ಸಂಗೊಳ್ಳಿ ರಾಯಣ್ಣನ ವೀರ ಜ್ಯೋತಿಗೆ ಪೂಜೆ

0
40
loading...

ಚನ್ನಮ್ಮನ ಕಿತ್ತೂರು : ದೇಶದ ಸ್ವಾತಂತ್ರ್ಯಕ್ಕಾಗಿ ರಾಯಣ್ಣ ಹೊರಾಟ ಮಾಡಿದಂತೆ ದೇಶದ ಭದ್ರತೆಗಾಗಿ ಯುವಕರು ರಾಯಣ್ಣನ ಆದರ್ಶವನ್ನು ಮೈಗೊಡಿಸಿಕೊಳ್ಳಬೇಕೆಂದು ದೊರೆ ಮಲ್ಲಸರ್ಜ ಯುವಕ ಮಂಡಳಿಯ ಅಧ್ಯಕ್ಷ ಸಚೀನ್ ಮಾರಿಹಾಳ ಹೇಳಿದರು. ಬೈಲಹೊಂಗಲದ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮೀತಿಯವರು ನಂದಗಡದ ರಾಯಣ್ಣ ಸಮಾದಿ ಸ್ಥಳದಿಂದ ಬೈಲಹೊಂಗಲದಲ್ಲಿರುವ ರಾಣಿ ಚನ್ನಮ್ಮಾಜಿ ಸಮಾಧಿ ಸ್ಥಳಕ್ಕೆ ಸಾಗಿ ಬರುತ್ತಿದ್ದ ರಾಯಣ್ಣನ ವೀರ ಜ್ಯೋತಿಯು ಮಾರ್ಗ ಮದ್ಯದಲ್ಲಿರುವ ಕಿತ್ತೂರಿಗೆ ಆಗಮಿಸಿದಾಗ ಇಲ್ಲಿಯ ಹೆದ್ದಾರಿ ಪಕ್ಕದ ರಾಣಿ ಚನ್ನಮ್ಮಾ ವೃತ್ತದಲ್ಲಿ ಗುರುವಾರ ಪೂಜೆ ಸಲ್ಲಿಸಿ ಜ್ಯೊತಿಯನ್ನು ಅವರು ಬರಮಾಡಿಕೊಂಡರು. ನಂತರ ಮಾತನಾಡಿದ ಅವರು, ಕಳೆದ 18 ವರ್ಷಗಳಿಂದ ಸ್ಮರಣೋತ್ಸವ ಸಮಿತಿಯವರು ಈ ಸೇವೆಯನ್ನು ಮಾಡುತ್ತಿರುವದು ಮುಂದಿನ ಯುವ ಜನಾಂಗಕ್ಕೆ ಒಳ್ಳೆಯ ಸಂದೇಶವಾಗಿದೆ. ರಾಣಿ ಚನ್ನಮ್ಮಾಜಿಯ ಬಲಗೈಬಂಟ ಸಂಗೊಳ್ಳಿ ರಾಯಣ್ಣನ ಶೌರ್ಯ ತ್ಯಾಗ ಬಲಿದಾನ ಸ್ಮರಣೀಯವಾಗಿದೆ. ಅಂತಹ ವೀರರ ಆದರ್ಶವನ್ನು ಇಂದಿನ ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು ಹಾಗೂ ಪ್ರತಿಯೊಂದು ಮನೆಯಲ್ಲಿಯೂ ರಾಯಣ್ಣನಂತಹ ದಿಟ್ಟವ್ಯಕ್ತಿತ್ವ ಹೊಂದಿದ ವ್ಯಕ್ತಿಗಳು ದೇಶ ಸೇವೆಮಾಡಲು ಹುಟ್ಟಿ ಬರಬೇಕೆಂದರು. ಪಪಂ ಉಪಾಧ್ಯಕ್ಷ ಕಿರಣ ಪಾಟೀಲ ಮಾತನಾಡಿ, ಶೂರತನಕ್ಕೆ ಹೆಸರಾದ ರಾಯಣ್ಣನ್ನು ಸ್ಮರಿಸುವದರ ಜೊತೆಗೆ ಅವರ ಜೀವನದ ಇತಹಾಸವನ್ನು ಬದುಕಿನಲ್ಲಿ ಅಳವಡಿಕೊಳ್ಳಬೇಕು. ನಾಡು,ನುಡಿ ರಕ್ಷಣೆಗೆ ಸದಾ ಸಿದ್ದರಿರಬೇಕೆಂದರು. ಕಲಾವಿದ ಸಿ.ಕೆ ಮೆಕ್ಕೆದ ಮಾತನಾಡಿ, ಕಳೆದ 18 ವರ್ಷಗಳಿಂದ ಜ್ಯೋತಿ ತರುವ ಪವಿತ್ರ ಕಾರ್ಯಕ್ಕೆ ಸಹಕಾರ ನೀಡುತ್ತಿರುವ ಮಾರಿಹಾಳ ಮನೆತನದ ಹಾಗೂ ಕಿತ್ತೂರು ನಾಗರಿಕರ ಮತ್ತು ಸಂಘ ಸಂಸ್ಥೆಗಳ ಕಾರ್ಯ ಶ್ಲಾಘನೀಯವೆಂದು ಹೇಳಿದರು. ಉಪ ತಹಶೀಲ್ದಾರ ಆರ್.ಎಸ್. ಮಾನೆ, ಸ್ಮರಣೋತ್ಸವ ಸಮೀತಿ ಅಧ್ಯಕ್ಷ ರಾಜು ಸೊಗಲ, ವiಹಾಂತೇಶ ತುರಮರಿ, ಈಶ್ವರ ಹೋಟಿ, ಶ್ರೀಶೈಲ ಯಡಳ್ಳಿ, ನಿಂಗಪ್ಪ ತಡಕೋಡ, ಪಪಂ ಸದಸ್ಯರುಗಳಾದ ಹನುಮಂತ ಲಂಗೋಟಿ, ನಾಗೇಶ ಸೊಂಟಕ್ಕಿ, ಮಂಜುನಾಥ ತೊಟ್ಟಲಮನಿ,ಅಶೋಕ ಪತಂಗೆ, ವಿಠ್ಠಲ ನಾಗೋಜಿ ಕೃಷ್ಣಾ ಬಾಳೇಕುಂದರಗಿ, ಆಶ್ಪಾಕ ಹವಾಲ್ದಾರ ಸೇರಿದಂತೆ ಪಟ್ಟಣದ ನಾಗರಿಕರು ಹಾಜರಿದ್ದರು.

loading...