ಭಾರತೀಯ ಸಂಸ್ಕೃತಿ ಜೀವಂತವಾಗಿರಲು ಭಕ್ತಿಪಂಥವೇ ಕಾರಣ : ರಂಜಾನ್‌ ದರ್ಗಾ

0
44
loading...

ಅಂಕೋಲಾ : ಇಂದಿಗೂ ಕೂಡ ಭಾರತೀಯ ಸಂಸ್ಕೃತಿ ಜೀವಂತವಾಗಿದೆ ಎಂದರೆ ಅದಕ್ಕೆ ಭಕ್ತಿಪಂಥವೇ ಕಾರಣವಾಗಿದೆ. ಈ ಪಂಥದಲ್ಲಿ ಶರಣರು, ಸೂಫಿಗಳು, ದಾಸರು, ತತ್ವಪದಕಾರರ ಕೊಡುಗೆ ಸಮಾಜಕ್ಕೆ ಅಪಾರವಾಗಿದ್ದು, ಇಂತವರ ಚರಿತ್ರೆಗಳನ್ನು ಪ್ರತಿಯೊಬ್ಬರೂ ಅಧ್ಯಯನ ನಡೆಸಬೇಕಾದ ಅಗತ್ಯವಿದೆ ಎಂದು ಸಾಹಿತಿ ರಂಜಾನ್‌ ದರ್ಗಾ ಅಭಿಪ್ರಾಯಪಟ್ಟರು.

ಪಟ್ಟಣದ ಜಿ.ಸಿ. ಕಾಲೆಜಿನ ಯು.ಜಿ.ಸಿ. ಸಭಾಂಗಣದಲ್ಲಿ ಗೋಖಲೆ ಸೆಂಟೆನರಿ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಕನಕ ಅಧ್ಯಯನ ಸಂಶೋಧನಾ ಕೇಂದ್ರ ಇವರ ಆಶ್ರಯದಲ್ಲಿ ಶುಕ್ರವಾರ ನಡೆದ ಕನಕ ಜಯಂತೋತ್ಸವ, ಕನಕ ತತ್ವ ಚಿಂತನ ಪ್ರಚಾರೋಪನ್ಯಾಸ ಮಾಲಿಕೆಯಲ್ಲಿ ‘ಬಸವಾದ್ವೈತ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ಮಂಗಳೂರು ವಿಶ್ವವಿದ್ಯಾಲಯದ ಕನಕ ಸಂಶೋಧನಾ ಕೇಂದ್ರದ ಸಂಯೋಜಕ ಪ್ರೊ. ಬಿ. ಶಿವರಾಮ ಶೆಟ್ಟಿ ಮಾತನಾಡಿ, ಕನಕದಾಸರು ತಮ್ಮದೇ ಆದ ಕೀರ್ತನೆಗಳ ಮೂಲಕ ಜನರನ್ನು ಜಾಗೃತಗೊಳಿಸುವಲ್ಲಿ ಶ್ರಮಿಸಿದವರು. ಅವರ ಎಲ್ಲಾ ಚಿಂತನೆಗಳು ಇಂದಿಗೂ ಕೂಡ ಪ್ರಸ್ತುತವಾಗಿದೆ. ಯುವ ಜನಾಂಗ ಇಂತವರ ಕುರಿತು ಅಧ್ಯಯನ ನಡೆಸಬೇಕು ಎಂದರು.

ಪ್ರಾಚಾರ್ಯ ಡಾ. ಇಮ್ತಿಯಾಜ ಅಹ್ಮದ್‌ ಖಾನ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿನಿ ನಮೃತಾ ಗಾಂವಕರ ಪ್ರಾರ್ಥನೆ ಹಾಡಿದರು. ವಿದ್ಯಾರ್ಥಿಗಳಾದ ವಿನುತಾ ನಾಯ್ಕ, ಶಾಲಿನಿ, ಕಾರ್ತಿಕ ನಾಯ್ಕ ಕನಕದಾಸರ ಕೀರ್ತನೆ ಪ್ರಸ್ತುತಪಡಿಸಿದರು. ಪ್ರಾಧ್ಯಾಪಕ ಬಿ.ಆರ್‌. ರಾಜು ಸ್ವಾಗತಿಸಿ ಪರಿಚಯಿಸಿದರು. ವಿದ್ಯಾರ್ಥಿನಿ ಅಪೂರ್ವ ನಾಯಕ ನಿರೂಪಿಸಿದರು. ಪ್ರಾಧ್ಯಾಪಕ ಎಸ್‌.ಆರ್‌. ಶಿರೋಡ್ಕರ ವಂದಿಸಿದರು.

loading...

LEAVE A REPLY

Please enter your comment!
Please enter your name here