ಶಿರಸಿ ಅರಣ್ಯ ಕಾಲೇಜು ತಂಡ ದ್ವಿತೀಯ ಸ್ಥಾನ

0
43
loading...

ಶಿರಸಿ: ವಿಜಯಪುರದ ಕೃಷಿ ಮಹಾವಿದ್ಯಾಲಯದಲ್ಲಿ ಜನವರಿ 12 ಮತ್ತು 13ರಂದು ನಡೆದ ಕೃಷಿ ವಿಶ್ವವಿದ್ಯಾಲಯದ ಅಂತರ್‌ ಕಾಲೇಜು ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಶಿರಸಿಯ ಅರಣ್ಯ ಕಾಲೇಜು ದ್ವಿತೀಯ ಸ್ಥಾನವನ್ನು ಗಳಿಸಿದ್ದು, ಇಲ್ಲಿಯ ಮೂವರು ವಿದ್ಯಾರ್ಥಿಗಳು ಯುನಿವರ್ಸಿಟಿ ಬ್ಲೂ ಆಗಿ ಹೊರಹೊಮ್ಮಿದ್ದಾರೆ.

ಕೃಷಿ ವಿವಿಯ ಬ್ಲೂಗಳಾಗಿ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಶಿರಸಿಯ ಕಾರ್ತಿಕ್‌ ಎನ್‌ ನಾರ್ವೇಕರ್‌, ವಿಜಯಕುಮಾರ ದಾಸಪ್ಪರ ಹಾಗೂ ವೀರಭದ್ರಪ್ಪ ಜಂತಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಮೂವರು ವಿದ್ಯಾರ್ಥಿಗಳು ಚೆನೈನಲ್ಲಿ ಜರುಗಲಿರುವ ಅಖಿಲ ಭಾರತ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಧಾರವಾಡ ಕೃಷಿ ವಿವಿಯ ತಂಡವನ್ನು ಪ್ರತಿನಿಧಿಸಲಿದ್ದಾರೆ. ಶಿರಸಿ ಕಾಲೇಜು ತಂಡದ ವ್ಯವಸ್ಥಾಪಕರಾಗಿ ಡಾ.ರಾಜು ಚವ್ಹಾಣ, ತರಬೇತುದಾರರಾಗಿ ಡಾ. ಉಮೇಶ ಮುಕ್ತಾಮಠ ಕಾರ್ಯನಿರ್ವಹಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಡೀನ್‌ ಡಾ.ಎಚ್‌.ಬಸಪ್ಪ, ಉಪನ್ಯಾಸಕ ವೃಂದ, ಸಿಬ್ಬಂದಿ ಹಾಗೂ ಹಿತೈಷಿಗಳು ಶುಭ ಕೋರಿದ್ದಾರೆ.

loading...

LEAVE A REPLY

Please enter your comment!
Please enter your name here