’04ಆರ್‌ಎಂಡಿ.1 ರಸ್ತೆ ಕಾಮಗಾರಿಯು ಆಮೇಗತಿಯಲ್ಲಿ ನಡೆಯುತ್ತಿರುವುದರಿಂದ ಜನರ ಆಕ್ರೋಶ

0
197
loading...

ರಾಮದುರ್ಗ: ಸ್ಥಳೀಯ ಎ.ಪಿ.ಎಂ.ಸಿ ಮುಂದೆ ಇರುವ ಮುಖ್ಯ ರಸ್ತೆ ಕಾಮಗಾರಿಯು ಆಮೇಗತಿಯಲ್ಲಿ ಸಾಗುತ್ತಿರುವುದರಿಂದ ಅಕ್ಕ ಪಕ್ಕದ ಮನೆಯಲ್ಲಿ ವಾಸವಾಗಿರುವ ನಿವಾಸಿಗಳು ಬುಧವಾರ ಬೆಳಿಗ್ಗೆ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದರು. ಪ್ರತಿ ದಿನ ದೂಳು ಬರುವದರಿಂದ ಇಲ್ಲ ವಾಸವಾಗಿರುವ ಜನರಿಗೆ ತುಂಬಾ ತೊಂದರೆ ಯಾಗುತ್ತಿದೆ.ದೂಳಿನಿಂದ ಮಕ್ಕಳು. ವಯಸ್ಸಾದ ವೃದರಿಗೂ ಉಸಿರಾಟದಲ್ಲಿ ತುಂಬಾ ತೊಂದರೆ ಯಾಗುತ್ತಿದೆ.ಕಳೆದ ಎರಡು ತಿಂಗಳಿನಿಂದ ರಸ್ತೆ ಕಾಮಗಾರಿಯು ಪ್ರಾರಂಭವಾದರೂ ಕೆಲಸ ಮಾತ್ರ ನಿಧಾನವಾಗಿ ಸಾಗುತ್ತಿದೆ ಆದ್ದರಿಂದ ಅಂಗಡಿ ಮಾಲಿಕರಿಗೆ ಮತ್ತು ವಾಹನ ಸವಾರರಿಗೆ. ರೈತರಿಗೆ ತುಂಬಾ ತೊಂದರೆ ಯಾಗುತ್ತಿದೆ ಕಾರಣ ಬೇಗನೆ ರಸ್ತೆ ಕೆಲಸ ಮುಕ್ತಾಯಗೊಳಿಸಬೇಕು ಇಲವೆಂದರೆ ನಗರದ ಎಲ್ಲ ಜನರು ಬಿದಿಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸಾರ್ವಜನಕರು ಆಕ್ರೋಶ ವ್ಯಕ್ತ ಪಡಿಸಿದರು. ಸ್ಥಳಕ್ಕೆ ದಾವಿಸದ ಮಹಾದೇವಪ್ಪ ಯಾದವಾಡ ಈ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಪುರಸಭೆಯ ಸದಸ್ಯ ಅಶೋಕ ಸೂಳಿಭಾವಿ ಆಗಮಿಸಿ ಸಾರ್ವಜನಿಕರಿಗೆ ತೊಂದರೆ ಯಾಗದಂತೆ ಹಾಗೂ ದೂಳು ಏಳದಂತೆ ನೀರನ್ನು ಹಾಕಲಾಗುವುದು ರಸ್ತೆ ಮುಗಿಯುವರೆ ಸಾರ್ವಜನಿಕರು ಸಹಕರಿಸಬೇಕು ಎಂದು ಪ್ರತಿಭಟನಾ ನೀರತ ಜನರ ಸಮಾಧಾನ ಪಡಿಸಿದರು.ರಂಗನಾಥ ಹೂಗಾರ.ಶ್ರೀನಿಧಿ ಸಪ್ಪಳೀಗಾ.ಈಶ್ವರ ತೊಟಗೇರ ಸೇರಿದಂದತೆ ಅನೇಕರು ಇದ್ದರು.

ಪೋಟೊ ಶೀರ್ಷಿಕೆ: 04ಆರ್‌ಎಂಡಿ.1 ಸ್ಥಳೀಯ ಎ.ಪಿ.ಎಂ.ಸಿ ಮುಂದೆ ಇರುವ ಮುಖ್ಯ ರಸ್ತೆ ಕಾಮಗಾರಿಯು ಆಮೇಗತಿಯಲ್ಲಿ ಸಾಗುತ್ತಿರುವುದರಿಂದ ಅಕ್ಕ ಪಕ್ಕದ ಮನೆಯಲ್ಲಿ ವಾಸವಾಗಿರುವ ನಿವಾಸಿಗಳು ಬುಧವಾರ ಬೆಳಿಗ್ಗೆ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದರು.

loading...

LEAVE A REPLY

Please enter your comment!
Please enter your name here