ಪೈನಾನ್ಸ್ ಕಂಪನಿಯಿಂದ ಸಾಲ ಮರುಪಾವತಿಗೆ ಜನರಿಗೆ ಒತ್ತಾಯ

0
27
loading...

ಕನ್ನಡಮ್ಮ ಸುದ್ದಿ-ಮುಂಡಗೋಡ : ನೋಟ್ ಬ್ಯಾನ್ ಹಾಗೂ ಬರಗಾಲದಿಂದ ಕೆಲಸ ಮಾಡಿದರೂ ಕೈಗೆ ಹಣ ಸಿಗದಂತಾಗಿ ಬಡ ಹಾಗೂ ಮದ್ಯಮ ವರ್ಗದ ಜನತೆ ತೀವ್ರ ತತ್ತರಿಸಿಹೋಗಿದೆ. ಇಂತಹ ಸಂದರ್ಭದಲ್ಲಿ ತಾಲೂಕಿನ ಬಡ ಮಹಿಳಾ ಸಂಘದವರಿಗೆ ಸಾಲ ನೀಡಿರುವ ಸುತ್ತಮುತ್ತಲಿನ ಸಿಗ್ಗಾಂವ, ಕಲಘಟಗಿ ಮುಂತಾದ ಕಡೆಯ ಪೈನಾನ್ಸ್ ಕಂಪನಿಯವರು ಸಾಲ ಮರಪಾವತಿಗೆ ಜನರ ಮೇಲೆ ಒತ್ತಾಯ ಹೇರಿ ಪೀಡಿಸದಂತೆ ಹಾಗೂ ಬಡ್ಡಿ ರಹಿತ ಸಾಲ ಮರು ಪಾವತಿಗೆ 1 ವರ್ಷ ಕಾಲಾವಕಾಶ ಪಡೆಯಲಾಗಿದೆ. ಈ ಬಗ್ಗೆ ಬಡವರು ಆತಂಕಪಡುವ ಅಗತ್ಯವಿಲ್ಲ ಎಂದು ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಹಾಗೂ ಜಿ.ಪಂ ಸದಸ್ಯ ರವಿಗೌಡ ಪಾಟೀಲ ಹೇಳಿದರು.
ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಅವರು, ಪೈನಾನ್ಸ್ ನವರು ಸಾಲ ಮರುಪಾವತಿ ಮಾಡುವಂತೆ ಬಡವರ ಮೇಲೆ ಒತ್ತಡ ಹೇರುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಶಾಸಕರ ನೇತ್ರತ್ವದಲ್ಲಿ ಸಭೆ ನಡೆಸಲಾಗಿದ್ದು, ಸ್ಥಳಿಯ ಮುಖಂಡರ ಸಮ್ಮುಖದಲ್ಲಿ ಪೈನಾನ್ಸ್ ಕಂಪನಿಯವರನ್ನು ಮುಂಡಗೋಡ ಪೊಲೀಸ ಠಾಣೆಗೆ ಕರೆಸಿ ಈ ಬಗ್ಗೆ ತಾಕೀತು ಮಾಡಲಾಗಿದ್ದು, ಒಂದು ವರ್ಷದವರೆಗೆ ಯಾವುದೇ ಕಾರಣಕ್ಕೂ ಸಾಲ ಮರುಪಾವತಿ ಮಾಡಲು ಜನರಿಗೆ ಒತ್ತಾಯಿಸದಂತೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಒಂದು ವರ್ಷದ ಬಳಿಕವು ಅಸಲು ಮಾತ್ರ ಬರಿಸಿಕೊಳ್ಳುವಂತೆ ಪೈನಾನ್ಸ್ ನವರಿಗೆ ಆದೇಶ ಮಾಡಲಾಗಿದೆ ಎಂದು ತಿಳಿಸಿದರು.
ತಾ.ಪಂ ಸದಸ್ಯ ಜ್ಞಾನದೇವ ಗುಡಿಯಾಳ, ಮಂಜುನಾಥ ಕಟಗಿ, ಗೋಪಾಲ ಪಾಟೀಲ, ಗವಾಣಿ ಮುಂತಾದವರು ಉಪಸ್ಥಿತರಿದ್ದರು.

loading...