ಬಯಲು ಶೌಚಾಲಯ ಮುಕ್ತ ವಾರ್ಡ್‌ಗೆ ಕರೆ

0
38
loading...

ಮೂಡಲಗಿ: ಪ್ರತಿಯೊಬ್ಬರು ಶೌಚಾಲಯವನ್ನು ನಿರ್ಮಿಸಿಕೊಂಡು ವಾರ್ಡ್‌ದಲ್ಲಿ ಸ್ವಚ್ಛ ಮತ್ತು ಉತ್ತಮ ಪರಿಸರವನ್ನು ನಿರ್ಮಿಸಲು ಸಂಕಲ್ಪ ಮಾಡಬೇಕು’ ಎಂದು ಪುರಸಭೆ ಮುಖ್ಯಾಧಿಕಾರಿ ಬಿ.ಬಿ. ಗೋರೋಶಿ ಹೇಳಿದರು.
ಇಲ್ಲಿಯ ಪುರಸಭೆ ಹಾಗೂ ಲಯನ್ಸ್‌ ಕ್ಲಬ್‌ ಮೂಡಲಗಿ ಪರಿವಾದಿಂದ ಬಯಲು ಶೌಚಾಲಯ ಮುಕ್ತ ವಾರ್ಡ್‌ ನಿರ್ಮಿಸುವ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪುರಸಭೆಯಿಂದ ಶೌಚಾಲಯ ನಿರ್ಮಿಸಲು ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ರೂ. 5,333 ಸಹಾಯ ಧನವನ್ನು ನೀಡಲಾಗುತ್ತಿದ್ದು, ಅದನ್ನು ಸದುಪಯೋಗಮಾಡಿಕೊಳ್ಳಬೇಕು ಎಂದರು.
ವಾರ್ಡ್‌ದಲ್ಲಿರುವ ಪ್ರತಿ ವ್ಯಕ್ತಿಯು ಸ್ವಚ್ಛತೆಯ ಬಗ್ಗೆ ಕಾಳಜಿವಹಿಸಬೇಕು. ಮಲಮೂತ್ರಗಳನ್ನು ಬಯಲಿನಲ್ಲಿ ಮಾಡದೆ ಪುರಸಭೆಯ ಶೌಚಾಲಯಗಳನ್ನು ಬಳಸಿರಿ ಇಲ್ಲವೆ ಖಡ್ಡಾಯವಾಗಿ ಶೌಚಾಲಯವನ್ನು ನಿರ್ಮಿಸಿಕೊಳ್ಳಬೇಕು ಎಂದರು. ಡಾ. ಅನಿಲ ಪಾಟೀಲ ಮಾತನಾಡಿ ಮಲಮೂತ್ರಗಳಿಂದಾಗಿ ಅನೇಕ ರೋಗಗಳು ಹರಡುತ್ತವೆ. ಸ್ವಚ್ಛತೆ ಬಗ್ಗೆ ಕಾಳಜಿವಹಿಸಬೇಕು ಮತ್ತು ಶೌಚ ವಿಷಯಕ್ಕೆ ಪ್ರತಿಯೊಬ್ಬರು ಕಾಳಜಿವಹಿಸಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ಲಯನ್ಸ್‌ ಕ್ಲಬ್‌ ಅಧ್ಯಕ್ಷ ವೆಂಕಟೇಶ ಸೋನವಾಲ್ಕರ್‌ ಮಾತನಾಡಿ ಬಯಲು ಶೌಚಾಲಯ ಮುಕ್ತವನ್ನಾಗಿಸಿ ಮೂಡಲಗಿ ಪಟ್ಟಣವು ಮಾದರಿಯನ್ನಾಗಿಸಲು ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಪುರಸಭೆಯ ಸಹಾಯ ಧನವನ್ನು ಬಳಸಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕು ಎಂದರು. ಅರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ ಅವರು ಶೌಚಾಲಯ ನಿರ್ಮಿಸಲು ಪುರಸಭೆ ನೀಡುವ ಸಹಾಯ ಧನ ಮತ್ತು ಸ್ವಚ್ಛತೆ ಅಭಿಯಾನದ ಕುರಿತು ಮತ್ತು ಲಯನ್ಸ್‌ ಕ್ಲಬ್‌ ಕಾರ್ಯದರ್ಶಿ ಬಾಲಶೇಖರ ಬಂದಿ ಸ್ವಚ್ಛತೆ ಕುರಿತು ಉಪನ್ಯಾಸ ನೀಡಿದರು.
ವಾರ್ಡ್‌ 17ರಲ್ಲಿಯ ಎಲ್ಲ ಮನೆಗಳಿಗೆ ಭೇಟ್ಟಿ ನೀಡಿ ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದು ಅರಿವು ಮೂಡಿಸಿದರು. ಪುರಸಭೆ ಉಪಾಧ್ಯಕ್ಷ ರವೀಂದ್ರ ಪಿ. ಸೋನವಾಲ್ಕರ್‌, ಸದಸ್ಯರಾದ ರಾಮಣ್ಣಾ ಹಂದಿಗುಂದ, ಈರಪ್ಪ ಬನ್ನೂರ, ಡಾ. ಎಸ್‌.ಎಸ್‌. ಪಾಟೀಲ, ಲಯನ್ಸ್‌ ಕ್ಲಬ್‌ ಸದಸ್ಯರಾದ ಮಲ್ಲಿನಾಥ ಶೆಟ್ಟಿ, ಶ್ರೀಶೈಲ್‌ ಲೋಕನ್ನವರ, ವಿಜಯಕುಮಾರ ಸೋನವಾಲ್ಕರ್‌, ಮಹಾಂತೇಶ ಹೊಸೂರ, ಸಂಜಯ ಮೋಕಾಶಿ, ಶಿವಾನಂದ ಗಾಡವಿ, ಸುರೇಶ ನಾವಿ, ಗಿರೀಶ ಆಸಂಗಿ ಮತ್ತಿತರರು ಇದ್ದರು. ಬಿ.ಎಸ್‌. ಪಾಟೀಲ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here