ವ್ಯಾಪಾರಿಗಳ ಸಮಸ್ಯೆಗಳಿಗೆ ಸ್ಪಂದಿಸುತ್ತೆನೆ: ಕುಗಾಳಿ

0
49
loading...

ವ್ಯಾಪಾರಿಗಳ ಸಮಸ್ಯೆಗಳಿಗೆ ಸ್ಪಂದಿಸುತ್ತೆನೆ: ಕುಗಾಳಿ

ಕನ್ನಡಮ್ಮ ಸುದ್ದಿ-ಬೆಳಗಾವಿ: ಎಪಿಎಂಸಿಯಲ್ಲಿ ಬರುವಂತ ವ್ಯಾಪಾರಿ ವರ್ಗದವರ ಕುಂದುಕೊರತೆಗಳನ್ನು ನಿವಾರಿಸುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡುತ್ತೆನೆ ಎಂದು ಮಹೇಶ ಈಶ್ವರಪ್ಪ ಕುಗಾಳಿ ಭರವಸೆ ನೀಡಿದರು.
ಕೃಷಿ ಉತ್ಪನ್ನ ಮಾಡುಕಟ್ಟೆ ವ್ಯಾಪ್ತಿ ಬರುವ ತರಕಾರಿ ವ್ಯಾಪಾರಿಗಳ ಮುಖ್ಯ ಸಮಸ್ಯೆಗಳನ್ನು ಗುರುತಿಸಿ ಅವರ ಸಮಸ್ಯೆಗಳು ಏನು ಎಂಬುದನ್ನು ತಿಳಿದುಕೊಂಡು ಅವರಿಗೆ ಶೀಘ್ರದಲ್ಲಿಯೇ ಪರಿಹರಿಸಲು ಪಣತೊಡುತ್ತೆನೆ ಎಂದು ತಮ್ಮ ಮತಕ್ಷೇತ್ರದ ಮತದಾರರಿಗೆ ಭರವಸೆ ಕೊಟ್ಟರು.
ಅಲ್ಲದೇ, ನಾನು ರವಿವಾರ ಪೇಟೆಯಲ್ಲಿ ಆಲೋಗಡ್ಡಿ, ಇರುಳ್ಳಿಯ ವಾಪಾರ ಮಾಡುತ್ತಿದ್ದೆನೆ ಹಾಗಾಗಿ ವ್ಯಾಪಾರಸ್ಥರ ತೊಂದರೆಗಳು ಏನು ಎಂಬುದನ್ನು ನನಗೆ ತಿಳಿದಿದೆ. ಈ ನಿಟ್ಟಿನಲ್ಲಿ ನನಗೆ ನಿಮ್ಮ ಮತಗಳನ್ನು ನೀಡಿ ನನ್ನ ಕೈಯಲ್ಲಿ ಅಧಿಕಾರ ನೀಡಿದ್ದೆ ಆದರೆ, ನಾನು ಉತ್ತಮ ಕೆಲಸವನ್ನು ಮಾಡುತ್ತೆನೆ ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಒಟ್ಟು 17 ಸೀಟುಗಳು ಬರುತ್ತವೆ ಅದರಲ್ಲಿ 3 ಸೀಟುಗಳು ಅವಿರೋಧÀವಾಗಿ ಆಯ್ಕೆಯಾಗಿವೆ. ಅವುಗಳಲ್ಲಿ ಪ್ರೋಸೆಸಿಂಗ್‌ ಸೊಸೈಟಿಯಿಂದ ಮನೋಜ ಮತ್ತಿಕೊಪ್ಪ, ಮಾರ್ಕೆಟಿಂಗ್‌ ಸೊಸೈಟಿಯಿಂದ ಪ್ರಮೋದ ಪಾಟೀಲ, ಹುದಲಿ ಕ್ಷೇತ್ರದಿಂದ ಮಹಾದೇವಿ ಕಣಗಣ್ಣಿ ಎಂಬುವರು ಅವಿರೋಧÀವಾಗಿ ಆಯ್ಕೆಯಾಗಿದ್ದಾರೆ.

loading...

LEAVE A REPLY

Please enter your comment!
Please enter your name here