆರ್‌ ವಿ ಗಂಗರಡ್ಡಿ, ಬಾಳಪ್ಪ ಬುಳ್ಳಿ, ಪತ್ರೆಪ್ಪ ದೇಯನ್ನವರ, ಬಸು ಕೋಣಿ (ಖಾನಾವಳಿ), ಶಿವಾನಂದ ಕರಿಹೊಳಿ, ಈರಪ್ಪ ಕಂಬಿ, ಸೇರಿದಂತೆ ಬೆಟಗೇರಿ ಶಾಖೆಯ ಸಲಹಾ ಸಮಿತಿ ಸದಸ್ಯರು ಸಿಬ್ಬಂಧಿ ವರ್ಗ, ನಾಗನೂರ ಪಟ್ಟಣದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

ಪ್ರಕಾಶ ಅಂಗಡಿ ಸ್ವಾಗತಿಸಿದರು, ವೆಂಕಟೇಶ ಜಂಬಗಿ ಕಾರ್ಯಕ್ರಮ ನಿರೂಪಿಸಿದರು, ಮಹೇಶ ಕುಲಕರ್ಣಿ ಕೊನೆಗೆ ವಂದಿಸಿದರು.

loading...

LEAVE A REPLY

Please enter your comment!
Please enter your name here