ಪ್ರಜೆಗಳು ತಮ್ಮ ಹಕ್ಕು ಚಲಾಯಿಸಿದಾಗ ಮಾತ್ರ ಸಂವಿಧಾನ ಜಾರಿ

0
25
loading...

ಕನ್ನಡಮ್ಮ ಸುದ್ದಿ-ಕುಷ್ಟಗಿ : ಡಾ|| ಬಿ.ಆರ್. ಅಂಬೇಡ್ಕರ್ ಅವರು ಶೋಷಿತ ವರ್ಗದಲ್ಲಿ ಹುಟ್ಟಿ ನಮ್ಮ ದೇಶಕ್ಕೆ ಹಾಗೂ ಇಡೀ ವಿರ್ಶವಕ್ಕೆ ಮಾದರಿಯಾಗುವಂತೆ ಸಂವಿಧಾನ ನೀಡಿದ್ದಾರೆ. ಅವರ ಕನಸಿನಂತೆ ಪ್ರತಿಯೊಬ್ಬ ಪ್ರಜೆಯೂ ಮತದಾನ ಸೇರಿದಂತೆ ತಮ್ಮ ಹಕ್ಕನ್ನು ಪಡೆದಾಗ ಅಥವಾ ಚಲಾಯಿಸಿದಾಗ ಮಾತ್ರ ಸಂಪೂರ್ಣ ಸಂವಿಧಾನ ಜಾರಿಯಾದಂತೆ ಆಗುತ್ತದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಅಭಿಪ್ರಾಯ ಪಟ್ಟರು.
ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕಾ ಆಡಳಿತ ಹಾಗೂ ತಾಲೂಕಾ ಪಂಚಾಯತ ಕುಷ್ಟಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ 68ನೇ ಗಣರಾಜ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ದೇಶದಲ್ಲಿ ಪ್ರತೀ ಚುನಾವಣೆಯಲ್ಲೂ ಸುಮಾರು 25ರಿಂದ 30% ಜನರು ತಮ್ಮ ಅಮೂಲ್ಯವಾದ ಮತದಾನದ ಹಕ್ಕಿನಿಂದ ವಂಚಿತರಾಗುತ್ತಾರೆ. ಇದರಿಂದ ಸದೃಢ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಆ ವಂಚಿತರು ತಮ್ಮ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಒಬ್ಬ ಪ್ರಜೆ ತನ್ನ ಎಲ್ಲಾ ಹಕ್ಕುಗಳನ್ನು ಹೊಂದಿದಾಗ ಮಾತ್ರ ಸಮೃದ್ಧ ಭಾರತವಾಗುತ್ತದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಿ ನಮ್ಮ ದೇಶಕ್ಕೆ ಅನುಕೂಲವಾಗುವಂತೆ ಸಂವಿಧಾನ ರೂಪಿಸಿದ್ದಾರೆ. ನಮ್ಮ ದೇಶ ಸ್ವಾತಂತ್ರಗೊಂಡು ಒಂದು ಸುವ್ಯಸ್ಥಿತ ಆಡಳಿತ ಜಾರಿಯಾಗಬೇಕೆಂದು ಕನಸು ಹೊತ್ತಿದ್ದ ಅವರು ವಿವಿಧ ರಾಜ್ಯಗಳನ್ನಾಗಿ ವಿಂಗಡಿಸಿ ಗಣರಾಜ್ಯಗಳನ್ನಾಗಿ ಮಾಡಿ ಆಡಳಿತದ ಯಂತ್ರವನ್ನು ರೂಪಿಸಿದ್ದರು. ಅವರ ಈ ಒಂದು ಚಿಂತನೆಗೆ ಹಾಗೂ ಅವರ ಕೊಡುಗೆಗೆ ಇಂದು 68 ವರ್ಷ ಸಂದಿದ್ದು ಅನೇಕ ತ್ಯಾಗ ಬಲಿದಾನಗಳ ಮತ್ತು ಮಹಾನ್ ಪುರುಷರ ಕೊಡುಗೆಗಳನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
2ಕೋಟಿ ವೆಚ್ಚದಲ್ಲಿ ಡ್ರೀಮ್ ಪಾರ್ಕ:
ಕುಷ್ಟಗಿ ಪಟ್ಟಣವನ್ನು ಅಭಿವೃದ್ಧಿ ಪಡೆಸುವಲ್ಲಿ ಪ್ರಮಾಣಿಕತೆಯಿಂದ ಕೆಲಸ ಮಾಡುತ್ತಿದ್ದು ಈಗಾಗಲೆ ಹತ್ತು ಹಲವಾರು ಯೊಜನೆಗಳ ಕಾಮಗಾರಿಗಳು ನಡೆದಿದ್ದು ಇನ್ನು ಹಲವಾರು ಯೊಜನೆಗಳನ್ನು ಕಾರ್ಯರೂಪಕ್ಕೆ ಸಾಧ್ಯವಾದಷ್ಟು ತರುತ್ತೇನೆ. ಸಾರ್ವಜನಿಕರ ಬಹುಬೇಡಿಕೆಯಂತೆ ಕುಷ್ಟಗಿ ಪಟ್ಟನದಲ್ಲಿ 2 ಕೋಟಿ ವೆಚ್ಚದಲ್ಲಿ, ಸುಸಜ್ಜಿತ ಆಸನಗಳು, ಟ್ರ್ಯಾಕ್, ಹೂದೋಟ ಸೇರಿದಂತೆ ಡ್ರೀಮ್ ಪಾರ್ಕ ನಿರ್ಮಿಸಲಾಗುವದು ಎಂದು ಭರವಸೆ ನೀಡಿದರು.
ಸಧ್ಯದಲ್ಲೇ ಅವಶ್ಯವಿರುವ ಕಡೆ ಗೋಶಾಲೆ:
ಬರಗಾಲ ಆವರಿಸಿದ್ದರಿಂದ ನಮ್ಮ ತಾಲುಕಿನ ಒಟ್ಟು ನಾಲ್ಕೂ ಹೋಬಳಿಯಲ್ಲಿ ಗೋಶಾಲೆ ಪ್ರಾರಂಭಿಸುವಂತೆ ಮತ್ತು ಕುಡಿಯುವ ನೀರಿಗೆ ಸಂಪುರ್ಣ ವ್ಯವಸ್ಥೆ ಕಲ್ಪಿಸುವಂತೆ ಸರಕಾರಕ್ಕೆ ಮನವಿ ಮಾಡುತ್ತೆನೆ. ಎಂದು ತಿಳಿಸಿದರು. ಇದೆ ಸಂದರ್ಭದಲ್ಲಿ ತಹಶೀಲ್ದಾರ ಗಂಗಪ್ಪ ಎಂ. ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮಿಂದ ಮಾನವೀಯ ಮೌಲ್ಯಗಳು ದೂರವಾಗುತ್ತಿವೆ ಎನ್ನುವ ಆಂತಕದಲ್ಲಿ ನಾವಿದ್ದೆವೆ. ಅದಕ್ಕಾಗಿ ಒಳ್ಳೆಯ ಶಿಕ್ಷಣದ ಜೋತೆಗೆ ರಚನ್ಮಾಕ ಕೆಲಸ ಮಾಡಿ ದೇಶಭಿಮಾನ ಬೆಳಿಸಿಕೊಳ್ಳೋಣ. ಮುಂದಿನ ಯುವ ಪಿಳಿಗೆಗೆ ಸುಂದರ ಬದಕು ಕಟ್ಟಿಕೊಳ್ಳಲು ಶ್ರಮಿಸೋಣ ಎಂದರು.
ಸ್ವಾತಂತ್ರ ಹೋರಾಟಗಾರ ಬಿ.ಕಿಶನರವ್ ಮಾತನಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 68 ವರ್ಷಗಳು ಗತಿಸಿದವು. 68 ವರ್ಷ ಗಣರಾಜ್ಯೋತ್ಸವ ನೋಡುವ ಭಾಗ್ಯ ದೇವರು ದಯಪಾಲಿಸಿದ್ದು ನನ್ನ ಪುಣ್ಯ. ಸ್ವಾತಂತರ ಹೋರಾದ ಕಷ್ಟ ದಿನಗಳು ಇನು ನನ್ನ ಕಣ್ಣ ಮುಂದೆ ರಾರಾಜಿಸುತ್ತಿವೆ. ಎಲ್ಲರು ದೇಶಾಭಿಮಾನ ಬೆಳಿಸಿಕೊಂಡು ತಾಯಿನ್ನಾಡಿನ ಸೇವೆ ಸಲುವಾಗಿ ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯ ವಿಜಯ ನಾಯಕ, ತಾಲೂಕಾ ಪಂಚಾಯತ ಅಧ್ಯಕ್ಷೆ ಮಹಾಂತಮ್ಮ ಕೆ. ಪೂಜಾರ, ಪುರಸಭೆ ಅಧ್ಯಕ್ಷ ಕಲ್ಲೇಶ ತಾಳದ್, ಉಪಾಧ್ಯಕ್ಷೆ ಜ್ಯೋತಿ ಸೇಬಿನಕಟ್ಟಿ, ಸಿಪಿಐ ಗಿರೀಶ ಪಾಂಡು ರೋಡ್ಕರ್, ಕೃಷಿ ಸಹಾಯಕ ನಿರ್ದೇಶಕ ವಿರಣ್ಣ ಕಮತರ್, ಪ್ರಾಚಾರ್ಯ ಡಾ|| ಎಸ್.ವಿ. ಡಾಣಿ, ತ್ತು ಪುರಸಭೆ ಸದಸ್ಯರು ತಾಲೂಕಾ ಪಂಚಾಯತ ಸದಸ್ಯರು ಹಾಗೂ ಅಧಿಕಾರಿಗಳು ಸಿಬ್ಬಂದಿಗಳು ಶಿಕ್ಷಕರು ಶಾಲಾ ವಿದ್ಯಾರ್ಥಿಗಳು ಭಾಗವಿಹಿಸಿದ್ದರು. ಕಾರ್ಯಕ್ರದ ಸ್ವಾಗವನ್ನು ಕ್ಷೇತ್ರ ಶಿಕ್ಷಣ ಅಧಿಕಾರಿ ಎಂ.ಬಿ. ಮುರುಟಿಗಿ ಮಾಡಿದರು ಕಾರ್ಯಕ್ರದ ನಿರೂಪಣೆಯನ್ನು ಶಿಕ್ಷಕ ಶರಣಪ್ಪ ತೆಮ್ಮಿನಾಳ ನಿರ್ವಹಿಸಿದರು. ನಂತರ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನೆರವೇರಿದವು.

loading...