ಸಿ.ಸಿ ರಸ್ತೆಗೆ ಭೂಮಿ ಪೂಜೆ

0
17
loading...

ಕನ್ನಡಮ್ಮ ಸುದ್ದಿ-ಗುರ್ಲಾಪೂರ: ಈ ಕಾಮಗಾರಿಯು 10 ಲಕ್ಷ ರೂ. ವೆಚ್ಚದಲ್ಲಿ 4 ಮೀ ಅಗಲ 1.84 ಮೀ ಉದ್ದ ಇದ್ದು, ಗುಣಮಟ್ಟದಿಂದ ಕೂಡಿರುತ್ತದೆ. ಮುಂದಿನ ದಿನಗಳಲ್ಲಿ ಗುರ್ಲಾಪೂರದ ಎಲ್ಲ ರಸ್ತೆಗಳನ್ನು ಸುಧಾರಿಸಲಾಗುವುದು ಎಂದು ಪುರಸಭೆಯ ಅಧ್ಯಕ್ಷ ಕಮಲವ್ವ ಹಳಬರ ಹೇಳಿದರು.

ಮೂಡಲಗಿ ಪುರಸಭೆ ವ್ಯಾಪ್ತಿಯ ಗುರ್ಲಾಪೂರದ 23ನೇ ವಾರ್ಡಿನಲ್ಲಿ ಜಿ.ಎಲ್‌.ಬಿ.ಸಿಯ ಅನುದಾನದ ಎಸ್‌.ಸಿ ಕಾಲೋನಿಗೆ ಸಿ.ಸಿ.ರಸ್ತೆಯ ಕಾಮಗಾರಿಯನ್ನು ಮೂಡಲಗಿ ಪುರಸಭೆಯ ಅಧ್ಯಕ್ಷ ಕಮಲವ್ವ ಹಳಬರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ರಾಮಪ್ಪ ನೇಮಗೌಡರ, ಲಕ್ಷ್ಮಣ ಹಳ್ಳೂರ, ಕಾಶವ್ವ ರಂಗಾಪೂರ ಹಾಗೂ ಮಹಾದೇವ ಬಿಳಗಿ, ಕಲ್ಲಪ್ಪ ರಂಗಾಪೂರ, ಮಹಾದೇವ ಟಪಾಲ, ಶಂಕರ ಟಪಾಲ, ಕೆಂಪಣ್ಣ ಇವಕ್ಕಿ, ಮಹಾದೇವಿ ಕಂಬಳಿ, ಗೌರವ್ವ ಕಾಳಪ್ಪಗೋಳ, ಇನ್ನೂ ಅನೇಕರು ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here