ಯುವ ವಿಕಲಚೇತನರಿಗೆ ಉದ್ಯೋಗ ಅವಕಾಶ

0
199
loading...

ಸಿಂದಗಿ: ಎ.ಪಿ.ಡಿ. ಸಂಸ್ಥೆಯು, ಕರ್ನಾಟಕ ಅಂಗವಿಕಲರ ಐಕ್ಯತಾ ವೇದಿಕೆಯು ಹಾಗೂ ತಾಲ್ಲೂಕ ಪಂಚಾಯತ ಎಮ್‌.ಆರ್‌.ಡಬ್ಲೂ ಇವರ ಸಂಯುಕ್ತ ಆಶ್ರಯದಲ್ಲಿ. ವಿಕಲಚೇತನರಿಗೆ ತರಬೇತಿ ಮತ್ತು ಉದ್ಯೋಗ ಆಯ್ಕೆಯ ಶಿಬಿರವನ್ನುಜ.18 ರಂದು ತಾಲ್ಲೂಕ ಪಂಚಾಯತ ಸಿಂದಗಿಯಲ್ಲ್ಲಿ ಆಯೋಜಿಸಲಾಗಿದ್ದು ತಾಲೂಕಿನ ವಿಕಲಚೇತನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಿಂದಗಿ ಕರ್ನಾಟಕ ಅಂಗವಿಕಲರ ಐಕ್ಯತಾ ವೇದಿಕೆ ಕಾರ್ಯದರ್ಶಿ ಗಂಗಾಧರ ಸಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕ ಅಂಗವಿಕಲರ ಐಕ್ಯತಾ ವೇದಿಕೆ ಕಳೆದ 7 ವರ್ಷದಿಂದ ರಾಜ್ಯದ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ಅಂಗವಿಕಲರಿಗೆ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದೆ ರೀತಿಯಾಗಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿ 2000 ಅಂಗವಿಕಲರಿಗೆ ಉತ್ತಮ ಆರೋಗ್ಯ, ಗುಣಾತ್ಮಕ ಶಿಕ್ಷಣ, ಮುಕ್ತ ವಾತಾವರಣ, ತರಬೇತಿ, ಮತ್ತು ಉದ್ಯೋಗ, ಸಾಮಾಜಿಕ ಭದ್ರತಾ ಸೌಲಭ್ಯಗಳು, ಅಂಗವಿಕಲರ ಹಕ್ಕುಗಳು ಸುಲಭ ರೀತಿಯಲ್ಲಿ ಸಿಗುವಂತೆ ಅಂಗವಿಕಲರ ಹಕ್ಕುಗಳನ್ನು ರಕ್ಷಿಸುವುದು ಮತ್ತು ಅಂಗವಿಕಲತೆಯನ್ನು ತಡೆಗಟ್ಟುವ ಬಗ್ಗೆ ಸಮುದಾಯಕ್ಕೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ವಿವಿಧ ರೀತಿಯ ತರಬೇತಿಗಳು ಆಯ್ದ ಉದ್ಯೋಗಕ್ಕೆ ಸಂಬಂದಿಸಿದಂತೆ 3 ತಿಂಗಳು ಮಾತ್ರ ನಡೆಯುತ್ತದೆ ತರಬೇತಿ ಮುಗಿದನಂತರ ಬೆಂಗಳೂರಿನಲ್ಲಿಯೇ ಉದ್ಯೋಗ ಕೊಡಿಸಲಾಗುತ್ತದೆ. ಉದ್ಯೋಗ ಪ್ರಾರಂಭದಲ್ಲಿಯೆ ರೂ. 7000 ಸಂಬಳ ನೀಡಲಾಗುವುದು.

ಆಸಕ್ತಿ ಇರುವ ಯುವ ವಿಕಲಚೇತನರು ಮತ್ತು 18 ವರ್ಷ ದಿಂದ 30 ವರ್ಷ ಒಳಗಿರುವ ದೈಹಿಕ ವಿಕಲಚೇತನರು ಹಾಗೂ ವಾಕ್‌ ಮತ್ತು ಶ್ರವಣ ನ್ಯೂನ್ಯತೆ ಯುಳ್ಳ ವಿಕಲಚೇತನರಿಗೆ ತರಬೇತಿ ಮತ್ತು ಉದ್ಯೋಗ ತಪಾಸಣ ಶಿಬಿರಕ್ಕೆ ಭಾಗವಹಿಸಲು ಕೋರಲಾಗಿದೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ. 9035855641, 9902666933, 9901525199, 9535935926 ಸಂಪರ್ಕಿಸುವಂತೆ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here