ಭೋವಿ ಜನಾಂಗ ಸಮಾಜಕ್ಕೆ ನೀಡಿದ ಕೊಡುಗೆ ಬೆಲೆ ಕಟ್ಟಲಾಗದು,

0
94
loading...

ಕೋಹಳ್ಳಿ : ಭೋವಿ ಜನಾಂಗ ಸಮಾಜಕ್ಕೆ ನೀಡಿದ ಕೊಡುಗೆ ಬೆಲೆ ಕಟ್ಟಲಾಗದು, ಮನುಕುಲಕ್ಕೆ ನಾಗರೀಕತೆಯನ್ನು ಕಲಿಸಿದ್ದು ಭೋವಿ ಜನಾಂಗ ಎಂದು ಶಿಕ್ಷಕ ಡಿ ಎಮ್‌ ಕಾಂಬಳೆ ಹೇಳಿದರು ಅವರು ರವಿವಾರ ಸರಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಗುರುಸಿದ್ದರಾಮೇಶ್ವರ ಶರಣರ (ಭೋವಿ ವಡ್ಡರ ಸಮಾಜ)ರ ಜಯಂತಿ ಪೂಜೆ ನೇರವೆರಿಸಿ ಮಾತನಾಡಿ, ಭೋವಿ ಜನಾಂಗವು ಜಗತ್ತಿನಲ್ಲಿ ಸೌಧ, ದೇವಾಲಯ, ಕೆರೆ, ಬಾವಿ ನಿರ್ಮಿಸಿ ಕೊಡುವ ಭೋವಿ ಜನಾಂಗವಿಲ್ಲದೇ ಇಂದು ಮನುಷ್ಯ ನಾಗರೀಕತೆಯನ್ನೇ ಕಲಿಯುತ್ತಿರಲಿಲ್ಲ. ಮನುಕುಲ ಭೋವಿ ಜನಾಂಗದ ಕಷ್ಟಗಳನ್ನು ನಿವಾರಣೆ ಮಾಡುವಂತಹ ಕಾರ್ಯವನ್ನು ಮಾಡಿದ ಕೀರ್ತಿ ಸಿದ್ದರಾಮೇಶ್ವರಿಗೆ ಸಲ್ಲುತ್ತದೆ ಎಂದು ಹೇಳಿದರು. ಮುಖ್ಯೋಪಾದ್ಯಾಯ ಆರ್‌ ಎಲ್‌ ರಾಠೋಡ, ಎಸ್‌ಡಿಎಮ್‌ಸಿ ಅಧ್ಯಕ್ಷ ಸಂಗಯ್ಯಾ ಪೂಜಾರಿ, ಗ್ರಾಪಂ ಉಪಾಧ್ಯಕ್ಷ ಶ್ರೀಕಾಂತ ಆಲಗೂರ, ಗುರಲಿಂಗ ಝರೆ, ಸುಭಾನ ಮೆಂಡಿಗೇರಿ, ಯಮನೂರ ಪಾತ್ರೂಟ, ರಮೇಶ ಪಾತ್ರೂಟ, ದುಂಡಪ್ಪ ಡಂಬಳಿ, ಸಿದ್ದುಗೌಡ ಝರೆ, ನಿಜಲಿಂಗ ಬಡಕೆ, ವಿನೋಧ ಪಾತ್ರೂಟ, ಕುಮಾರ ಪಾತ್ರೂಟ, ಪಪ್ಪು ಪಾತ್ರೂಟ, ಅಪ್ಪಾಸಾಬ ನಾಗಣಿ, ಮಲಿಕಸಾಬ ಪಡಸಲಗಿ, ಎಸ್‌ ಎಸ್‌ ಪಾಟೀಲ, ಡಿ ಎನ್‌ ಧರಿಗೌಡರ, ಎಸ್‌ ಪಿ ಅಥಣಿ, ಎಚ್‌ ಎ ಮಗದುಮ್ಮ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಗ್ರಾಮ ಪಂಚಾಯತ ಕಾರ್ಯಾಲಯ: ಸ್ಥಳೀಯ ಗ್ರಾಮ ಪಂಚಾಯತದಲ್ಲಿ ಸಿದ್ದರಾಮೇಶ್ವರ ಭಾವಚಿತ್ರಕ್ಕೆ ರಮೇಶ ಪಾತ್ರೂಟ ಪೂಜೆ ನೇರವೇರಿಸಿದ್ದರು. ಗ್ರಾಪಂ ಉಪಾಧ್ಯಕ್ಷ ಶ್ರೀಕಾಂತ ಆಲಗೂರ, ಗುರಲಿಂಗ ಝರೆ, ಮಲಿಕಸಾಬ ಪಡಸಲಗಿ, ದುಂಡಪ್ಪ ಬಾಡಗಿ, ಕುಮಾರ ಪಾತರೂಟ, ಅಪ್ಪಾಸಾಬ ನಾಗಣಿ, ನಿಜಲಿಂಗ ಬಡಕೆ, ಗುರದೇವ ಮಾಳಿ, ವಿನೋಧ ಪಾತ್ರೂಟ, ಯಮನೂರ ಪಾತ್ರೂಟ, ಕೇದಾರಿ ಮರಗಾಳೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಪೋಟೋ ಶಿರ್ಷೀಕೆ : 15 ಕೋಹಳ್ಳಿ 1 : ಕೋಹಳ್ಳಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಸಿದ್ದರಾಮೇಶ್ವರ ಜಯಂತಿ ಪೂಜೆಯಲ್ಲಿ ಪಾಲ್ಗೊಂಡ ಗಣ್ಯರು.

loading...

LEAVE A REPLY

Please enter your comment!
Please enter your name here