ಸೆ. 26 ರಂದು ಹೋರಾಟ ಮಾಡಿದ ರೈತರ ಮೇಲೆ ಪ್ರಕರಣ ದಾಖಲು

0
30
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಮಹದಾಯಿ ನದಿ ತಿರುವು ಯೋಜನೆ ಮತ್ತು ಕಳಸಾ ಬಂಡೂರಿ ಯೋಜನೆ ಜಾರಿಯಾಗಬೇಕು ಎಂದು ಸೆ. 26 ರಂದು ಹೋರಾಟ ಮಾಡಿದ ಸುಮಾರು 45 ಕ್ಕೂ ಹೆಚ್ಚು ರೈತರ ಮೇಲೆ ಪೊಲೀಸ್‌ರು ದಾಖಲು ಮಾಡಿದ್ದಾರೆ.
ತಾಲೂಕಿನ ಹಿರೇಭಾಗೇವಾಡಿಯ ಗ್ರಾಮದ ರೈತರು ಬೈಲಹೊಂಗಲ ರಸ್ತೆಯ ಮೇಲೆ ನೂರಕ್ಕೂ ಹೆಚ್ಚು ರೈತರು ಸೇರಿ ಹೋರಾಟ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಚಲಿಸುವ ವಾಹನಗಳಿಗೆ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಪರಿಸ್ಥಿತಿ ನಿಯಂತ್ರಣ ತರಲು ಪೊಲೀಸರು ಅಲ್ಲಿರುವಂತ ಎಲ್ಲ ರೈತರನ್ನು ಬಂಧಿಸಿ 143, 147, 341 ಪ್ರಕರಣ ದಾಖಲಿಸಿದ್ದಾರೆ.
ಆದರೆ, ಇವರಿಗೆ ಈ ಪ್ರಕರಣ ದಾಖಲಾಗಿದ್ದ ಕೆಲ ರೈತರಿಗೆ ಜಾಮೀನು ನೀಡುವುದಾಗಿ ನ್ಯಾಯಲಯದಿಂದ ಸಮನ್ಸ್‌ ಜಾರಿಯಾಗಿದೆ. ಮಾಹಿತಿ ತಿಳಿದ ರೈತರು ನ್ಯಾಯಾಲಯಕ್ಕೆ ಆಗಮಿಸಿ ನ್ಯಾಯಲಯದ ಸಮನ್ಸ್‌ ಜಾರಿಯಾಗಿರುವ ಹಿನ್ನಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾದರು. ದಾಖಲಾಗಿರುವ ರೈತರ ಸಂಖ್ಯೆ ಕಡಿಮೆ ಇದ್ದುದ್ದರಿಂದ, ರೈತರು ಹಾಜರಾತಿ ವಿನಾಯಿತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶರು ಈ ಅರ್ಜಿಗೆ ಮಣ್ಣಣೆ ಸಲ್ಲಿಸಿ ಇವರಿಗೆ ಮೇ ತಿಂಗಳ ವರೆಗೂ ಪ್ರಕರಣವನ್ನು ಮುಂದೆ ಹಾಕಿದ್ದಾರೆ ಎಂದು ವಕೀಲರು ತಿಳಿಸಿದರು.

loading...

LEAVE A REPLY

Please enter your comment!
Please enter your name here