ವೆಲ್ಫೇರ್ ಪಾರ್ಟಿಯಿಂದ ‘ಯುವಜಾಗೃತಿದೇಶ ಸಮೃದ್ಧಿ’ ಯುವ ಸಮಾವೇಶ

0
24
loading...

ಕನ್ನಡಮ್ಮ ಸುದ್ದಿ-ಭಟ್ಕಳ : ವೆಲ್ಫೇರ್ ಪಾರ್ಟಿಆಫ್‍ಇಂಡಿಯಾಕರ್ನಾಟಕಘಟಕವು ‘ಯುವಜಾಗೃತಿದೇಶ ಸಮೃದ್ಧಿ’ ರಾಜ್ಯವ್ಯಾಪಿ ವೆಲ್ಫೇರ್‍ಯುವಅಭಿಯಾನ ಹಮ್ಮಿಕೊಂಡಿದ್ದುಇದರ ಅಂಗವಾಗಿ ದ.ಕ, ಉಡುಪಿ, ಕೊಡಗು ಹಾಗೂ ಉತ್ತರಕನ್ನಡ ಜಿಲ್ಲೆಗಳನ್ನೊಳಗೊಂಡ ಯುವ ಸಮಾವೇಶವನ್ನು ಫೆ.26 ರಂದು ಭಟ್ಕಳದಲ್ಲಿ ಆಯೋಜಿಸಲಾಗುವುದುಎಂದುಡಬ್ಲೂ.ಪಿ.ಐ. ಕರ್ನಾಟಕರಾಜ್ಯ ಪ್ರಧಾನ ಕಾರ್ಯದರ್ಶಿ ತಾಹಿರ್ ಹುಸೇನ್ ಹೇಳಿದರು.
ಅವರು ಶನಿವಾರಇಲ್ಲಿನ ವೆಲ್ಪೇರ್‍ಆಸ್ಪತ್ರೆಯ ಸಭಾ ಭವನದಲ್ಲಿಯುವ ಸಮಾವೇಶದ ಪೂರ್ವ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ವಲ್ಫೇರ್ ಪಾರ್ಟಿ ಮೌಲ್ಯಾಧಾರಿತರಾಜಕೀಯ ಶಕ್ತಿಯವನ್ನು ಪ್ರತಿಪಾದಿಸುವ ರಾಷ್ಟ್ರೀಯ ಪಕ್ಷವಾಗಿದ್ದು ನಿಷ್ಕಳಂಕ ಚಾರಿತ್ರ್ಯ ಹಿನ್ನೆಲೆಯುಳ್ಳ, ನಿಸ್ವಾರ್ಥ ಸಮಾಜ ಸೇವಕರು ಹಾಗೂ ಸಾಮಾಜಿಕ ಹೋರಾಟಗಾರರೇ ಪಕ್ಷದ ಬಂಡವಾಳವಾಗಿದ್ದಾರೆ.ಯುವಕರು ಈ ದೇಶದಆಧಾರ ಸ್ಥಂಭ, ಅವರು ಮೋಜು, ಮಜಾಗಳಿಂದ ದೂರವುಳಿದು ದೇಶದ ನವ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕು ಎಂದುಕರೆ ನೀಡಿದಅವರು ನೈತಿಕತೆ, ಮೌಲ್ಯಾಧಾರಿತ ನೆಲೆಗಟ್ಟಿನಲ್ಲಿ ಬದುಕುಕಟ್ಟಿದರೆ ಈ ದೇಶಅಭ್ಯುದಯ ಹೊಂದುತ್ತದೆ, ಯುವ ಸಮಾವೇಶದ ಮೂಲಕ ದೇಶದಯುವಕರಲ್ಲಿಜಾಗೃತಿ ಪ್ರಜ್ಞೆಯನ್ನು ಬೆಳೆಸುವುದರ ಜತೆಗೆಅವರನ್ನುದೇಶದ ಶಕ್ತಿಯನ್ನಾಗಿರೂಪಿಸಲಾಗುವುದುಎಂದು ತಿಳಿಸಿದರು.
ಯುವ ಸಮಾವೇಶದಕುರಿತಂತೆ ರೂಪುರೇಶೆಗಳನ್ನು ಸಿದ್ಧಪಡಿಸಲಾಗಿದ್ದು ಯುವಕರಿಗಾಗಿ ವಿವಿಧಕ್ರೀಡೆ, ಪ್ರಬಂಧ, ಬೀದಿ ನಾಟಕ ಹಾಗೂ ಮೇರವಣೆಗೆಯನ್ನು ನಡೆಸುವುದರ ಮೂಲಕ ಸಮಾವೇಶವನ್ನುಅತ್ಯಂತ ಯಶಸ್ವಿಗೊಳಿಸಲಾಗುವುದು ಸುಮಾರುಉಡುಪಿ, ದ.ಕ.ಕೊಡಗು, ಉತ್ತರಕನ್ನಡಜಿಲ್ಲೆ ಸೇರಿದಂತೆ ಸುಮಾರು 5ಸಾವಿರಕ್ಕೂ ಹೆಚ್ಚು ಯುವಕರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದುರಾಜ್ಯ ಹಾಗೂ ಕೇಂದ್ರದ ಮುಖಂಡರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿಯುವ ಸಮಾವೇಶ ಸಂಚಾಲಕ ಮುಹಮ್ಮದ್‍ಅಶ್ರಫ್, ವೆಲ್ಫೇರ್ ಪಾರ್ಟಿಯ ಉ.ಕ.ಜಿಲ್ಲಾಧ್ಯಕ್ಷ ಮುಹಮ್ಮದ್‍ಯೂನೂಸ್‍ರುಕ್ನುದ್ದೀನ್, ಪ್ರಧಾನ ಕಾರ್ಯದರ್ಶಿ ಶೌಕತ್‍ಖತೀಬ್, ಉಡುಪಿ ಯುವಅಧ್ಯಕ್ಷರೈಯೀಸ್‍ಆಹ್ಮದ್, ಉಡುಪಿ ಜಿಲ್ಲಾಧ್ಯಕ್ಷಅಬ್ದುಲ್‍ಅಝೀಝ್, ಯುವ ಮುಖಂಡಅಬ್ದುಲ್‍ರಝಾಖ್‍ಉಡುಪಿ, ಜಿಲ್ಲಾಸಮಿತಿಯ ಸೈಯ್ಯದ್‍ಅಶ್ರಫ್ ಬರ್ಮಾರ್, ಫಾರೂಖ್ ಮಾಸ್ಟರ್, ಅಬ್ದುಲ್ ಮಜೀದ್ ಕೋಲಾ, ಖಮರುದ್ದೀನ್ ಮಷಾಯಿಖ್, ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

loading...