ವಿಜ್ಞಾನ ವಸ್ತು ಪ್ರದರ್ಶನ

0
100
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ: ಇಂದಿನ ಯುಗದಲ್ಲಿ ವಿಜ್ಞಾನದ ಅವಶ್ಯಕತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯವಾಗಿದೆ ಎಂದು ಪ್ರೇರಣಾ ಶಾಲೆಯ ಸಂಸ್ಥಾಪಕ ಡಾ. ವಿ.ಎಸ್‌.ಸಾಧುನವರ ಹೇಳಿದರು. ಪಟ್ಟಣದ ಪ್ರೇರಣಾ ಶಾಲೆಯಲ್ಲಿ ವಿದ್ಯಾರ್ಥಿಗಳು ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿ, ಪಾಲಕರು, ಶಿಕ್ಷಕರು ಮಕ್ಕಳಲ್ಲಿ ಪ್ರಾಥಮಿಕ ಹಂತದಿಂದಲೇ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಬೇಕು. ಅವರಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ವಿಜ್ಞಾನದ ಬಗ್ಗೆ ಹೆಚ್ಚಿನ ಒಲವು ತೋರುವಂತೆ ಸೂಕ್ತ ತರಬೇತಿ ನೀಡಬೇಕು ಎಂದರು.

ಮಕ್ಕಳು ಕೇವಲ ಪುಸ್ತಕ ಹುಳುವಾಗದೇ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಬೇಕು. ಪಠ್ಯೇತರ ಚಟುವಟಿಕೆಗಳ ಭಾಗವಾಗಿರುವ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿ ತಾವು ತಯಾರಿಸಿದ ವಿಷಯದ ಕುರಿತು ಮಾಹಿತಿ ನೀಡುತ್ತಿರುವುದು ಶ್ಲಾಘನೀಯ ಎಂದರು.

ನಿರ್ದೇಶಕಿ ಉಷಾ ಸಾಧುನವರ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಟಿ. ದಾಸಪ್ಪನವರ ಮಾತನಾಡಿ, ಪ್ರೇರಣಾ ಸಂಸ್ಥೆಯು ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅವರ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೋತ್ಸಾಹ ನೀಡುತ್ತಿದ್ದು, ಇಲ್ಲಿನ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿಯೂ ಸಹ ಸಾಕಷ್ಟು ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದರು.

ಮಕ್ಕಳು ವಿವಿದ ಬಗೆಯ ವಿಜ್ಞಾನ ವಸ್ತುಗಳ ಮಾದರಿಗಳನ್ನು ಪ್ರದರ್ಶಿಸಿ, ನೋಡುಗರಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಬಿ. ಎಸ್‌. ವಾಲಿ, ಮೂಖ್ಯಾಪಾಧ್ಯಾಯನಿ ಬಿಂಧು ಕುರುಪ, ಶಿಕ್ಷಕರು, ಪಾಲಕರು ಹಾಗೂ ಸಿಬ್ಬಂದಿ ಇದ್ದರು.

loading...

LEAVE A REPLY

Please enter your comment!
Please enter your name here