ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಿ

0
22
loading...

ಬೆಟಗೇರಿ: ಸಾರ್ವಜನಿಕರು ಬಯಲು ಬಹಿರ್ದೆಸೆ ಮಾಡದೆ ಪ್ರತಿ ಮನೆಗೊಂದು ಶೌಚಾಲಯ ನಿರ್ಮಿಸಿಕೊಂಡು ಸ್ವಚ್ಛ ಮತ್ತು ಉತ್ತಮ ಪರಿಸರ ನಿರ್ಮಿಸಲು ಸಂಕಲ್ಪ ಮಾಡಬೇಕೆಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಪಂ ಸದಸ್ಯ ಅರ್ಜುನ ಅಂದಾನಿ ಹೇಳಿದರು.

ಅವರು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಾರ್ಡ ನಂ1ರ ನಾಗರಿಕರಿಗೆ ಸಲಹೆ ನೀಡುತ್ತಾ ನಾಗರಿಕರು ಗ್ರಾಮದ ಸಮಗ್ರ ಅಭಿವೃದ್ಧಿಗೆ ನಾಬೆಗರಿಕರ ಸಹಕಾರ ಬಹಳ ಮುಖ್ಯವಾಗಿದೆ. ಬಯಲು ಬಹಿರ್ದೆಸೆಯಿಂದ ರೋಗರುಜಿನಿಗಳು ಹರಡುತ್ತವೆ.

ಹೀಗಾಗಿ ಸ್ವಚ್ಛ ಭಾರತ ಅಭಿಯಾನ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಶೌಚಾಲಯ ನಿರ್ಮಿಸಲು ಸಹಾಯ ಧನ ನೀಡುತ್ತಿದೆ. ಗ್ರಾಮದ ವಾರ್ಡ ನಂ1ರ ನಾಗರಿಕರು ಇದರ ಸದುಪಯೋಗ ಪಡೆದುಕೊಂಡು ವಾರ್ಡ ಮತ್ತು ಗ್ರಾಮವನ್ನು ಬಯಲು ಶೌಚಮುಕ್ತ ಗ್ರಾಮವನ್ನಾಗಿ ಪರಿವರ್ತಿಸುವಲ್ಲಿ ಪ್ರಯತ್ನಿಸಲು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಲ್ಲಪ್ಪ ಪಣದಿ, ಈರಪ್ಪ ಕಂಬಿ, ದುಂಡಪ್ಪ ಕಂಬಿ, ಮುತ್ತೆಪ್ಪ ಕನೋಜಿ, ಅಡಿವೆಪ್ಪ ಮುಧೋಳ, ಕಲ್ಲಪ್ಪ ಹುಬ್ಬಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here