ಶಾಸಕ ಬಾಲಚಂದ್ರ ಕೊಂಗಾಲಿ ಪರ ಮತಯಾಚನೆ

0
19
loading...

ಹಳ್ಳೂರ : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಗೊಕಾಕ ಇದರ ಸಾರ್ವತ್ರಿಕ ಚುನಾವಣೆಯಲ್ಲಿ ಮೂಡಲಗಿ ಕ್ಷೇತ್ರದಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಪರ ಬೆಂಬಲಿತ ಅಭ್ಯರ್ಥಿಯಾದ ಲಕ್ಷ್ಮಿಬಾಯಿ ಅಲ್ಲಪ್ಪ ಕೊಂಗಾಲಿ ಪರ ಹಳ್ಳೂರ ಗ್ರಾಮದಲ್ಲಿ ಮುಖಂಡರು ಮತಯಾಚಿಸಿದರು.

ಈ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ನಿರ್ದೇಶಕ ಮಾರುತಿ ನಾ. ಮಾವರಕರ ಮಾತನಾಡಿ ಅರಭಾಂವಿ ವಿಧಾನಸಭಾ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿತ ಅಭ್ಯರ್ಥಿಯನ್ನು ಮತ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಯಶಸ್ವಿಗೆ ಮತದಾರರು ಬೆಂಬಲ ನೀಡಬೇಕೆಂದು ಹೇಳಿದರು.

ಪಿಕೆಪಿಎಸ್‌ ಅಧ್ಯಕ್ಷ ಹಣಮಂತ ತೇರದಾಳ, ಸುರೇಶ ಕತ್ತಿ, ಸುರೇಶ ಡಬ್ಬನ್ನವರ, ಬಸಪ್ಪ ಸಂತಿ, ಬಸಪ್ಪ ಹಡಪದ, ಶ್ರೀಶೈಲ ಬಾಗೋಡಿ, ಶಿವದುಂಡು ಕೊಂಗಾಲಿ, ಸಂಗಪ್ಪ ನಾಯ್ಕ, ಮಲ್ಲಪ್ಪ ಪೂಜೇರಿ, ಲಕ್ಷ್ಮಣ ಸಪ್ತಸಾಗರ, ಶ್ರೀಶೈಲ ಅಂಗಡಿ, ಕುಮಾರ ಲೋಕಣ್ಣವರ, ಗ್ರಾಮ ಪಂಚಾಯತ ಸದಸ್ಯರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here