ಶಿಕ್ಷಣಕ್ಕಾಗಿ ಇಡೀ ಬದುಕನ್ನೆ ಮುಡಪಾಗಿಟ್ಟ ಸಾವಿತ್ರಿಬಾಯಿ ಫುಲೆ

0
73
loading...

ಕನ್ನಡಮ್ಮ ಸುದ್ದಿ-ಬೆಳಗಾವಿ:
ಶಿಕ್ಷಣ ಪದ್ದತಿಯನ್ನು ಅತ್ಯಂತ ಕನಿಷ್ಠ ಕಾಣುಲಾಗುತ್ತಿರುವ ಸನಾತನ ಕಾಲದಲ್ಲಿ ಶಿಕ್ಷಣಕ್ಕಾಗಿ ಇಡೀ ಬದುಕನ್ನೆ ಮುಡಪಾಗಿಟ್ಟ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಣೆ ಮಾಡಬೇಕಿದೆ ಎಂದು ಬಂಡಾಯ ಸಾಹಿತಿ ಹಾಗೂ ಕಲಬುರ್ಗಿ ಎನ್‌.ವಿ.ಕಾಲೇಜಿನ ಕನ್ನಡ ಅಧ್ಯಾಪಕ ಡಾ. ಸೂರ್ಯಕಾಂತ ಸುಜ್ಯಾತ್‌ ಅಭಿಪ್ರಾಯಪಟ್ಟರು.
ಮಂಗಳವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಸಾವಿತ್ರಿಬಾಯಿ ಫುಲೆ ಅವರ ಜಯಂತ್ಯೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಉಪನ್ಯಾಸ ಹಾಗೂ ಅರಿವಿನ ತಾಯಿ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
18 ನೇ ಶತಮಾನದಲ್ಲಿ ಶೇ.60ಕ್ಕಿ ಹೆಚ್ಚು ಸನಾತವಾದಿಗಳು, ಪುರೋಹಿತ ಶಾಹಿ, ಮೇಲ್ವರ್ಗದ ಸಮುದಾಯದವರು ಅಸ್ಪೃಶ್ಯರನ್ನು ಕನಿಷ್ಠವಾಗಿ ಕಾಣುತ್ತಿರುವ ಸಂದರ್ಭದಲ್ಲಿ ಅವಿದ್ಯಾವಂತರಿಗೆ ಒಳ್ಳೆಯ ಶಿಕ್ಷಣ ನೀಡಲು ಮುಂದಾದ ಸಂದರ್ಭದಲ್ಲಿ ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ದಂಪತಿಯನ್ನು ಅಣಕಿಸುವುದಲ್ಲದೇ ಅತ್ಯಂತ ಕೀಳರಿಮೆಯಿಂದ ನೋಡುತ್ತಿರುವ ಕಾಲಘಟ್ಟದಲ್ಲಿ ಮೇಲ್ವರ್ಗದ ಯಾವ ಬೇದರಿಕೆ ಹಾಗೂ ದೃಷ್ಟಿಕೋಣವನ್ನು ಲೆಕ್ಕಿಸದೇ ಶಿಕ್ಷಣಕ್ಕೆ ತಮ್ಮ ಜೀವನವನ್ನು ಸವಿಸಿದ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆರಚರಣೆ ಮಾಡಲು ಸರ್ಕಾರಗಳು ಕ್ರಮಕೈಗೊಳ್ಳಬೇಕಿದೆ ಎಂದರು.
ಇಂದು ಶಿಕ್ಷಕರ ದಿನವನ್ನಾಗಿ ಆಚರಣೆ ಮಾಡುತ್ತಿರುವ ಸರ್ವಪಲ್ಲಿ ರಾಧಾಕೃಷ್ಣ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಕಾಲದ ಶಿಕ್ಷಣ ವ್ಯವಸ್ಥೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಸನಾತನವಾದಿಗಳ ಕಾಲಘಟ್ಟದಲ್ಲಿ ಪ್ರಜ್ಞಾವಂತ ಮೇಲ್ವರ್ಗದ ಆಡಳಿತ ಶಾಹಿಗಳು ಶಿಕ್ಷಣಕ್ಕೆ ಹೆಚ್ಚು ಉತ್ತೇಜನ ನೀಡದಿರುವುದನ್ನು ಮನಗಂಡ ಫುಲೆ ದಂಪತಿ ಅವಿದ್ಯಾವಂತರ ಬಾಳಲ್ಲಿ ಹೊಸ ಸಂಚಲನ ಮೂಡಿಸಲು ಶಿಕ್ಷಣ ಕೇಂದ್ರಗಳನ್ನು ಆರಂಭಿಸಿ ಶಿಕ್ಷಣ ಬೋಧನೆ ಮಾಡುತ್ತಿದ್ದರು. ಆದರೆ ಇದನ್ನು ಸಹಿಸಿಕೊಳ್ಳದ ಕೇಲವರು ಪುಲೆ ಅವರ ಕುಟುಂಬಕ್ಕೆ ಬೇದರಿಕೆ ಹಾಕಿದರೂ ತಮ್ಮ ವೃತ್ತಿಯನ್ನು ಮೊಟಕುಗೊಳಿಸದೆ ಮುಂದುರಿಸಿದ ದೇಶದ ಮೊದಲ ಶಿಕ್ಷಕಿ ಹಾಗೂ ದಿಟ್ಟ ಮಹಿಳೆಯ ಗುರುತಿಸಬೇಕಾದ ಹಿನ್ನೆಲೆಯಲ್ಲಿ ಜ.3 ನ್ನು ಶಿಕ್ಷಕರ ದಿನವನ್ನಾಗಿ ಆಚರಿಸಬೇಕು ಎಂದು ಹೇಳಿದರು.
ದೇಶದಲ್ಲಿ ಅಂದಿನ ಕಾಲದಲ್ಲಿ ಮಹಿಳೆಯನ್ನು ಕನಿಷ್ಠವಾಗಿ ಕಾಣುವುದರ ಜೊತೆಗೆ ಅವರ ಉಡುಪು, ಆಚಾರ-ವಿಚಾರಗಳಿಗೂ ಹಲವು ಸೂತ್ರಗಳನ್ನು ಅಳವಡಿಸಲಾಗಿದ್ದನ್ನು ಮನಗಂಡ ಡಾ.ಬಿ.ಆರ್‌. ಅಂಬೇಡ್ಕರ ಅವರು ಮಹಿಳಾ ಸ್ವಾಂತತ್ರ್ಯ ಮಸೂದೆ ಮಂಡನೆಗೆ ಮುಂದಾದ ಸಂದರ್ಭದಲ್ಲಿ ಸರೋಜಿನಿ ನಾಯ್ಡು ಓರ್ವ ಮಹಿಳೆಯಾಗಿ ವಿರೋಽಸಿದ್ದರು. ಇದರಿಂದ ಮನನೊಂದ ಡಾ. ಅಂಬೇಡ್ಕರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದು ಕಳವಳ ಸಂಗತಿ.
ಸಾವಿತ್ರಿಬಾಯಿ ಫುಲೆ ಅವರ ಶ್ರಮದಿಂದಾಗಿ ಮಹಿಳೆಯರು ಹೆಚ್ಚು ಸುಶಿಕ್ಷರಾಗಿ ಎಲ್ಲ ರಂಗದಲ್ಲಿ ಮುಂಚೂಣಿಯಲ್ಲಿ ಇರುವುದರಿಂದ ಅವರ ಆಚಾರ-ವಿಚಾರಗಳನ್ನು ಇಂದಿನ ಸ್ತ್ರೀ ಸಮಾಜ ಮೈಗೂಡಿಸಿಕೊಂಡು ಗುಣಾತ್ಮಕ ಶಿಕ್ಷಣ ನೀಡಬೇಕು.
ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸೇವೆಸಲ್ಲಿಸುತ್ತಿರುವ 14ಜನ ಶಿಕ್ಷಕಿಯರಿಗೆ ಉಪನ್ಯಾಸ ಹಾಗೂ ಅರಿವಿನ ತಾಯಿ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪುರಸ್ಕಾರ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಶಂಕರ ಬಾಗೇವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್‌ ಅಧ್ಯಕ್ಷತೆ ವಹಿಸಿದ್ದರು. ಡಾ. ಎಚ್‌.ಬಿ.ಕೋಲ್ಕಾರ, ನಗರ ಸೇವಕಿ ಸರಳಾ ಹೆರೇಕರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಬಾಲಕೃಷ್ಣ ನಾಯಕ ಸ್ವಾಗತಿಸಿದರು. ರಾಮಕೃಷ್ಣ ಪಾನಬುಡೆ ನಿರೂಪಿಸಿದರು. ಮಂಜುನಾಥ ಪಾಟೀಲ ವಂದಿಸಿದರು.

loading...

LEAVE A REPLY

Please enter your comment!
Please enter your name here